More

    ಹೊರ ರಾಜ್ಯಕ್ಕೆ ಸೊಪ್ಪೆ ಮಾರಾಟ ?

    ಹಟ್ಟಿಚಿನ್ನದಗಣಿ: ಹಣದಾಸೆಗೆ ಮಳೆಯಾಧಾರಿತ ಹಟ್ಟಿ ಭಾಗದ ಗ್ರಾಮೀಣ ಪ್ರದೇಶದಿಂದ ಹೊರ ರಾಜ್ಯಕ್ಕೆ ಜೋಳದ ಮೇವು(ಸೊಪ್ಪೆ) ಸಾಗಾಟ ಅವ್ಯಾಹತವಾಗಿ ನಡೆದಿದೆ.

    ಬೇಸಿಗೆ ಆರಂಭವಾಗಿದ್ದು, ಜಾನುವಾರು ಸಾಗಾಣಿಕೆದಾರರು ಮೇವು ಕೊಳ್ಳಲು ಹೊರರಾಜ್ಯದಿಂದ ಬರುತ್ತಿದ್ದಾರೆ. ಸಧ್ಯ ಜೋಳದ ದಂಟಿಗೆ ಬೇಡಿಕೆ ಹೆಚ್ಚಿದ್ದು, ಈ ಭಾಗದಲ್ಲಿ ಬಿಳಿಜೋಳದ ಸೊಪ್ಪೆಯನ್ನು ಮಧ್ಯವರ್ತಿಗಳ ಮುಖಾಂತರ ಪಕ್ಕದ ತೆಲಂಗಾಣ ರಾಜ್ಯಕ್ಕೆ ಮಾರಾಟ ಮಾಡಲಾಗುತ್ತಿದೆ.

    ಜೋಳದ ಸೊಪ್ಪೆಗೆ ಬೇಡಿಕೆ: ಭತ್ತ ಬೆಳೆದ ಪ್ರದೇಶದಲ್ಲಿ ಮಷಿನ್‌ನಿಂದ ರಾಶಿ ಮಾಡಿದರೆ ಸೊಪ್ಪೆ ಕೈಸೇರುವುದಿಲ್ಲ. ಆದ್ದರಿಂದ ಜೋಳದ ಸೊಪ್ಪಿಗೆ ಬೇಡಿಕೆ ಉಂಟಾಗಿದೆ. ಜೋಳದ ಸೊಪ್ಪೆ ಜಾನುವಾರುಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಪ್ರತಿ ಲೋಡ್ ಟ್ರ್ಯಾಕ್ಟರ್‌ಗೆ 20 ಸಾವಿರದಂತೆ ದಿನಂಪ್ರತಿ 2-3 ಟನ್ ಮೇವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಯಾರಿಗೂ ಸಂಶಯ ಬಾರದಂತೆ ಟ್ರಾಕ್ಟರ್ ಮೂಲಕ ಬೇರೊಂದು ಕಡೆ ಸಂಗ್ರಹಿಸಿ ಅಲ್ಲಿಂದ ಲಾರಿಗಳ ಮೂಲಕ ಸಾಗಿಸಲಾಗುತ್ತಿದೆ ಎನ್ನಲಾಗುತ್ತಿದೆ.

    ದುಪ್ಪಟ್ಟು ಬೆಲೆಗೆ ಹೊರಗಿನವರಿಗೆ ಮೇವು ಮಾರಿಕೊಳ್ಳುವುದರಿಂದ ನಮ್ಮ ಭಾಗದಲ್ಲಿ ಮೇವಿನ ಕೊರತೆ ಎದುರಿಸುತ್ತಿದ್ದಾರೆ. ಇರುವ ಮೇವು ಇಲ್ಲಿರುವ ಪಶುಗಳಿಗೆ ಆಹಾರ ನೀಗಿಸಲು ದುಸ್ತರವಾಗುತ್ತಿದೆ. ಇನ್ನು ಹೊರಗಿನವರಿಗೆ ಮೇವು ಮಾರಾಟ ಮಾಡಿದರೆ ಕೊರತೆ ಜತೆಗೆ ಅಧಿಕ ಬೆಲೆ ತೆತ್ತು ಕೊಳ್ಳಬೇಕಾಗುತ್ತದೆ. ಸಂಬಂಧಪಟ್ಟವರು ಮಟ್ಟ ಹಾಕಬೇಕು ಹಾಗೂ ಪಶು ಇಲಾಖೆ ಮೂಲಕ ಹಸಿ ಮೇವು ಬೆಳೆಯಲು ಅನುದಾನ ಒದಗಿಸಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts