More

    ಅಮೆರಿಕದಲ್ಲಿ ಶೇ.47ರಷ್ಟು ಉದ್ಯೋಗಿಗಳು ಪ್ಯಾಂಟೇ ಹಾಕಲ್ವಂತೆ, ಉಳಿದವರು ಇನ್ನೇನು ಮಾಡ್ತಾರೆ ನೋಡಿ…

    ವಾಷಿಂಗ್ಟನ್​: ಇತ್ತೀಚೆಗಷ್ಟೇ ಅಮೆರಿಕದ ಎಬಿಸಿ ಸುದ್ದಿವಾಹಿನಿಯ ವರದಿಗಾರ ವಿಲ್​ ರೀವ್​ನ ವೀಡಿಯೋ ಭಾರಿ ಸುದ್ದಿ ಮಾಡಿತ್ತು. ವರ್ಕ್​ ಫ್ರಂ ಹೋಮ್​ನಿಂದ ಕೆಲಸ ನಿರ್ವಹಿಸುತ್ತಿದ್ದ ವಿಲ್​ ರೀವ್​ ಬ್ರೇಕಿಂಗ್​ ನ್ಯೂಸ್​ ಒಂದನ್ನು ನೀಡಲು ಹೋಗಿ ಈತನೇ ಸುದ್ದಿಯಾಗಿದ್ದ.

    ಏಕೆಂದರೆ ಅಮೆರಿಕದ ವೃದ್ಧರಿರುವ ಊರಿನಲ್ಲಿ (ರಿಟೈರ್​ಮೆಂಟ್​ ವಿಲೇಜ್​) ಔಷಧ ಕಂಪನಿಯೊಂದು ಡ್ರೋನ್​ಗಳನ್ನು ಬಳಸಿ ಔಷಧ ಪೂರೈಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ನೇರ ಪ್ರಸಾರದಲ್ಲಿ (ಲೈವ್​) ಸುದ್ದಿ ಕೊಡುವಾಗ ಈತ ಪ್ಯಾಂಟೇ ಹಾಕಿಕೊಂಡಿರಲಿಲ್ಲ! ಬ್ರ್ಯಾಂಡೆಡ್​ ಶರ್ಟ್,​ ಅದರ ಮೇಲೊಂದು ಸೂಟ್​ ಧರಿಸಿ ಕುಳಿತಿದ್ದ ಈತ, ಲೈವ್​ನಲ್ಲಿ ಸುದ್ದಿಯನ್ನು ನಿರೂಪಿಸಿದ್ದ. ಇನ್ನೇನು ಸುದ್ದಿ ಮುಗಿಯಿತು ಎನ್ನುವಾಗ ಆತ ಎದ್ದು ನಿಂತಾಗಲೇ ಪ್ಯಾಂಟ್​ ಧರಿಸದಿರುವುದು ಗೊತ್ತಾಗಿದೆ.

    ಇದು ಆನ್​ಸ್ಕ್ರೀನ್​ನಲ್ಲೂ ಕಾಣಿಸಿಕೊಂಡಿದ್ದು, ಭಾರಿ ವೈರಲ್​ ಆಗಿದ್ದು ಮಾತ್ರವಲ್ಲದೇ ಟ್ರೋಲ್​ ಕೂಡ ಆಗಿತ್ತು.

    ಇದನ್ನೂ ಓದಿ: ಲಾಕ್​ಡೌನ್​ ಸಮಯದಲ್ಲಿ ಕದ್ದುಮುಚ್ಚಿ ಮಾಡೋದೇನು? ಇಲ್ಲಿದೆ ಬೆಚ್ಚಿಬೀಳಿಸೋ ವರದಿ

    ಇದು ರೀವ್​ ಮಾತಾಯಿತು. ಈ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ಪುರುಷರ ಪ್ಯಾಂಟಿನ ಗುಟ್ಟನ್ನು ಬಿಚ್ಚಿಡಲು ಲಂಡನ್‌ನ ಯುಗೋವ್ ಎಂಬ ಸಂಶೋಧಕರ ಗುಂಪು ಒಂದು ಅಧ್ಯಯನವನ್ನು ನಡೆಸಿತು.

    ಈಗ ಎಲ್ಲೆಲ್ಲೂ ವರ್ಕ್​ ಫ್ರಂ ಹೋಂ. ಅದರಲ್ಲಿಯೂ ಸಾಫ್ಟ್​ವೇರ್​ ದೈತ್ಯ ಕಂಪನಿಗಳು ಇರುವ ಅಮೆರಿಕದಲ್ಲಿ ಬಹುತೇಕ ಎಲ್ಲಾ ಕಂಪನಿಗಳೂ ಮನೆಯಿಂದಲೇ ಉದ್ಯೋಗಿಗಳಿಗೆ ಕೆಲಸ ನೀಡಿದೆ. ಸಾಫ್ಟ್​ವೇರ್​ ಕಂಪನಿ ಮಾತ್ರವಲ್ಲದೇ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಅನೇಕ ಸಂಸ್ಥೆ, ಕಂಪನಿಗಳ ಉದ್ಯೋಗಿಗಳೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಕೆಲಸ ಮಾಡುವವರು ಮನೆಯಲ್ಲಿ ಹೇಗಿರುತ್ತಾರೆ ಎಂಬ ಕುತೂಹಲವನ್ನು ತಣಿಸುವುದಕ್ಕಾಗಿ ಯುಗೋವ್​ ತಂಡ ಮುಂದಾಗಿದೆ.

    ಇದನ್ನೂ ಓದಿ: ಪೆಟ್ರೋಲ್​, ಡೀಸೆಲ್​ ಅಬಕಾರಿ ಸುಂಕದಲ್ಲಿ ಭಾರಿ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ ಬೀಳತ್ತಾ? ಇಲ್ಲಿದೆ ಉತ್ತರ

    ಇದೀಗ ತಂಡವು ತನ್ನ ಅಧ್ಯಯನವನ್ನು ಮುಗಿಸಿದ್ದು ಅದರ ವರದಿಯನ್ನು ಬಿಚ್ಚಿಟ್ಟಿದೆ. ಅಮೆರಿಕದಲ್ಲಿ 9.8 ಕೋಟಿ ಉದ್ಯೋಗಿಗಳ ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಇವರ ಪೈಕಿ ಶೇ. 47ರಷ್ಟು ಮಂದಿ ಪ್ಯಾಂಟ್​ ಹಾಕದೇ ಕೆಲಸಕ್ಕೆ ಕುಳಿತಿರುತ್ತಾರೆ ಎಂದಿದೆ ಈ ಸಂಶೋಧಕರ ತಂಡ.

    ಹೆಚ್ಚಿನವರು ಪ್ಯಾಂಟ್​ ಮಾತ್ರವಲ್ಲದೇ, ಶಾರ್ಟ್ಸ್​, ಸ್ಕರ್ಟ್​ ಕೂಡ ಧರಿಸುವುದಿಲ್ಲ ಎಂದು ವರದಿ ಹೇಳಿದೆ. ಹೆಚ್ಚಿನ ಕಂಪನಿಗಳಲ್ಲಿ, ಮನೆಯಿಂದ ಕೆಲಸ ಮಾಡುವಾಗ ವೀಡಿಯೋ ಕಾನ್ಫರೆನ್ಸ್​ ಮಾಮೂಲು. ಹೀಗೆ ವೀಡಿಯೋದಲ್ಲಿ ತಾವು ಕಾಣಿಸಿಕೊಳ್ಳುವುದು ಗೊತ್ತಿದ್ದರೂ ಪ್ಯಾಂಟ್​, ಶರ್ಟ್​ ಗೋಜಿಗೆ ಇವರು ಹೋಗುವುದಿಲ್ಲ ಎಂದಿದೆ ವರದಿ.

    ಇದನ್ನೂ ಓದಿ: ನಿಮ್ಮ ಜಿಲ್ಲೆಯ ಕರೊನಾ ಸ್ಥಿತಿ ಇಂದು ಹೇಗಿದೆ? ಇಲ್ಲಿದೆ ವಿವರ

    ಸಾಮಾನ್ಯವಾಗಿ ವೀಡಿಯೋಗಳಲ್ಲಿ ದೇಹದ ಮೇಲಿನ ಭಾಗವಷ್ಟೇ ಕಾಣಿಸುತ್ತದೆ. ಆದ್ದರಿಂದ ಇವರೆಲ್ಲಾ ಮೇಲೆ ಮಾತ್ರ ನೀಟಾಗಿ ಒಳ್ಳೆಯ ಗುಣಮಟ್ಟದ ಕೋಟು ಧರಿಸಿ ಕುಳಿತುಕೊಳ್ಳುತ್ತಾರೆ. ಕೆಳಗಡೆ ಏನಾದರೂ ಅಪ್ಪಿತಪ್ಪಿ ಕ್ಯಾಮರಾ ಹೋದರೆ, ಇವರು ಪ್ಯಾಂಟ್​, ಶಾರ್ಟ್ಸ್​, ಸ್ಕರ್ಟ್​ ಏನೂ ಹಾಕದೇ ಇರುವುದನ್ನು ತಿಳಿಯಬಹುದಂತೆ!

    ಅಂದಹಾಗೆ ಕಚೇರಿಯ ವೀಡಿಯೋ ಕಾಲ್​ ಮೂಲಕ ಸಂಭಾಷಣೆ ಮಾಡುವ ಪ್ರಸಂಗ ಬಂದರೆ ಮಾತ್ರ ಅಮೆರಿಕನ್ನರು ಇನ್ನೇನು ಮಾಡುತ್ತಾರೆ ಎನ್ನುವುದು ಇಲ್ಲಿದೆ ನೋಡಿ:
    ಶೇ.19ರಷ್ಟು ಮಹಿಳೆಯರು ಭಾರಿ ಮೇಕಪ್​ ಮಾಡಿಕೊಳ್ಳುತ್ತಾರೆ.
    ಶೇ. 50ರಷ್ಟು ಮಂದಿ ಹಲ್ಲುಜ್ಜುತ್ತಾರೆ.
    ಶೇ. 51ರಷ್ಟು ಮಂದಿ ಮುಖ ತೊಳೆಯುತ್ತಾರೆ.
    ಶೇ.54ರಷ್ಟು ಮಂದಿ ಕೂದಲು ಬಾಚಿಕೊಳ್ಳುತ್ತಾರೆ.
    ಶೇ.24ರಷ್ಟು ಮಂದಿ ಕ್ಷೌರ ಮಾಡುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts