More

    ನಾಡಿನ ಸಂಸ್ಕೃತಿ, ಪರಂಪರೆ ರಕ್ಷಿಸಲು ಸನ್ನದ್ಧರಾಗಿ

    ಸಿಂಧನೂರು: ಭಾರತೀಯ ಸಂಸ್ಕೃತಿ, ಪರಂಪರೆ, ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಜತೆಗೆ ಪ್ರತಿಯೊಬ್ಬರೂ ದೇಶಾಭಿಮಾನ ಹೊಂದಬೇಕೆಂದು ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

    ಇದನ್ನೂ ಓದಿ: ನಾಡಿನ ಸಂಸ್ಕೃತಿ ಉಳಿಸಿ ಬೆಳೆಸಿ – ಜಾನಪದ ಸಾಹಿತಿ ಪೊಲೀಸ್‌ಪಾಟೀಲ ಹೇಳಿಕೆ

    ನಗರದ ಸುಕಾಲಪೇಟೆಯಲ್ಲಿ ಇತ್ತೀಚೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ ಕರ್ನಾಟಕ, ಜಿಲ್ಲಾ ಸಂಸ್ಥೆ ರಾಯಚೂರು ಹಾಗೂ ಸ್ಥಳೀಯ ಸಂಸ್ಥೆ ಸಿಂಧನೂರು ಆಶ್ರಯದಲ್ಲಿ ಜರುಗಿದ ಮೇರಾ ಮಟ್ಟಿ ಮೇರಾ ದೇಶ್ ಕಾರ್ಯಕ್ರಮದಲ್ಲಿ ಮಾತನಾಡಿದರು.

    ದೇಶದ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅದನ್ನು ಉಳಿಸುವಲ್ಲಿ ನಮ್ಮೇಲ್ಲರ ಪಾತ್ರ ಹೆಚ್ಚಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವ ಮೂಲಕ ಎಲ್ಲರಲ್ಲೂ ಶಿಸ್ತುಬದ್ಧ ಜೀವನ ಒಡಮೂಡಿಸಬೇಕೆಂದರು.

    ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಭಾರತ್ ಸ್ಕೌಟ್ಸ್ ಗೈಡ್ಸ್ ಮುಕ್ತ ದಳ ಸಹಾಯಕ ಜಿಲ್ಲಾ ಆಯುಕ್ತ ಬೀರಪ್ಪ ಶಂಭೋಜಿ, ಕನಕದಾಸ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿದ್ರಾಮಪ್ಪ ಚಳ್ಳೂರು, ಶಿಕ್ಷಕ ಸಣ್ಣರಾಮಯ್ಯ, ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ ಪೂಜಾರ, ಸ್ಕೌಟ್ ಮಾಸ್ಟರ್ ವಸಂತಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts