More

    ದೇಶದ ಅಭಿವೃದ್ಧಿಗೆ ಶಿಕ್ಷಣವೇ ಸಾಧನ : ಕೆಪಿಸಿಸಿ ಸಾಗರೋತ್ತರ ಘಟಕದ ಅಧ್ಯಕ್ಷೆ ಡಾ.ಆರತಿ ಕೃಷ್ಣ ಅಭಿಪ್ರಾಯ

    ಚನ್ನಗಿರಿ: ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕಾದರೆ ಶಿಕ್ಷಣವೊಂದೇ ಸಾಧನ ಎಂದು ಸಾಗರೋತ್ತರ ರಾಷ್ಟ್ರೀಯ ಭಾರತೀಯ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಸಾಗರೋತ್ತರ ಘಟಕದ ಅಧ್ಯಕ್ಷೆ ಡಾ.ಆರತಿ ಕೃಷ್ಣ ಅಭಿಪ್ರಾಯಪಟ್ಟರು.

    ತಾಲೂಕು ನೀತಿಗೆರೆ ಗ್ರಾಮದ ಎಚ್.ಸಿದ್ದಯ್ಯ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

    ಜಪಾನ್‌ನಂತಹ ರಾಷ್ಟ್ರ 2ನೇ ಮಹಾಯುದ್ಧದ ಬಳಿಕ ಕಾಲಮಾನ ಪ್ರಾಕೃತಿಕ ವಿಕೋಪಗಳ ನಡುವೆಯೂ ವೈಜ್ಞಾನಿಕ, ತಾಂತ್ರಿಕ, ಆರ್ಥಿಕ ಕ್ಷೇತ್ರಗಳಲ್ಲಿ ವಿಶ್ವವೇ ನಾಚುವಂತೆ ಮುಂದೆ ಹೋಗುತ್ತಿದ್ದು, ಇದಕ್ಕೆ ಶಿಕ್ಷಣ ಕಾರಣ. ಭಾರತೀಯರಾದ ನಾವು ಅದನ್ನು ಅಳವಡಿಸಿಕೊಳ್ಳಲು ಸಿದ್ಧರಿಲ್ಲ ಎಂದು ಹೇಳಿದರು.

    ಮಕ್ಕಳು ರಾಷ್ಟ್ರದ ಭವಿಷ್ಯವಾಗಿದ್ದು, ಅವರ ಮನಸ್ಸಿನಲ್ಲಿ ಶಿಕ್ಷಣದ ಜತೆಗೆ ನೀತಿ, ಪ್ರೀತಿ, ಬದುಕುವ ಪಾಠಗಳನ್ನು ಹೇಳಿಕೊಡುವಲ್ಲಿ ವಿಫಲರಾಗಿದ್ದೇವೆ. ಅವರಿಗೆ ಕಡ್ಡಾಯವಾಗಿ ಶಿಕ್ಷಣ ಸಿಗಬೇಕು ಎನ್ನುವುದು ನನ್ನ ಗುರಿಯಾಗಿದೆ. ಅದಕ್ಕಾಗಿ ಸಂಸ್ಥೆ ಆರಂಭಿಸುವ ಮೂಲಕ ಶಿಕ್ಷಣಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ನೀಡುತ್ತ ಬಂದಿದ್ದೇನೆ ಎಂದರು.

    ನನ್ನ ಕ್ಷೇತ್ರದ ವ್ಯಾಪ್ತಿಯ ಶಾಲೆಗಳಿಗೆ ಸಮುದಾಯ ಭವನ ನಿರ್ಮಿಸಿ ಕೊಡಲಾಗಿದೆ. ಸರ್ಕಾರದಿಂದ ಸಿಗುವಂತ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದೇನೆ. ನೀತಿಗೆರೆ ಶಾಲೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರದೊಂದಿಗೆ ಮಾತನಾಡಿ ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.

    ಅಮೆರಿಕಾದ ಹೃದ್ರೋಗ ತಜ್ಞ ಡಾ.ದಯನಂದ ನಾಯ್ಕ ಮಾತನಾಡಿ, ನೀತಿಗೆರೆ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ, ಸರ್ಕಾರಿ ಶಾಲೆಯಲ್ಲಿ ಕಲಿಯುವಾಗ ಅಮೆರಿಕಾದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತೇನೆ ಎಂದು ತಿಳಿದಿರಲಿಲ್ಲ. ವಿದೇಶದಲ್ಲಿ ಇದ್ದರು ಪ್ರತಿವರ್ಷ ಗ್ರಾಮಕ್ಕೆ ಬಂದು ಹೋಗುತ್ತೇನೆ. ನಮ್ಮ ಜನರಿಗಾಗಿ ಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ. ಅಮೆರಿಕದಲ್ಲಿ ಕರ್ನಾಟಕದ 10ಸಾವಿರ ವೈದ್ಯರು ಇದ್ದಾರೆ. ನನ್ನ ಶಾಲೆಯ ವಿದ್ಯಾರ್ಥಿಗಳ ಕಲಿಕೆಗಾಗಿ ಕಂಪ್ಯೂಟರ್‌ಗಳನ್ನು ಕೊಡಿಸುವುದಾಗಿ ತಿಳಿಸಿದರು.

    ಶಾಲೆಯ ಕಾರ್ಯದರ್ಶಿ ಬಿ.ಎನ್.ಎಸ್.ನಾಯ್ಕ, ಅರಣ್ಯ ಇಲಾಖೆಯ ನಿವೃತ್ತ ಉಪ ಸಂರಕ್ಷಣಾಧಿಕಾರಿ ಬಿ.ಎನ್.ವೀರೇಶ್ ನಾಯ್ಕ, ಡಾ. ಗೀತಾ ದಯಾನಂದ ನಾಯ್ಕ, ಮುಖ್ಯಶಿಕ್ಷಕ ಪುಟ್ಟೇಗೌಡ್ರು, ಸವಿತಾ ಸಂಜಯ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts