More

    ಆ.15ರಂದು ಸ್ಫೋಟಕ್ಕೆ ಸಂಚು ರೂಪಿಸಿದ್ದವನ ಬಂಧನ; ಸ್ಫೋಟಕ ವಶ; ಈತನಿಗಿತ್ತು ಐಸಿಸ್​ನೊಂದಿಗೆ ನೇರ ಸಂಪರ್ಕ

    ನವದಹೆಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಉಗ್ರ ಕೃತ್ಯಕ್ಕೆ ರೂಪಿಸಿದ್ದ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಗುಂಡಿನ ಚಕಮಕಿ ನಡೆಸಿ ಐಸಿಎಸ್​ ಸಂಪರ್ಕದಲ್ಲಿದ್ದ ಉಗ್ರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಐಸಿಸ್​ ಉಗ್ರರ ಅಣತಿಯ ಮೇರೆಗೆ ರಾಜಧಾನಿಯ ಜನನಿಬಿಡ ಭಾರಿ ಸ್ಫೋಟಕ್ಕೆ ಬಳಸಲೆಂದು ಇಟ್ಟಿದ್ದ ಎರಡು ಪ್ರಷರ್​ ಕುಕ್ಕರ್​ನಲ್ಲಿ ಅಳವಡಿಸಿದ್ದ ಸುಧಾರಿತ ಸ್ಫೋಟಕ​ಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ; ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ 

    ಬಂಧಿತ ಮೊಹಮ್ಮದ್​ ಮುಷ್ತಕೀನ್​ ಖಾನ್​ ಅಲಿಯಾಸ್​ ಯೂಸೂಫ್​, ಅಲಿಯಾಸ್​ ಅಬು ಯೂಸೂಫ್​ ಸಾಮಾಜಿಕ ಜಾಲತಾಣದ ಮೂಲಕ ಅಫ್ಘಾನಿಸ್ತಾನದ ಇಸ್ಲಾಮಿಕ್​ ಸ್ಟೇಟ್​ ಆಫ್​ ಖೋರಾಸನ್​ ಪ್ರಾವಿನ್ಸ್​ ಕಮಾಂಡರ್​ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಎಂದು ವಿಶಷ ಪೊಲೀಸ್​ ವಿಭಾಗದ ಸಹಾಯಕ ಆಯುಕ್ತ ಪ್ರಮೋದ್​ ಖುಷ್ವಾಹ ತಿಳಿಸಿದ್ದಾರೆ. ದೆಹಲಿಯ ಕರೋಲ್​ ಬಾಗ್​- ದೌಲಾಖಾನ್​ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಡೆದ ಸಣ್ಣ ಗುಂಡಿನ ಚಕಮಕಿಯಲ್ಲಿ ಉಗ್ರನನ್ನು ಬಂಧಿಸಲಾಗಿದೆ. ಪ್ರೆಷರ್​ ಕುಕ್ಕರ್​ನಲ್ಲಿ ಅಳವಡಿಸಲಾಗಿದ್ದ ಬಾಂಬ್​ಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    36 ವರ್ಷದ ಖಾನ್​ ಉತ್ತರಪ್ರದೇಶದ ಬಲರಾಮ್​ಪುರ್​ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಐಸಿಸ್​ನ ನೇರ ಸಂಪರ್ಕದಲ್ಲಿದ್ದಾನೆ. ಐಸಿಸ್​ ಯೂಸುಫ್​ ಅಲ್​ಹಿಂದಿ ಎಂಬುವನ ನಿಗಾದಲ್ಲಿದ್ದ. ಆತ ಕಳೆದ ವರ್ಷ ಸಿರಿಯಾದಲ್ಲಿ ಹತ್ಯೆಗೀಡಾದ ಬಳಿಕ ಅಬು ಹುಝಫಾ ಎಂಬ ಪಾಕಿಸ್ತಾನಿ ಈತನನ್ನು ನಿರ್ವವಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ; ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ? 

    ಅಲಂಕಾರಿಕ ವಸ್ತುಗಳ ಮಳಿಗೆ ಮಾಲೀಕನಾಗಿರುವ ಖಾನ್​ನನ್ನು ಖೋರಾಸನ್​ಗೆ ಕರೆಯಿಸಿಕೊಳ್ಳುವುದಾಗಿ ಅಬು ಹುಝಫಾ ಭರವಸೆ ನೀಡಿದ್ದ. ಈ ಕಾರಣಕ್ಕೆ ಖಾನ್​ ಪತ್ನಿ ಹಾಗೂ ನಾಲ್ವರು ಮಕ್ಕಳ ಪಾಸ್​ಪೋರ್ಟ್​ ಮಾಡಿಸಿದ್ದ. ಈತನ ಸಂಪರ್ಕದಲ್ಲಿದ್ದಾಗಲೇ ಬಾಂಬ್​ ತಯಾರಿಸುವುದನ್ನು ಕಲಿತಿದ್ದ ಎನ್ನಲಾಗಿದೆ. ಆತನ ಬಳಿ ಪತ್ತೆಯಾದ ಪ್ರೆಷರ್​ ಕುಕರ್​ ಸ್ಫೋಟಕಗಳನ್ನು ಆತನೇ ತಯಾರಿಸಿದ್ದೋ? ಅಥವಾ ಯಾರಾದರೂ ತಂದು ನೀಡಿದ್ದಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಆಗಸ್ಟ್​ 15ರಂದು ದೆಹಲಿಯಲ್ಲಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಮುಷ್ತಕೀನ್​ ಖಾನ್​ ಸಂಚು ರೂಪಿಸಿದ್ದ ಆದರೆ, ಭಾರಿ ಭದ್ರತೆ ಕ್ರಮಗಳನ್ನು ಕೈಗೊಂಡಿದ್ದ ಕಾರಣ ಆತನ ಸಂಚು ಈಡೇರಲಿಲ್ಲ. ಉಗ್ರನ ಬಹುದೊಡ್ಡ ಕೃತ್ಯವನ್ನು ತಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    https://www.vijayavani.net/10-year-old-married-off-to-her-rapist/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts