More

    ವಾಟರ್ ‘ಎಟಿಎಂ’ಗೆ ಪಾಲಿಕೆ ಅಸ್ತು! 1 ಲೀ., ಬಾಟಲ್ 5 ರೂ., ಅರ್ಧ ಲೀಟರ್ ಬಾಟಲ್ 3 ರೂ.,

    ತುಮಕೂರು: ಎಟಿಎಂ (ಎನಿ ಟೈಂ ಮನಿ) ಮಾದರಿಯಲ್ಲಿ ಶುದ್ಧ ನೀರನ್ನು ಕೈಗೆಟಕುವ ದರದಲ್ಲಿ ಖಾಸಗಿ ಸಹಭಾಗಿತ್ವದಡಿ ತುಮಕೂರಿಗರಿಗೆ ಒದಗಿಸಲು ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡಿದೆ.

    ಈ ಎಟಿಡಬ್ಲೂೃ (ಎನಿ ಟೈಂ ವಾಟರ್) ಘಟಕದಲ್ಲಿ 1 ಲೀ., ಬಾಟಲ್ ನೀರಿಗೆ 5 ರೂ., ಹಾಗೂ ಅರ್ಧ ಲೀಟರ್ ಬಾಟಲ್ 3 ರೂ., ಗೆ ದೊರೆಯಲಿದೆ.

    ನಗರದ ಪ್ರಮುಖ ಜನದಟ್ಟಣೆ ಸ್ಥಳಗಳಾದ ಸಬ್‌ರಿಜಿಸ್ಟ್ರಾರ್ ಕಚೇರಿ, ತುಮಕೂರು ವಿಶ್ವವಿದ್ಯಾಲಯ, ಜಿಲ್ಲಾಸ್ಪತ್ರೆ ಆವರಣ, ಅಂತರಸನಹಳ್ಳಿ ಹೂವು, ಹಣ್ಣು ತರಕಾರಿ ಮಾರುಕಟ್ಟೆ, ಎಸ್‌ಎಸ್‌ಐಟಿ ಕಾಲೇಜು, ಎಪಿಎಂಸಿ ಯಾರ್ಡ್, ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ವಾಟರ್ ಎಟಿಎಂ ಪ್ರಾಜೆಕ್ಟ್ ಅಡಿ ಶುದ್ಧ ನೀರಿನ ಘಟಕಗಳನ್ನು ತೆರೆಯಲು ಖಾಸಗಿಯವರಿಗೆ ಅನುಮತಿ ಕೊಡಲು ಇತ್ತೀಚೆಗಿನ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ.

    ಖಾಸಗಿ ಸಹಭಾಗಿತ್ವದಲ್ಲಿ ಎಟಿಡಬ್ಲೂೃ!: ಹಡ್ರೆಂಡ್ ಪರ್ಸೆಂಟ್ ಪ್ಯೂರ್ ಹೆಲ್ತ್ ವಾಟರ್ ಎಟಿಎಂ ವತಿಯಿಂದ 500 ಲೀಟರ್ ಸಾಮರ್ಥ್ಯದ ಎಟಿಡಬ್ಲೂೃ (ಆರ್‌ಒ ಪ್ಲಾಂಟ್) ಘಟಕಗಳನ್ನು ತೆರೆದು ನೀರು ಒದಗಿಸಲು ಅನುಮತಿ ಕೋರಿದ್ದರು. ಈ ವಿಷಯವನ್ನು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್ ಪ್ರಸ್ತಾಪಿಸಿದ್ದು, ನೆಲಬಾಡಿಗೆ ಪಡೆದು ನಗರದ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕದ ಮಾದರಿಯಲ್ಲಿ ವಾಟರ್ ಎಟಿಎಂಗಳನ್ನು ಸ್ಥಾಪಿಸಲು ಖಾಸಗಿಯವರಿಗೆ ಕೆಲವು ಷರತ್ತುಗಳನ್ನು ವಿಧಿಸಿ ನೀಡಲು ಅನುಮೋದಿಸಲಾಯಿತು.

    ಪಾಲಿಕೆ ಷರತ್ತುಗಳು
    • ಘಟಕ ಸ್ಥಾಪನೆ, ನಿರ್ವಹಣೆ ಸಂಪೂರ್ಣ ವೆಚ್ಚ ಏಜೆನ್ಸಿಯೇ ಭರಿಸಬೇಕು
    • ಪ್ರತೀ ತಿಂಗಳು ನೆಲಬಾಡಿಗೆ ಪಾವತಿಸಬೇಕು
    • ಘಟಕದ ವಿದ್ಯುತ್ ಬಿಲ್ ಏಜೆನ್ಸಿಯೇ ಕಟ್ಟಬೇಕು
    • ಆರ್‌ಒ ಪ್ಲಾಂಟ್‌ಗೆ ಅಗತ್ಯ ನೀರನ್ನು ಹತ್ತಿರದ ಬೋರೆವೆಲ್‌ನಲ್ಲಿ ಸ್ವಂತ ಖರ್ಚಿನಲ್ಲಿ ಪಡೆಯಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts