More

    ನವರಾತ್ರಿ ಉತ್ಸವ: ದುರ್ಗಾ ಪೆಂಡಾಲ್​ಗೆ ನಿಯಮ ಸಡಿಲಿಸಿದ ಕೋರ್ಟ್​

    ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಉತ್ಸವ ನಾಡಹಬ್ಬದಂತೆ ಆಚರಿಸಲ್ಪಡುತ್ತದೆ. ಅಲ್ಲಿ ಗುರುವಾರದಿಂದ ದುರ್ಗಾ ಪೂಜೆ ಆರಂಭವಾಗುತ್ತಿದ್ದು, ದುರ್ಗಾ ಪೂಜೆಯ ಪೆಂಡಾಲ್​ ಕಾರ್ಯಕ್ರಮದಲ್ಲಿ ಗರಿಷ್ಠ 45 ಜನರಿಗಷ್ಟೇ ಪ್ರವೇಶಾವಕಾಶ ನೀಡಬಹುದು ಎಂದು ಕಲ್ಕತಾ ಹೈಕೋರ್ಟ್​ ಬುಧವಾರ ಆದೇಶಿಸಿದೆ.

    ಪೆಂಡಾಲ್​ನ ಗಾತ್ರಕ್ಕನುಸಾರವಾಗಿ ಒಂದೇ ಸಮಯದಲ್ಲಿ ಒಳಪ್ರವೇಶಿಸುವವರ ಸಂಖ್ಯೆಯಲ್ಲಿ ವ್ಯತ್ಯವಾಗಲಿದೆ. ಸಾಮಾನ್ಯ ಪೆಂಡಾಲ್ ಆದರೆ 45 ಜನರು ಪ್ರವೇಶಿಸಬಹುದು. ಸಣ್ಣ ಪೆಂಡಾಲ್ ಆಗಿದ್ದರೆ 15 ಮಂದಿಗೆಷ್ಟೆ ಅವಕಾಶ. ಪ್ರತಿ ದಿನ ಪೆಂಡಾಲ್ ಒಳಗೆ ಪ್ರವೇಶಿಸುವ ಆಯೋಜಕರ ಹೆಸರನ್ನು ಪಟ್ಟಿ ಮಾಡಿ ಬೆಳಗ್ಗೆ 8 ಗಂಟೆಗೆ ಪೆಂಡಾಲ್ ಹೊರಗೆ ಹಾಕಬೇಕು ಎಂದು ನ್ಯಾಯಾಲಯ ತಿಳಿಸಿದೆ. ವಾದ್ಯಮೇಳಗಳಿಗೆ ‘ನೋ ಎಂಟ್ರಿ ಝೋನ್’ನಲ್ಲಿ ಇರಲು ಹೈಕೋರ್ಟ್ ಪೀಠ ಅವಕಾಶ ನೀಡಿದೆ.

    ಇದನ್ನೂ ಓದಿ:  ಶಿಕ್ಷಣ ವ್ಯಾಪಾರವೇ- ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ?: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್​

    ಸಾರ್ವಜನಿಕರಿಗೆ ಪೆಂಡಾಲ್ ಒಳಗೆ ಪ್ರವೇಶಕ್ಕೆ ಅನುಮತಿ ಇಲ್ಲವೆಂದು ತಿಳಿಸಲಾಗಿದೆ. ದುರ್ಗಾ ಪೂಜೆಯ ಪೆಂಡಾಲ್​ಗಳನ್ನು ‘ನೋ ಎಂಟ್ರಿ ಝೋನ್’ ಎಂದು ಕರೆದಿದ್ದ ನ್ಯಾಯಾಲಯ ಕೇವಲ 25 ಆಯೋಜಕರ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಈ ಹಿಂದೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರಮುಖ 400 ಆಯೋಜಕರ ತಂಡವು ಅರ್ಜಿ ಸಲ್ಲಿಸಿತ್ತು. (ಏಜೆನ್ಸೀಸ್)

    ಪ್ರತಿಸ್ಪರ್ಧಿಗಳನ್ನು ದುರ್ಬಲಗೊಳಿಸುವುದಕ್ಕಾಗಿ ಕಾನೂನು ಬಾಹಿರ ಕಾರ್ಯಾಚರಣೆ ಆರೋಪ: ಗೂಗಲ್ ವಿರುದ್ಧ ದಾವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts