More

    ಮೂಕ ಭಾಷೆ ಕಲಿಸಿ ನಂತರ ಜೀವಾವಧಿ ಶಿಕ್ಷೆ ವಿಧಿಸಿತು ಕೋರ್ಟ್!  

    ಬೆಂಗಳೂರು : ಆತ ಕಿವುಡ. ಸಂವಹನದ ತೊಂದರೆ ಬಹಳವಾಗಿ ಕಾಡಿತ್ತು. ಇದೇ ಕಾರಣಕ್ಕೆ ಕೋರ್ಟ್​ ಆತನಿಗೆ ಮೂಕ ಭಾಷೆ ಕಲಿಸುವುದಕ್ಕೆ ವ್ಯವಸ್ಥೆ ಮಾಡಿತ್ತು. ಆತ ಮಾಡಿದ ಅಪರಾಧಕ್ಕೆ ಕೋರ್ಟ್ ಈಗ ಜೀವಾವಧಿ ಶಿಕ್ಷೆಯನ್ನೂ ವಿಧಿಸಿದೆ!

    65ನೇ ಸಿಟಿ ಸಿವಿಲ್-ಸೆಷನ್ ಕೋರ್ಟಿನಲ್ಲಿ ವಿಚಾರಣೆಯಲ್ಲಿದ್ದ ಪ್ರಕರಣ ಇದು. ಅಪರಾಧಿ ಹೊಂಗ ಸಂದ್ರದ ರಾಮಲಿಂಗಪ್ಪ (48). ಕಿವುಡ. ಸಂವಹನ ಕಷ್ಟವಾಗಿತ್ತು. ಇದೇ ಕಾರಣದಿಂದ ದೊಡ್ಡದೊಂದು ಅಪರಾಧವನ್ನೂ ಎಸಗಿದ್ದ. ಅತ್ತೆಯನ್ನು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಕೋರ್ಟ್​ ಈಗ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2012ರ ಜುಲೈ 7ರಂದು ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ರಾಮಲಿಂಗಪ್ಪ ತನ್ನ ಅತ್ತೆ ವೆಂಕಟಲಕ್ಷ್ಮಮ್ಮ ಎಂಬಾಕೆಯನ್ನು ಕೊಲೆ ಮಾಡಿದ್ದ ಎಂದು ಆಡುಗೋಡಿ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಎಂಟು ವರ್ಷಗಳ ನಂತರ ಕಲ್ಯಾಣ್​ ಜಿಆರ್​ಪಿನಲ್ಲಿ ಸಿಕ್ತು ಕಳುವಾಗಿದ್ದ ಚಿನ್ನದ ಎರಡು ಸರಗಳು!

    ಕೂಲಿ ಕಾರ್ವಿುಕ ರಾಮಲಿಂಗಪ್ಪ, ಹೊಂಗಸಂದ್ರದಲ್ಲಿ ತನ್ನ ಪತ್ನಿ ಲಕ್ಷ್ಮಿದೇವಮ್ಮ ಜತೆ ನೆಲೆಸಿದ್ದ. ಕಿವುಡನಾಗಿದ್ದ ರಾಮಲಿಂಗಪ್ಪ ಮಾತುಗಳನ್ನು ತೊದಲುತ್ತಿದ್ದ. 2012ರ ಜುಲೈ 7ರ ರಾತ್ರಿ ಮಗಳನ್ನು ತವರಿಗೆ ಕರೆದುಕೊಂಡು ಹೋಗಲು ವೆಂಕಟಲಕ್ಷ್ಮಮ್ಮ, ಅಳಿಯನ ಮನೆಗೆ ಬಂದಿದ್ದಳು. ಇದೇ ವಿಚಾರಕ್ಕೆ ಅಳಿಯ ಮತ್ತು ಅತ್ತೆ ನಡುವೆ ಜಗಳ ಆರಂಭವಾಗಿತ್ತು. ಬೇಸರಗೊಂಡ ಲಕ್ಷ್ಮಿದೇವಮ್ಮ, ಪಕ್ಕದ ಮನೆಗೆ ಹೋಗಿ ಮಲಗಿದ್ದಳು. ಇತ್ತ ಮಾತಿಗೆ ಮಾತು ಬೆಳೆದು ಕಿವುಡ ರಾಮಲಿಂಗಪ್ಪ, ಅತ್ತೆಯ ಭಾಷೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲನಾಗಿ ಚಾಕುವಿಂದ ಚುಚ್ಚಿ ಹತ್ಯೆ ಮಾಡಿದ್ದ. ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ವೆಂಕಟಲಕ್ಷ್ಮಮ್ಮ ಬಿದ್ದಿದ್ದರು. ಪೊಲೀಸರು ಧಾವಿಸಿ ಆರೋಪಿ ರಾಮಲಿಂಗಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

    ಇದನ್ನೂ ಓದಿ: ಹೊಟ್ಟೆಪಾಡಿಗಾಗಿ ಯುವಕ ಆಯ್ದುಕೊಂಡ ಕೆಲಸಕ್ಕೆ ಬೇಸ್ತು ಬಿದ್ರು ಜನ!

    ವಿಚಾರಣೆ ಕೈಗೊಂಡ ನ್ಯಾಯಾಧೀಶರಿಗೆ, ರಾಮಲಿಂಗಪ್ಪನನ್ನು ವಿಚಾರಣೆ ನಡೆಸಲು ಕಷ್ಟಸಾಧ್ಯವಾಗಿತ್ತು. ನ್ಯಾಯಾಲಯ, ಆರೋಪಿಯನ್ನು ಮೂಕ ಭಾಷೆ ಕಲಿಸುವ ಶಾಲೆಗೆ ಸೇರಿಸುವುದಕ್ಕೆ ವ್ಯವಸ್ಥೆ ಮಾಡಿದೆ. ರಾಮಲಿಂಗಪ್ಪ, ಮೂಕ ಭಾಷೆ ಸಂಪೂರ್ಣ ಕಲಿತಿದ್ದಾನೆ ಎಂದು ಗೊತ್ತಾದ ಮೇಲೆ ವಿಚಾರಣೆ ನಡೆಸಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಘೋಷಣೆ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿ 65ನೇ ಸಿಟಿ ಸಿವಿಲ್, ಸೆಷನ್ ಕೋರ್ಟ್ ತೀರ್ಪು ನೀಡಿದೆ.

    ಹೂ ಕೃಷಿಯಲ್ಲಿ ಯಶಸ್ವಿಯಾಗುವುದು ಹೇಗೆ?: ಸಿ.ಎಸ್.ಸುಧೀರ್ ಅವರ ಮನಿಮಾತು ಅಂಕಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts