More

    ರಜಾ ದಿನದಂದು ಕೆಲಸ ಮಾಡಿದ ಪಾಲಿಕೆ ಸಿಬ್ಬಂದಿ

    ಬೆಂಗಳೂರು: ಬಿಬಿಎಂಪಿಯ ಕೆಲ ಸಹಾಯಕ ಕಂದಾಯ ಕಚೇರಿ (ಎಆರ್‌ಒ) ಗಳಲ್ಲಿ ಬಿ ಖಾತಾದಿಂದ ಎ ಖಾತೆ ಮಾಡಿಕೊಡಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಅಲ್ಲಿರುವ ಖಾತಾಗಳ ಸಂಬಂಧ ಆಯಾ ವಲಯ ಕಚೇರಿಗಳಿಗೆ ರವಾನಿಸುವ ಸಂಬಂಧ ರಜಾದಿನವಾದ ಭಾನುವಾರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

    ಇತ್ತೀಚಿನ ವರ್ಷಗಳಲ್ಲಿ ಪಾಲಿಕೆ ಕಚೇರಿಯಲ್ಲಿ ಈ ರೀತಿ ರಜಾದಿನವೂ ಸಿಬ್ಬಂದಿಗಳು ಕೆಲಸ ಮಾಡಿದ್ದು ಇದೇ ಮೊದಲು. ಪಾಲಿಕೆ ವ್ಯಾಪ್ತಿಯಲ್ಲಿ 6ರ ಎಆರ್‌ಒ ಕಚೇರಿಗಳಿದ್ದು, ಎಲ್ಲ ಕಚೇರಿಗಳಲ್ಲಿ ತುರ್ತಾಗಿ ಕಡತಗಳನ್ನು ಭಾನುವಾರ ರಾತ್ರಿಯೊಳಗೆ ಸಂಬಂಧಿಸಿದ ವಲಯ ಕಚೇರಿಗಳಿಗೆ ಸ್ಥಳಾಂತರಿಸಲಾಯಿತು.

    ಕೆಲ ದಿನಗಳ ಹಿಂದೆ ಯಲಚೇನಹಳ್ಳಿ ಎಆರ್‌ಒ ಕಚೇರಿಯಲ್ಲಿ ಬಿ ಖಾತೆ ಹೊಂದಿದ್ದ ಸ್ವತ್ತಿಗೆ ಎ ಖಾತಾ ಮಾಡಲಾಗಿತ್ತು. ಈ ಪ್ರಕರಣ ಹೊರಬೀಳುತ್ತಿದ್ದಂತೆ ಇಂತಹದ್ದೇ ಇನ್ನೂ ಕೆಲ ಪ್ರಕರಣಗಳು ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಇದರ ಸುಳಿವು ಅರಿತ ಹೊಸದಾಗಿ ಹುದ್ದೆ ವಹಿಸಿಕೊಂಡಿರುವ ಪಾಲಿಕೆ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಶನಿವಾರ (ನ.4) ಮಧ್ಯಾಹ್ನ ಆದೇಶ ಹೊರಡಿ ರಾತ್ರಿಯೊಳಗೆ ಎಆರ್‌ಒ ಕಚೇರಿಗಳಿಂದ ವಲಯ ಕಚೇರಿಗಳಿಗೆ ಸ್ವತ್ತಿನ ತೆರಿಗೆ ರಿಜಿಸ್ಟರ್‌ಅನ್ನು ಹಸ್ತಾಂತರಿಸುವಂತೆ ತಾಕೀತು ಮಾಡಿದ್ದರು.

    ಕೈಬರಹದ ಪತ್ರದಲ್ಲೇ ಆದೇಶ ರವಾನೆ:

    ವಿಶೇಷವೆಂದರೆ ಮುನೀಶ್ ಮೌದ್ಗಿಲ್ ಅವರು ಅಕ್ರಮದ ಸುಳಿವನ್ನು ಯಾರಿಗೂ ನೀಡದೆ ಎಚ್ಚರ ವಹಿಸಲು ತಮ್ಮ ಪದನಾಮದ ಪತ್ರದಲ್ಲಿ ಕೈಬರಹದಲ್ಲೇ ಆದೇಶ ಹೊರಡಿಸಿದ್ದರು. ರಾತ್ರಿಯೊಳಗೆ ಖಾತಾವಹಿ ರವಾನಿಸಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರನ್ವಯ ಎಲ್ಲ 64 ಉಪ ವಿಭಾಗಗಳಲ್ಲಿದ್ದ ಎ ಹಾಗೂ ಬಿ ಖಾತಾ ಸಂಬಂಧಿತ ರಿಜಿಸ್ಟರ್‌ಗಳು ಇದ್ದ ಸ್ಥಿತಿಯಲ್ಲೇ ರವಾನಿಸಲಾಗಿದೆ. ಕೆಲವೆಡೆ ಅಪೂರ್ಣಗೊಂಡಿದ್ದ ಕಾರ್ಯವನ್ನು ಭಾನುವಾರ ಪೂರ್ಣಗೊಳಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts