More

    ಪರ್ಲ್​ ಹಾರ್ಬರ್​, ವರ್ಲ್ಡ್​ ಟ್ರೇಡ್​ ಸೆಂಟರ್​ ಅಟ್ಯಾಕ್​​ಗಳನ್ನು ಮೀರಿಸುತ್ತಿದೆ ಕೊವಿಡ್​-19ರ ದಾಳಿ ಎಂದ್ರು ಟ್ರಂಪ್​

    ವಾಷಿಂಗ್ಟನ್​: ಕರೊನಾ ವೈರಸ್​ ಚೀನಾದಲ್ಲಿ ಹುಟ್ಟಿದ್ದರೂ ಅತಿಹೆಚ್ಚಾಗಿ ಬಾಧಿಸುತ್ತಿರುವುದು ಅಮೆರಿಕದಲ್ಲಿ. ಅಲ್ಲಿ ಸದ್ಯ 1.23 ದಶಲಕ್ಷಕ್ಕಿಂತಲೂ ಹೆಚ್ಚು ಕರೊನಾ ಸೋಂಕಿತರು ಇದ್ದಾರೆ. ಹಾಗೇ ಸಾವಿನ ಸಂಖ್ಯೆ 72 ಸಾವಿರವನ್ನು ಮೀರಿಸಿದೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪ್ರತಿನಿತ್ಯ ತಮ್ಮ ವೈಟ್​ ಹೌಸ್​ನಲ್ಲಿ ಸುದ್ದಿಗೋಷ್ಠಿ ನಡೆಸಿ, ಆ ದಿನದ ಬೆಳವಣಿಗೆಗಳನ್ನು ಹೇಳುತ್ತಿದ್ದಾರೆ. ಈಗಾಗಲೇ ಕರೊನಾದಿಂದ ಅಷ್ಟೆಲ್ಲ ಜನರ ಸಾವಾಗಿದೆ. ಆದರೆ ಇದು ಇಲ್ಲಿಗೇ ನಿಲ್ಲುವುದಿಲ್ಲ. ಮತ್ತೂ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಟ್ರಂಪ್​ ಹೇಳಿದ್ದಾರೆ.

    ಇದನ್ನೂ ಓದಿ: ಅಮೆರಿಕದಲ್ಲಿ ಬಡವರಿಗೆ ಉಚಿತ ಊಟ

    ದೇಶದಲ್ಲಿ ಕರೊನಾ ವೈರಸ್​ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ, ಸಾವಿನ ಸಂಖ್ಯೆ ನಿಯಂತ್ರಣ ಸಾಧ್ಯವಾಗುತ್ತಿಲ್ಲದಿರುವುದರಿಂದ ಟ್ರಂಪ್​ ಹೈರಾಣಾಗಿದ್ದಾರೆ. ಈ ಕರೊನಾ ದಾಳಿ, 1941ರ ಪರ್ಲ್ ಹಾರ್ಬರ್​ ದಾಳಿ ಮತ್ತು 2001ರ ಸೆಪ್ಟೆಂಬರ್​ 11ರಂದು ಯುಎಸ್​ ಮೇಲೆ ನಡೆದ ಉಗ್ರ ದಾಳಿಯನ್ನು ಮೀರಿಸುವಂತಿದೆ ಎಂದಿದ್ದಾರೆ.
    1941ರಲ್ಲಿ ಜಪನೀಸ್​ ನೇವಿ ಹಡಗು ಯುಎಸ್​ ಮೇಲೆ ಅಚಾನಕ್​ ಆಗಿ ದಾಳಿ ಮಾಡಿತ್ತು. ಹಾಗೇ 2001 ಸೆಪ್ಟೆಂಬರ್​ 11ರಂದು ಅಮೆರಿಕದ ಮೇಲೆ ಅಲ್​ ಕೈದಾ ಉಗ್ರಸಂಘಟನೆಯ ನಾಲ್ಕು ಗುಂಪುಗಳು ಭೀಕರ ದಾಳಿ ನಡೆಸಿದ್ದವು. ವರ್ಲ್ಡ್​ ಟ್ರೇಡ್​ ಸೆಂಟರ್​​ನ್ನು ಉರುಳಿಸಿದ್ದವು. ಈ ದಾಳಿಗಳಲ್ಲಿ ಅಪಾರ ಸಾವು, ನಷ್ಟ ಆಗಿತ್ತು. ಆದರೆ ಟ್ರಂಪ್​ ಹೇಳುವ ಪ್ರಕಾರ ಅದೆರಡೂ ದಾಳಿಗಿಂತ ಈ ಕರೊನಾ ತಂದೊಡ್ಡಿದ ಅಪಾಯ ಇನ್ನೂ ಕೆಟ್ಟದಾಗಿದೆ. ದೇಶಕ್ಕೆ ಮಾರಕವಾಗಿದೆ.

    ಹಾಗೇ, ಈ ಕರೊನಾ ಮತ್ತು ಇದರಂತಾ ವೈರಸ್​​ಗಳ ದಾಳಿ ಇನ್ಯಾವತ್ತೂ ಜಗತ್ತಿನ ಮೇಲೆ ಆಗದೆ ಇರಲಿ ಎಂದಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಅಮೆರಿಕದಲ್ಲಿ ಶೇ.47ರಷ್ಟು ಉದ್ಯೋಗಿಗಳು ಪ್ಯಾಂಟೇ ಹಾಕಲ್ವಂತೆ, ಉಳಿದವರು ಇನ್ನೇನು ಮಾಡ್ತಾರೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts