More

    ಭ್ರಷ್ಟಾಚಾರ, ಭ್ರಷ್ಟರನ್ನು ರಕ್ಷಿಸುವುದು ನಿಮ್ಮ ಏಕೈಕ ಗುರಿಯೇ?; ಬಿಜೆಪಿಯನ್ನು ಪ್ರಶ್ನಿಸಿದ ಕಾಂಗ್ರೆಸ್​​

    ಬೆಂಗಳೂರು: ಕೋಟಿ ಕೋಟಿ ಹಣ ಸಂಗ್ರಹಿಸಿ ಭ್ರಷ್ಟಾಚಾರದ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ನಂತರ ಪ್ರಶಾಂತ್ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಏಳೂವರೆ ಕೋಟಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಮಾಡಾಳ್ ವಿರೂಪಾಕ್ಷಪ್ಪ ಬಂಧನ ತಡವಾಗುತ್ತಿರುವ ವಿಚಾರವಾಗಿ ಕಾಂಗ್ರೆಸ್​​, ಬಿಜೆಪಿ ಪಕ್ಷದ ವಿರುದ್ಧವಾಗಿ ಸರಣಿ ಟ್ವೀಟ್ ಮಾಡುವ ಮೂಲಕವಾಗಿ ಕಿಡಿಕಾರಿದೆ.

    ನಮ್ಮ ಪೊಲೀಸರು ಎಂತೆಂತಹ ನಿಗೂಢ ಪ್ರಕರಣಗಳನ್ನೇ ಬೇಧಿಸಿದ್ದಾರೆ. ಎಂತೆಂತಹ ಕ್ರಿಮಿನಲ್‌ಗಳನ್ನೇ ಹುಡುಕಿ ತಂದ ಇತಿಹಾಸವಿದೆ. ಹೀಗಿರುವಾಗ ಒಬ್ಬ ಭ್ರಷ್ಟಾಚಾರದ ಆರೋಪಿ ಶಾಸಕರನ್ನು ಪತ್ತೆ ಹಚ್ಚಲಾಗುತ್ತಿಲ್ಲ ಎಂದರೆ ಏನರ್ಥ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿ ಕಾಂಗ್ರೆಸ್ ಟ್ವೀಟ್​​ ಮಾಡಿದೆ.

    ಇದನ್ನೂ ಓದಿ: ರೈತರಿಗೆ ಪ್ರತಿ ವರ್ಷ 15 ಸಾವಿರ ರೂ. ಕೊಡುತ್ತೇನೆ: ಜನಾರ್ಧನ ರೆಡ್ಡಿ

    ಭ್ರಷ್ಟಾಚಾರ ಹಾಗೂ ಭ್ರಷ್ಟರನ್ನು ರಕ್ಷಿವುದೇ ನಿಮ್ಮ ಏಕೈಕ ಗುರಿಯೇ? PSI ಹಗರಣದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನಕ್ಕೆ 25 ದಿನಗಳು ಬೇಕಾಯಿತ್ತು. ಬಿಜೆಪಿ ನಾಯಕ ಸ್ಯಾಂಟ್ರೋ ರವಿಯ ಬಂಧನಕ್ಕೆ 10ಕ್ಕೂ ಹೆಚ್ಚು ದಿನ ಬೇಕಾಯಿತ್ತು. ಒಂದು ವಾರ ಕಳೆದರೂ KSDL ಹಗರಣದ ಶಾಸಕ ಮಾಡಾಳ್ ವೀರೂಪಾಕ್ಷಪ್ಪರನ್ನು ಬಂಧಿಸಲಾಗಿಲ್ಲ. ಇದೆಲ್ಲವೂ ಬಸವರಾಜ ಬೊಮ್ಮಾಯಿ ಅವರ ಭ್ರಷ್ಟಾಚಾರದ ಪೋಷಣೆಯ ಫಲವಲ್ಲವೇ? ಎಂದು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಆಕ್ರೋಶ ಹೊರಹಾಕಿದೆ.

    ಹಿಂದೂ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಸ್ಲಿಂ ಜೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts