More

    ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ತೆರೆ; 150 ಕೋಟಿ ರೂ. ವಹಿವಾಟು

    ಬೆಂಗಳೂರು: ಅರಮನೆ ಮೈದಾನದ ತ್ರಿಪುರವಾಸಿಯಲ್ಲಿ ಮೂರು ಕೃಷಿ ಇಲಾಖೆ ವತಿಯಿಂದ ಆಯೋಜನೆಗೊಂಡಿದ್ದ ಮೂರು ದಿನಗಳ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಭಾನುವಾರ ತೆರೆ ಬಿದ್ದಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಮಣಿಪುರ ಸೇರಿದಂತೆ ಒಟ್ಟು 17 ರಾಜ್ಯಗಳ ಸಿರಿಧಾನ್ಯ ಉತ್ಪನ್ನಗಳು ಮೇಳದಲ್ಲಿದ್ದವು. ಮೂರು ದಿನಗಳ ಕಾಲ ನಡೆದ ಮೇಳಕ್ಕೆ ಲಾಂತರ ಮಂದಿ ಭೇಟಿ ನೀಡಿದ್ದು, ರೈತರು ಅಗತ್ಯ ಮಾಹಿತಿಗಳನ್ನು ಪಡೆದುಕೊಂಡರು. ವಾರಾಂತ್ಯವಾಗಿದ್ದರಿಂದ ಹೆಚ್ಚಿನ ಜನಸ್ತೋಮ ಕಂಡು ಬಂತು.

    ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರ ಬುಡುಕಟ್ಟು ವ್ಯವಹಾರಗಳು, ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಅರ್ಜುನ್​ ಮುಂಡಾ ಮಾತನಾಡಿ, ಅತ್ಯಂತ ಪೌಷ್ಟಿಕತೆ ಇರುವಂತಹ ಸಿರಿಧಾನ್ಯಗಳ ಉತ್ಪಾದನೆ, ಬಳಕೆ ಹಾಗೂ ಮೌಲ್ಯ ವರ್ಧನೆಗೆ ಕೇಂದ್ರ ಸರ್ಕಾರದ ವತಿಯಿಂದ ಪ್ರೋತ್ಸಾಹ ನೀಡಲಾಗುವುದು. 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆ ಮಾಡಿಸುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
    ದೇಶದ ಹಲವು ರಾಜ್ಯಗಳಲ್ಲಿ ಕೃಷಿಗೆ ನೀರಿನ‌ ಕೊರತೆ ಇದೆ. ವಿಪರೀತ ರಾಸಾಯನಿಕ ಬಳಸಿ ಭೂಮಿಯ ಸತ್ವ ನಾಶವಾಗುತ್ತಿದೆ. ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬೆಳೆ‌ ಇದಕ್ಕೆ ಪರಿಹಾರವಾಗ ಬಲ್ಲದು ಎಂದು ಅಭಿಪ್ರಾಯಪಟ್ಟರು.

    ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಮಾತನಾಡಿ, ನಮ್ಮ ಪೂರ್ವಜರು ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸುತ್ತಿದ್ದ ಆಹಾರ ಕ್ರಮವನ್ನು, ನಾವೀಗ ಮತ್ತೆ ಅನುಸರಿಸಲು ಆರಂಭಿಸಿದ್ದೇವೆ. ಅದರಲ್ಲಿ ಸಿರಿಧಾನ್ಯವೂ ಒಂದು. ಆರೋಗ್ಯ ಹದಗೆಟ್ಟಾಗ ಮಾತ್ರೆಗಳನ್ನು ಸೇವಿಸುವ ಬದಲು, ನಿತ್ಯ ಸಿರಿಧಾನ್ಯ ಸೇವಿಸುವುದು ಒಳಿತು. ಇದರಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಅಡಗಿವೆ ಎಂದು ಹೇಳಿದರು.

    ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ ಮಾತನಾಡಿ, ಸಾಕಷ್ಟು ಸಮಸ್ಯೆಗಳ ನಡುವೆಯೂ ತಮ್ಮ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಯಶಸ್ವಿಯಾಗಿ ತಲುಪಿಸುವಲ್ಲಿ ನಮ್ಮ ನಾಡಿನ ರೈತರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಾಕಷ್ಟು ಮಾರಾಟಗಾರರು ಮೇಳದಲ್ಲಿ ಭಾಗವಹಿಸಿದ್ದು, 150 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿದೆ. ಕಡಿಮೆ ನೀರು ಹಾಗೂ ವೆಚ್ಚದಲ್ಲಿ ಸಿರಿಧಾನ್ಯ ಬೆಳೆಯಬಹುದಾಗಿದೆ. ಆರೋಗ್ಯದ ಸ್ಥಿರತೆ ಕಾಪಾಡಲು ಸಹಕಾರಿಯಾಗಿರುವ ಸಿರಿಧಾನ್ಯವನ್ನು ಪರಿಚಯಿಸುವ ಕೆಲಸ ಇನ್ನಷ್ಟು ಆಗಬೇಕಿದೆ. ಇದರಿಂದ ರೈತರ ಆರ್ಥಿಕ ಸಬಲೀಕರಣ ಸಾಧ್ಯವಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ವಿಜಯಪುರ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂ ಹಾಗೂ ಹಾಸನ&ಕೊಡಗು ಪ್ರಾಂತೀಯ ಸಹಕಾರ ಸಾವಯವ ಸಂ ಹೊರತಂದಿರುವ ಸಿರಿಧಾನ್ಯದ ಬಿಸ್ಕೆಟ್​ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್​, ಶಾಸಕ ರವಿಕುಮಾರ್​, ವಿಧಾನ ಪರಿಷತ್​ ಶಾಸಕ ನಾಗರಾಜ್​ ಯಾದವ್​ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts