More

    ರಾತ್ರೋರಾತ್ರಿ ಸಿನಿಮಾ ಹಾಲ್​ಗೆ ನುಗ್ಗಿ ಸ್ನ್ಯಾಕ್ಸ್​​ ಕದ್ದು ತಿಂದು, ಸೆಕ್ಸ್​ ಮಾಡಿ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ದಂಪತಿ!

    ಮಾಸ್ಕೋ: ರಾತ್ರೋರಾತ್ರಿ ನಿರ್ಜನ ಸಿನಿಮಾ ಹಾಲ್​ಗೆ ನುಗ್ಗಿದ ದಂಪತಿ ಪಾಪ್​ಕಾರ್ನ್​ ಕದ್ದು ತಿಂದಿದ್ದಲ್ಲದೆ, ಚಿತ್ರಮಂದಿರದ ಒಳಗೆ ಸೆಕ್ಸ್​ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದ್ದು, ದಂಪತಿಯ ಇಡೀ ಚಲನಾವಲನ ಸಿಸಿಟಿವಿಯಲ್ಲಿ ದಾಖಲಾಗಿದೆ.

    ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ರಷ್ಯಾದ ಸೇಂಟ್​ ಪೀಟರ್​ಬರ್ಗ್​ನಲ್ಲಿ ಲಾಕ್​ಡೌನ್​ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಇದನ್ನೇ ಬಂಡವಾಳವಾಗಿಸಿಕೊಂಡ ದಂಪತಿ ಮಾರ್ಚ್​ 18ರಂದು ಸೌಥ್​ ಪೋಲ್​ ಶಾಪಿಂಗ್​ ಕೇಂದ್ರದಲ್ಲಿರುವ ಕಿನೊಗ್ರಾಡ್​ ಸಿನಿಮಾ ಹಾಲ್​​ಗೆ ರಾತ್ರೋರಾತ್ರಿ ನುಗ್ಗಿದ್ದಾರೆ.

    ಇದನ್ನೂ ಓದಿರಿ: ಸಲೂನ್​ ಹುಡುಗನ ಮರ್ಮಾಂಗ ಸ್ಪರ್ಶಿಸಿದ ಲಾಯರ್​: ದೂರಿನಲ್ಲಿ ವಕೀಲನ ಕರಾಳ ಮುಖ ಅನಾವರಣ!

    ಸಿಸಿಟಿವಿ ದೃಶ್ಯದಲ್ಲಿರುವಂತೆ ಮೊದಲು ಪಾಪ್​ಕಾರ್ನ್​ ಕದಿಯುವ ದಂಪತಿ, ಸ್ಕ್ರೀನಿಂಗ್​ ರೂಮ್​ಗೆ ಹೋಗುವ ಮುನ್ನ ಫುಡ್​ ಕೌಂಟರ್​ನಿಂದ ಪಾನೀಯ ಕದ್ದು ಕುಡಿಯುತ್ತಾರೆ. ಮತ್ತೆ ಕೌಂಟರ್​ನಿಂದ ಎರಡು ಬಕೆಟ್​ ತೆಗೆದುಕೊಳ್ಳುವ ದಂಪತಿ ಪಾಪ್​ಕಾರ್ನ್​ ತುಂಬಿಸಿಕೊಳ್ಳುತ್ತಾರೆ. ಬಳಿಕ ಸ್ಕ್ರೀನಿಂಗ್​ ರೂಮ್​ಗೆ ಪ್ರವೇಶಿಸುವ ದಂಪತಿ ಅಲ್ಲಿಯೇ ಬೆತ್ತಲೆಯಾಗಿ ಸರಸ ಸಲ್ಲಾಪದಲ್ಲಿ ತೊಡಗಿಕೊಳ್ಳುತ್ತಾರೆ.

    ಇದಾದ ಮರುದಿನ ಬೆಳಗ್ಗೆ ಭದ್ರತಾ ಸಿಬ್ಬಂದಿಗೆ ತಿಳಿಯದಂತೆ ಸಿನಿಮಾ ಕೇಂದ್ರ ಹೊರ ಹೋಗುತ್ತಾರೆ. ದಂಪತಿ ಹೊರ ಹೋಗುವ ಮುನ್ನ ಸಿನಿಮಾ ಕೇಂದ್ರವನ್ನು ಸ್ವಚ್ಛಗೊಳಿಸಿ ಹೋಗಿರುವುದಾಗಿ ಸಿನಿಮಾ ಕೇಂದ್ರದ ವಕ್ತಾರ ತಿಳಿಸಿದ್ದಾರೆ. ಇದೀಗ ಚಿತ್ರಮಂದಿರದವರು ಅವರಿಗೆ ಉಚಿತವಾಗಿ ಟಿಕೆಟ್​ ನೀಡಲು ಮುಂದಾಗಿರುವುದು ಅಚ್ಚರಿಯ ಸಂಗತಿಯೇ ಸರಿ.

     

    View this post on Instagram

     

    A post shared by КИНОТЕАТР (@kinograd.spb)

    ಆದಾಗ್ಯು ದಂಪತಿಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಬ್ಬರನ್ನು ಖಂಡಿತವಾಗಿ ಶಿಕ್ಷಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ನು ಕೆಲವರು ಸಿನಿಮಾ ಕೇಂದ್ರ ಭದ್ರತಾ ವ್ಯವಸ್ಥೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ದಂಪತಿ ವಿರುದ್ಧ ಆಕ್ರೋಶ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ಕಸದ ತೊಟ್ಟಿ ಬಳಿ ಬೀದಿ ನಾಯಿ ಜತೆ ಕಾಣಿಸಿಕೊಂಡ ದಿಗ್ಗಜರು ಚಿತ್ರದ ಖಳನಾಯಕ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

    ಮ್ಯಾನ್ಮಾರ್​ ರಾಜಕೀಯ ವಿಪ್ಲವದಿಂದಾಗಿ ಭಾರತದಲ್ಲಿ ದುಬಾರಿಯಾಗಲಿದೆ ಇಡ್ಲಿ, ದೋಸೆ..!

    ನೈಟ್​ ಶಿಫ್ಟ್​ ಮುಗಿಸಿ ಮನೆಗೆ ತೆರಳುತ್ತಿದ್ದವರ ಮೇಲೆ ಮೃತ್ಯವಿನಂತೆ ಬಂದೆರಗಿದ ಮರ್ಸಿಡೀಸ್​..!

    6 ತಿಂಗಳ ಬಳಿಕ ಕೆರೆಯ ಆಳದಲ್ಲಿ ಪತ್ತೆಯಾಯ್ತು ಮೊಬೈಲ್​ ಫೋನ್​: ಸ್ವಿಚ್​ ಆನ್​ ಮಾಡಿದಾಗ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts