More

    ಮದುಮಕ್ಕಳು ನೀಡಿದರು ಅಪೂರ್ವ ಉಡುಗೊರೆ- ಶ್ಲಾಘನೆಗಳ ಮಹಾಪೂರ

    ಮುಂಬೈ: ಮದುವೆಯ ಸಮಯದಲ್ಲಿ ಮದುಮಕ್ಕಳಿಗೆ ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಮದುಮಕ್ಕಳೇ ಉಡುಗೊರೆ ನೀಡಿದ್ದಾರೆ. ಈ ಉಡುಗೊರೆಯಿಂದಾಗಿ ಇದೀಗ ಮದುಮಕ್ಕಳಿಗೆ ಎಲ್ಲೆಡೆಯಿಂದ ಭಾರಿ ಶ್ಲಾಘನೆಯೂ ವ್ಯಕ್ತವಾಗುತ್ತಿದೆ.

    ಮಹಾರಾಷ್ಟ್ರ ವಸಯ್‌ ಪ್ರದೇಶದ ನಂದಕಲ್‌ ಗ್ರಾಮದ ಎರಿಕ್‌ ಲೋಬೊ (28) ಮತ್ತು ಎರಿಕ್‌ ಆಂಟನ್‌ (27)ನವದಂಪತಿ ಸತ್ಪಾಲಾ ಗ್ರಾಮದಲ್ಲಿರುವ ಕೋವಿಡ್ ಆಸ್ಪತ್ರೆಗೆ 50 ಹಾಸಿಗೆ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡಿದ್ದಾರೆ. ಈ ರೀತಿ ಮಾನವೀಯ ಉಡುಗೊರೆ ನೀಡುವ ಮೂಲಕ ಬಹು ಶ್ಲಾಘನೆ ಗಳಿಸಿದ್ದಾರೆ.

    ಇದನ್ನೂ ಓದಿ: ಮೂವತ್ತು ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ; ಇಬ್ಬರು ಕ್ವಾರಂಟೈನ್ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ

    ಕ್ರೈಸ್ತ ಸಮುದಾಯಕ್ಕೆ ಸೇರಿರುವ ಈ ಮದುಮಕ್ಕಳು ಸಾಮಾನ್ಯ ದಿನಗಳಲ್ಲಿ ಮದುವೆಯಾಗಿದ್ದರೆ ಎರಡು ಸಾವಿರಕ್ಕೂ ಅಧಿಕ ಜನರು ಸೇರುತ್ತಿದ್ದರಂತೆ. ಅಷ್ಟೇ ಅಲ್ಲದೇ ಕ್ರೈಸ್ತ ಸಮಯದಾಯದ ಫಂಕ್ಷನ್‌ಗಳಲ್ಲಿ ಕಡ್ಡಾಯವಾಗಿ ಇರುವ ವೈನ್ ಹಾಗೂ ಭರ್ಜರಿ ಊಟಕ್ಕೂ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿತ್ತು. ಇಷ್ಟೆಲ್ಲಾ ಹಣವನ್ನು ಒಂದು ಮದುವೆಗಾಗಿ ವ್ಯರ್ಥ ಮಾಡುವ ಬದಲು ಕರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಸೋಂಕಿತರಿಗೆ ನೆರವಾಗಬಹುದಲ್ಲ ಎಂದೆನಿಸಿ ಈ ಕಾರ್ಯ ಮಾಡಿರುವುದಾಗಿ ಜೋಡಿ ಹೇಳಿದೆ.

    ಕೇವಲ 22 ಜನರ ಸಮ್ಮುಖದಲ್ಲಿ ಮದುವೆಯಾದ ಜೋಡಿ, ಲಾಕ್‌ಡೌನ್‌ನ ಎಲ್ಲಾ ನಿಯಮಗಳನ್ನೂ ಪಾಲಿಸಿದೆ. 22 ಮಂದಿಯಷ್ಟೇ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮದುಮಕ್ಕಳು ಸೇರಿದಂತೆ ಎಲ್ಲರೂ ಮಾಸ್ಕ್‌ ಧರಿಸಿದ್ದರು, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಲಾಗಿತ್ತು, ಮದುವೆಯ ನಂತರ ಆಸ್ಪತ್ರೆಗೆ ಬೆಡ್‌ ಮತ್ತು ಆಕ್ಸಿಜನ್ ಸಿಲಿಂಡರ್ ದಾನ ಮಾಡಿದರು ಈ ದಂಪತಿ.

    ಈ ದಂಪತಿ ಕಳೆದ ಮಾರ್ಚ್ ತಿಂಗಳಿನಲ್ಲಿ ದೇಣಿಗೆ ನೀಡುವ ಕುರಿತು ಶಾಸಕ ಕ್ಷಿತಿಜಿ ಠಾಕೂರ್ ಬಳಿ ಪ್ರಸ್ತಾಪ ಮಾಡಿದ್ದರು. ವಿಷಯವನ್ನು ಜಿಲ್ಲಾಧಿಕಾರಿ ಡಾ. ಕೈಲಾಸ್ ಶಿಂಧೆ ಅವರ ಗಮನಕ್ಕೆ ತರಲಾಗಿತ್ತು. ಅವರು ಇದಕ್ಕೆ ಅನುಮತಿ ನೀಡಿದ್ದರು.

    ಆ ನಂತರ ಜೋಡಿ ವಾಸೈನಲ್ಲಿರುವ ಆಸ್ಪತ್ರೆಯ ಬೆಡ್ ತಯಾರು ಮಾಡುವವರ ಬಳಿ ಹೋಗಿ ಹಾಸಿಗೆ, ಹೊದಿಕೆ, ತಲೆದಿಂಬು, ಬೆಡ್‍ಶೀಟ್ ಹಾಗೂ ಇತರ ಅಗತ್ಯ ವಸ್ತುಗಳ ಗುಣಮಟ್ಟದ ಹಾಸಿಗೆ ತಯಾರು ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್‌)

    ತಲೆನೋವೇ ಈಕೆಗೆ ಅದೃಷ್ಟವಾಯ್ತು! ರಾತ್ರೋರಾತ್ರಿ ಆದ್ಳು ಕೋಟ್ಯಧಿಪತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts