More

    ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ, ನ್ಯಾಯಾಧೀಶ ಬಿ.ಬಿ.ಜಕಾತಿ ಮನವಿ

    ಸಿಂಧನೂರು: ಸರ್ಕಾರಿ ಕೆಲಸಕ್ಕೆ ನಿಗದಿತ ಶುಲ್ಕ ಮಾತ್ರ ಭರಿಸಬೇಕು. ಹೆಚ್ಚು ಹಣ ಪಡೆದರೆ ಅದು ಲಂಚವಾಗುತ್ತದೆ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಬಿ.ಜಕಾತಿ ಹೇಳಿದರು.

    ಇದನ್ನೂ ಓದಿ: ರಾಜ್ಯಸರ್ಕಾರ ವಿರುದ್ಧ ಭ್ರಷ್ಟಾಚಾರ ಆರೋಪ: ಪಾಂಡವಪುರದಲ್ಲಿ ಬಿಜೆಪಿ ಪ್ರತಿಭಟನೆ

    ನಗರದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಎಚ್.ಮರಿಯಪ್ಪ ಹೆಡಗಿಬಾಳ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಸಪ್ತಾಹ ಜಾಥಾಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.

    ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರು ಕೈಜೋಡಿಸಬೇಕು. ನೌಕರರು ಹಣಕ್ಕಾಗಿ ಕೆಲಸ ಮಾಡದೆ, ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಪ್ರಜ್ಞೆ ಇಟ್ಟುಕೊಳ್ಳಬೇಕು ಎಂದರು.

    ಸಿದ್ದರಾಮೇಶ್ವರ ಶರಣರು ಮಾತನಾಡಿ, ದೇಶದಲ್ಲಿ ಹರಡಿಕೊಂಡಿರುವ ಭ್ರಷ್ಟಾಚಾರ ಎಂಬ ಪಿಡುಗು ತೊಲಗಿಸಲು ಸಾರ್ವಜನಿಕರು ಜಾಗೃತರಾಗಬೇಕು ಎಂದು ತಿಳಿಸಿದರು.

    ನ್ಯಾಯಾಧೀಶರಾದ ಕೋಟೆಪ್ಪ ಕಾಂಬ್ಳೆ, ಆನಂದಪ್ಪ ಎಂ., ದೀಪಾ ಜಿ.ಮನೇನಕರ್, ಆಚಪ್ಪ ದೊಡ್ಡಬಸವ, ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಸಹಾಯಕ ಸರ್ಕಾರಿ ಅಭಿಯೋಜಕ ಮಾರುತಿ ಕಲ್ಲೂರು, ವಕೀಲರಾದ ಎಂ.ಅಮರೇಗೌಡ, ಕೆ.ಅಮರೇಗೌಡ, ಚಂದ್ರಶೇಖರ ಬೆನ್ನೂರು, ಶರಣಬಸವ ಉಮಲೂಟಿ, ಶೇಖರಪ್ಪ ಧುಮತಿ, ಪ್ರಹ್ಲಾದ ಗುಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts