More

    ಮಲ್ಲಿಗೆ ಮಾರ್ಗಕ್ಕೆ 31 ಮೀ. ಉದ್ದದ ಯು-ಗರ್ಡರ್​ ಸಿದ್ಧ; ಸಚಿವ ಎಂ.ಬಿ.ಪಾಟೀಲ್​ ಮಾಹಿತಿ

    ಬೆಂಗಳೂರು: ಬೆಂಗಳೂರು ಸಬರ್ಬನ್​ ರೈಲು ಯೋಜನೆ(ಕೆ-ರೈಡ್​)ಯ ಕಾರಿಡಾರ್​-2ರಲ್ಲಿ ಅಳವಡಿಸಲಿರುವ, 31 ಮೀ. ಉದ್ದದ ಯು-ಗರ್ಡರ್​ ಅನ್ನು ದೇವನಹಳ್ಳಿಯಲ್ಲಿರುವ ಕಾಮಗಾರಿ ಸ್ಥಾವರದಲ್ಲಿ (ಕಾಸ್ಟಿಂಗ್​ ಯಾರ್ಡ್​) ಶನಿವಾರ ರಾತ್ರಿ ಸಿದ್ಧಪಡಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್​ ಹೇಳಿದ್ದಾರೆ.

    ದೇಶದ ಉಳಿದ ಮೆಟ್ರೋಗಳಲ್ಲಿ 28 ಮೀ. ಉದ್ದದ ಗರ್ಡರ್​ ತಯಾರಿಸಿರುವುದು ಈವರೆಗಿನ ದಾಖಲೆಯಾಗಿದೆ. ಇದೀಗ ಬೆಂಗಳೂರು ಸಬರ್ಬನ್​ ರೈಲು ಯೋಜನೆ ಮೂಲಕ ಈ ದಾಖಲೆಯನ್ನು ಮುರಿಯಲಾಗಿದೆ. ಯು ಆಕಾರದಲ್ಲಿರುವ 450 ಯು-ಗರ್ಡರ್​ಗಳು ಕಾರಿಡಾರ್-2ರಲ್ಲಿ (ಮಲ್ಲಿಗೆ ಮಾರ್ಗ) ಅಗತ್ಯವಾಗಿವೆ. ಇದನ್ನು ಯಶವಂತಪುರ&ಹೆಬ್ಬಾಳ ನಡುವಿನ 8 ಕಿ.ಮೀ. ಮಾರ್ಗದಲ್ಲಿ ಸದ್ಯದಲ್ಲೆ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ಪ್ರತಿ ಗರ್ಡರ್​ ತಯಾರಿಕೆಗೂ ಎಂ60 ಗುಣಮಟ್ಟದ 69.5 ಕ್ಯೂಬಿಕ್​ ಮೀಟರ್​ ಕಾಂಕ್ರೀಟ್​ ಬೇಕಾಗುತ್ತದೆ. ಇಂತಹ ತೊಲೆಗಳು ತಲಾ 178 ಟನ್​ ಭಾರವಿರುತ್ತವೆ. ಇವುಗಳಿಂದ ಕಾಮಗಾರಿಗೆ ತಗುಲುವ ಸಮಯ ಸಾಕಷ್ಟು ಉಳಿಯಲಿದೆ. ಇದನ್ನು ಆಸ್​ ಸಿಸ್ಟಮ್​ ಕಂಪನಿಯು ಕೆ&ರೈಡ್​ ಯೋಜನೆಗಾಗಿ ವಿನ್ಯಾಸಗೊಳಿಸಿದ್ದು, ಚೆನ್ನೆನ ಐಐಟಿ ಮತ್ತು ಜನರಲ್​ ಕನ್ಸಲ್ಟೆಂಟ್​ ಕಂಪನಿಗಳು ಕೂಡ ಇದರ ಗುಣಮಟ್ಟವನ್ನು ಖಾತ್ರಿಪಡಿಸಿವೆ. ಕೆ&ರೈಡ್​ ಇದರ ಉಸ್ತುವಾರಿ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ನೋಡಿಕೊಂಡಿದೆ. ಇಂತಹ ಗರ್ಡರ್​ ಅಳವಡಿಸುವುದರಿಂದ ನೇರವಾಗಿ ಹಳಿಗಳನ್ನು ಅಳವಡಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts