More

  ಕಳೆದ ತಿಂಗಳಷ್ಟೇ ಮಕ್ಕಳ ಮದುವೆಗೂ ಮುನ್ನಾ ಓಡಿ ಹೋಗಿದ್ದ ಬೀಗ-ಬೀಗತಿ ಮತ್ತೊಮ್ಮೆ ನಾಪತ್ತೆ!

  ಸೂರತ್​: ಒಂದು ತಿಂಗಳು ಹಿಂದಷ್ಟೇ ತಮ್ಮ ಮಕ್ಕಳ ಮದವೆಗೂ ಮುನ್ನಾ ಓಡಿ ಹೋಗಿ, ಒಂದು ವಾರದ ಬಳಿಕ ಮತ್ತೆ ಕುಟುಂಬ ಸೇರಿದ್ದ ಬೀಗ-ಬೀಗತಿ ಇದೀಗ ಮತ್ತೊಮ್ಮೆ ನಾಪತ್ತೆಯಾಗಿದ್ದಾರೆ ಎಂದು ಭಾನುವಾರ ವರದಿಯಾಗಿದೆ.

  ಸೂರತ್​ ಮೂಲದ ಹಿಮ್ಮತ್​ ಪಾಂಡವ್​(46) ಮಗನಿಗೂ ಹಾಗೂ ನವಸಾರಿ ಮೂಲದ ಶೋಭನಾ ರಾವಲ್​(43) ಮಗಳಿಗೂ ಜನವರಿಯಲ್ಲೇ ಮದುವೆ ನಿಶ್ಚಯವಾಗಿತ್ತು. ವಿವಾಹ ಸಮಾರಂಭದ ಸಿದ್ಧತೆಯಲ್ಲಿದ್ದ ಎರಡು ಕುಟುಂಬಗಳಿಗೂ ಅಕ್ಷರಶಃ ಶಾಕ್​ ಎದುರಾಗಿತ್ತು. ಹಿಮ್ಮತ್​ ಪಾಂಡವ್,​ ಬೀಗತಿ ಶೋಭನಾ ರಾವಲ್​ ಜತೆ ಮದುವೆಗೂ ಮುನ್ನ ಓಡಿ ಹೋಗಿದ್ದರು.

  ಇದನ್ನೂ ಓದಿ: ವರನ ತಂದೆಯೊಂದಿಗೆ ವಧುವಿನ ತಾಯಿ ಪರಾರಿ: ಮದುವೆ ತಯಾರಿಯಲ್ಲಿದ್ದ ಎರಡು ಕುಟುಂಬಕ್ಕೂ ಶಾಕ್​​!

  ಎರಡು ವಾರದ ಬಳಿಕ ಇಬ್ಬರು ತಮ್ಮ ಮನೆಗಳಿಗೆ ಹಿಂತಿರುಗಿದ್ದರು. ಇದೀಗ ಮತ್ತೊಮ್ಮೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಇಬ್ಬರು ಮನೆಯನ್ನು ಬಿಟ್ಟಿದ್ದಾರೆ. ಅವರಿಬ್ಬರು ಸೂರತ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಕಳೆದ ಬಾರಿ ನಾಪತ್ತೆ ದೂರು ದಾಖಲಾಗಿತ್ತು. ಆದರೆ, ಈ ಬಾರಿ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ​

  ಅಂದಹಾಗೆ ಹಿಮ್ಮತ್​ ಪಾಂಡವ್​ ಸೂರತ್​ನ ಕತರ್​ಗಾಮ್​ನಲ್ಲಿ ಜವಳಿ ಉದ್ಯಮಿಯಾಗಿದ್ದಾರೆ. ಶೋಭನಾ ಗೃಹಣಿಯಾಗಿದ್ದರು. ಇಬ್ಬರ ಮಕ್ಕಳ ಮದುವೆ ಫೆಬ್ರವರಿ ಎರಡನೇ ವಾರದಲ್ಲಿ ನಿಗದಿಯಾಗಿತ್ತು. ಈ ಮುಂಚೆ ಜನವರಿ 10ರಿಂದ ಅವರಿಬ್ಬರು ಕಾಣೆಯಾಗಿದ್ದರೆ ದೂರು ನೀಡಲಾಗಿತ್ತು. ಒಂದು ವಾರದ ಬಳಿಕ ಮರಳಿ ಬಂದಿದ್ದರು. ಇದೀಗ ಮತ್ತೆ ನಾಪತ್ತೆಯಾಗಿದ್ದು ಎರಡು ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

  ಇದನ್ನೂ ಓದಿ: ವರನ ತಂದೆಯಂದಿಗೆ ವಧುವಿನ ತಾಯಿ ನಾಪತ್ತೆ ಪ್ರಕರಣ: ಓಡಿಹೋಗಿದ್ದ ಜೋಡಿ ಏಕಾಏಕಿ ಪೊಲೀಸರಿಗೆ ಶರಾಣಾಗಿದ್ದೇಕೆ?

  ಚಿಕ್ಕಂದಿನಿಂದಲೇ ಪರಿಚಯವಿತ್ತು
  ಹಿಮ್ಮತ್​ ಪಾಂಡವ್​ ಹಾಗೂ ಶೋಭನಾ ರಾವಲ್​​ ಮೊದಲೇ ಪರಿಚಿತರಾಗಿದ್ದರು. ಅವರಿಬ್ಬರು ಬಾಲ್ಯ ಸ್ನೇಹಿತರಾಗಿದ್ದರು ಎಂದು ಕಳೆದ ಬಾರಿಯೇ ಪೊಲೀಸ್​ ತನಿಖಾ ವೇಳೆ ವೇಳೆ ತಿಳಿದುಬಂದಿತ್ತು. ಬಹಳ ಹಿಂದೆ ಇಬ್ಬರು ಸೂರತ್​ ನಗರದ ಕತರಾಮ್​ ಏರಿಯಾದಲ್ಲಿ ಅಕ್ಕಪಕ್ಕದ ಮನೆಯವರಾಗಿದ್ದರು. ಅನೇಕ ಬಾರಿ ಓಡಿಹೋಗಿ ಮದುವೆ ಮಾಡಿಕೊಳ್ಳಲು ಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಬಳಿಕ ಆಕೆಯನ್ನು ಡೈಮಂಡ್​ ದಲ್ಲಾಳಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts