More

    ನೀವು ಹೆಚ್ಚಿನ ಸಮಯ ಟಿವಿ ವೀಕ್ಷಿಸುತ್ತೀರಾ? ಹಾಗಾದ್ರೆ ಈ ಸ್ಟೋರಿಯನ್ನು ತಪ್ಪದೇ ಓದಿ…

    ನವದೆಹಲಿ: ನಾಲ್ಕು ಗಂಟೆಗೂ ಹೆಚ್ಚಿನ ಅವಧಿಯವರೆಗೆ ಟಿವಿ ವೀಕ್ಷಣೆ ಮಾಡುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೆ, ಟಿವಿ ವೀಕ್ಷಣೆಯಿಂದ ದೂರ ಉಳಿಯಲು ಸಾಧ್ಯವಾಗದೇ ಇರುವವರು ತಮ್ಮ ಹವ್ಯಾಸವನ್ನು ಅನುವಂಶೀಯವಾಗಿ ಪಡೆದಿರಬಹುದೆಂದು ನೂತನ ಅಧ್ಯಯನವೊಂದು ತಿಳಿಸಿದೆ.

    ಯುಕೆ ಅಧ್ಯಯನದ ಪ್ರಕಾರ ಕೆಲವರು ಸುಮ್ಮನೆ ಕುಳಿತು ಟಿವಿ ವೀಕ್ಷಣೆಗೂ ತುಂಬಾ ಕಷ್ಟಪಡುತ್ತಾರೆ ಎಂದು ತಿಳಿಸಿದೆ. ದಿನವೊಂದಕ್ಕೆ 2 ಗಂಟೆ 48 ನಿಮಿಷಕ್ಕೂ ಹೆಚ್ಚು ಕಾಲ ಟಿವಿ ವೀಕ್ಷಣೆ ಮಾಡುವವರಲ್ಲಿ ಅನುವಂಶಿಕ ಗುಣಗಳು ಸಾಮಾನ್ಯಾವಾಗಿರುತ್ತವೆ. ಇದೇ ಗುಣ ಸಾಕಷ್ಟು ವಿರಾಮ ಸಮಯವನ್ನು ಕಂಪ್ಯೂಟರ್​ ಮುಂದೆ ಕಳೆಯುವವರು ಹಾಗೂ ಹೆಚ್ಚಿನ ಸಮಯದವರೆಗೂ ವಾಹನ ಚಾಲನೆ ಮಾಡುವವರಲ್ಲೂ ಇರುತ್ತದೆ ಎಂದು ಅಧ್ಯಯನ ಹೇಳಿದೆ.

    40 ರಿಂದ 69 ವಯೋಗುಂಪಿನ 422,218 ಮಂದಿಯನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಾಗಿದ್ದು, ಅವರಿಗೆ ದಿನಕ್ಕೆ ಎಷ್ಟು ಗಂಟೆ ಟಿವಿ ವೀಕ್ಷಣೆ ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದರಿಂದ ಸರಾಸರಿ ವೀಕ್ಷಕರಿಗಿಂತ ಹೆಚ್ಚಿನ ಟವಿ ವೀಕ್ಷಣೆ ಮಾಡುವವರಲ್ಲಿ 145 ಆನುವಂಶಿಕ ವ್ಯತ್ಯಾಸಗಳನ್ನು ಪತ್ತೆಹಚ್ಚಿದ್ದಾರೆ.

    ಇದೇ ಮಂದಿಯಲ್ಲಿ ಕೆಲವರಿಗೆ ಹೃದಯ ಸಂಬಂಧಿ ಸಮಸ್ಯೆಯು ಇದೆ. ಪ್ರತಿ 90 ನಿಮಿಷ ಸರಾಸರಿ ವೀಕ್ಷಣೆಯು ಪರಿಧಮನಿಯ ಕಾಯಿಲೆ(ಕರೊನರಿ)ಯ ಶೇಕಡ. 44 ರಷ್ಟು ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದ್ದಾಗಿದೆ. ಆದಾಗ್ಯು ವಯಸ್ಕರು ಅನುವಂಶೀಯದಿಂದ ಹೊರಬಂದು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಜಡ ವರ್ತನೆಗಳು ಮತ್ತು ವಿಶೇಷವಾಗಿ ದೂರದರ್ಶನ ವೀಕ್ಷಣೆ ಆನುವಂಶಿಕವಾಗಿರಬಹುದು. ಆದಾಗ್ಯು ಇದು ಸಣ್ಣ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

    ಅಧ್ಯಯನದ ವರದಿಯನ್ನು ನೇಚರ್​ ಕಮ್ಯೂನಿಕೇಷನ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದ್ದು, ದಿನವಿಡಿ ಸುಮ್ಮನ್ನೇ ಕುಳಿತುಕೊಳ್ಳವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸಂದೇಶವನ್ನು ಸಾರಿದೆ. (ಏಜೆನ್ಸೀಸ್​)

    VIDEO| ಕರೊನಾ ತವರು ಚೀನಾದಲ್ಲಿ ಮನಕಲಕುವ ಘಟನೆ: ಒಂದೇ ಸ್ಥಳದಲ್ಲಿ ಸುತ್ತುತ್ತಿರುವ ಬೆಂಗಾಲ್​ ಟೈಗರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts