More

    ಚಲಿಸುತ್ತಿರುವ ವಿಮಾನದಲ್ಲೇ ಮದುವೆಯಾದ ಜೋಡಿ! ಇದಕ್ಕೆ ಕಾರಣ ಇಲ್ಲಿದೆ

    ನ್ಯೂಯಾರ್ಕ್​: ಬಹು ದಿನದ ಆಸೆಯಂತೆ ಜೋಡಿಯೊಂದು ತಮ್ಮ ಮದುವೆಯನ್ನು ವಿಮಾನದಲ್ಲಿ ಮಾಡಿಕೊಳ್ಳುವ ಮೂಲಕ ಮದುವೆ ಬಗ್ಗೆ ಇಟ್ಟುಕೊಂಡಿದ್ದ ಕನಸನ್ನು ನನಸಾಗಿಸಿಕೊಂಡಿದ್ದಾರೆ.

    ಹೌದು… ಅಮೆರಿಕದ ಒಕ್ಲಾಹೊಂ ನಗರದ ಈ ಜೋಡಿ ಚಲಿಸುತ್ತಿರುವ ವಿಮಾನದಲ್ಲಿ ವಿವಾಹ ಬಂಧನಕ್ಕೊಳಗಾಗಿದ್ದಾರೆ. ವಿಮಾನದಲ್ಲೇ ಮದುವೆಯಾಗಲು ಕಾರಣವೂ ಇದೆ. ಅದೇನೆಂದರೆ, ಪಾಮ್​ ಪ್ಯಾಟರ್​ಸನ್​ ಮತ್ತು ಜೆರಿಮಿ ಸಾಲ್ಡಾ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಪಾಮ್​ ತನ್ನ ಗೆಳತಿ ಆಸೆಯಂತೆ ತಮ್ಮಿಬ್ಬರ ಮದುವೆ ದಿನವನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಇರಬೇಕು ಎಂದು ಹೇಳಿದ್ದನ್ನು ನಿಜವಾಗಿಯೂ ವಿಮಾನದಲ್ಲಿ ಮದುವೆಯಾಗುವ ಮೂಲಕ ಉಡುಗೊರೆ ನೀಡಿದ್ದಾರೆ.

    ಮದುವೆಯಾಗುವ ಬಗ್ಗೆ ಈಕೆಗೆ ತಿಳಿದಿರಲಿಲ್ಲ. ಈ ಮುಂಚೆಯೇ ಟಿಕೆಟ್​ ಬುಕ್​ ಮಾಡಿ, ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿತ್ತು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗಲೇ ತಾನು ಇಲ್ಲೇ ಮದುವೆಯಾಗುತ್ತಿರುವುದಾಗಿ ಹೇಳಿದಾಗ ಆಕೆಗೆ ತುಂಬಾ ಸಂತೋಷವಾಯಿತು. ಹಾಗೆ ಆಕೆಯ ಕನಸನ್ನು ಈಡೇರಿಸಿದಂತಾಯಿತು ಎಂದು ಪಾಮ್​ ಹೇಳಿಕೊಂಡಿದ್ದಾರೆ.

    10 ವರ್ಷಗಳ ಬಳಿಕ ಮಕ್ಕಳ ಮುಂದೆಯೇ ಮೂವರು ಮಹಿಳೆಯರನ್ನು ವರಿಸಿದ, ಮದುಮಗನ ಡ್ಯಾನ್ಸ್​ ವಿಡಿಯೋ ವೈರಲ್​

    ಮರ ಕಡಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts