More

    ಗದಗ ನಗರದಲ್ಲಿ ಎಲ್ಲಲ್ಲಿ ನವರಾತ್ರಿ ಉತ್ಸವ

    ನಂದೀಶ್ವರ ಮಠದಲ್ಲಿ ದೇವಿ ಪುರಾಣ
    ಗದಗ: ನಗರದ ನಂದೀಶ್ವರ ಮಠದಲ್ಲಿ ದಸರಾ ನಿಮಿತ್ಯ ಬೆಳಗ್ಗೆ ಅ.15 ರಂದು ಬಳಗ್ಗೆ 8.30ಕ್ಕೆ ದೇವಿ ಘಟ ಸ್ಥಾಪನೆ, ಸಂಜೆ 6ರಿಂದ 9ರ ವರೆಗೆ ಪುರಾಣ ಪ್ರವಚನ ಜರುಗುವುದು. ಅಭಿನವ ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

    ಮರಾಠಾ ವಿದ್ಯಾವರ್ಧಕ ಸಂದಿಂದ ದಸರಾ ಉತ್ಸವದ ಕಾರ್ಯಕ್ರಮ: ನಗರದ ಮರಾಠಾ ವಿದ್ಯಾವರ್ಧಕ ವತಿಯಿಂದ ಅ.15 ರಂದು ಬೆಳಗ್ಗೆ 6.30ಕ್ಕೆ ದುರ್ಗಾ ದೌಡ್​ ಕಾರ್ಯಕ್ರ, ಶ್ರೀದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆಯೊಂದಿಗೆ ನವರಾತ್ರಿ ಉತ್ಸವ ಆರಂಭವಾಗುವುದು. ಸಂಜೆ ಘಟ ಸ್ಥಾಪನೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.

    ಹಳೇಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ಗದಗ: ನಗರದ ಬೆಟಗೇರಿ ಭಾಗದ ಹಳೇಬನಶಂಕರಿದೇವಿ ದೇವಸ್ಥಾನದಲ್ಲಿ ಅ.15 ರಂದು ಸಂಜೆ ಘಟ ಸ್ಥಾಪನೆ, ಶ್ರೀದೇವಿಗೆ ಪಂಚಾಮೃತ ಅಭಿಷೇಕ ವಿಶೇಷ ಪೂಜೆಯೊಂದಿಗೆ ನವರಾತ್ರಿ ಉತ್ಸವ ಪ್ರಾರಂಭವಾಗುವುದು ಎಂದು ಪ್ರಕಟಣೆ ತಿಳಿಸಿದೆ.

    ಅಡವೀಂದ್ರ ಸ್ವಾಮಿ ಮಠದಲ್ಲಿ ದಸರಾ ಜಾತ್ರಾ ಕಾರ್ಯಕ್ರಮ:
    ಗದಗ: ನಗರದ ಅಡವೀಂದ್ರ ಸ್ವಾಮಿ ಮಠದಲ್ಲಿ ಅ.15 ರಂದು ಬೆಳಗ್ಗೆ 9 ಗಂಟೆಗೆ ದಸರಾ ಮಹೋತ್ಸವ, ಶ್ರೀದೇವಿ ಪುರಾಣ ಪ್ರವಚನ, ಅನ್ನಪೂರ್ಣೆಶ್ವರಿ ದೇವಿ ಮಹಾರಥೋತ್ಸವದ ಮತ್ತು ಧ್ವಜಾರೋಹಣ ಜರುಗುವುದು. ಅಡ್ನೂರಿನ ಅಭಿನವ ಪಂಚಾರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸುವರು. ಜೊಸಳ್ಳಿಮಠ ಮಹೇಶ್ವರ ಶ್ರೀಗಳು ಸಮ್ಮುಖ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

    ಗಾಗಿರ್ ಪೇಟೆ ಈಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
    ಗದಗಖ ನಗರದ ಬೆಟಗೇರಿ ಭಾಗದ ಗಾಗಿರ್ಪೇಟೆಯ ಈಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅ.15 ರಂದು ಸಂಜೆ 5 ಗಂಟೆಗೆ ದೇವಿ ಮೆರವಣಿಗೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts