More

    ಕರೊನಾ ಭೀತಿ: ಸಂಕಷ್ಟದಲ್ಲಿರೋ ದಿನಗೂಲಿ ನೌಕರರಿಗೆ ಪ್ರತಿದಿನ 1000 ರೂ. ನೀಡುವುದಾಗಿ ಸಿಎಂ ಯೋಗಿ ಘೋಷಣೆ

    ಲಖನೌ: ಮಹಾಮಾರಿ ಕರೊನಾ ವೈರಸ್​ ಭೀತಿ ನಡುವೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮಹತ್ವದ ನಿರ್ಧಾರವನ್ನು ಘೋಷಿಸಿದ್ದಾರೆ.

    ಕೋವಿಡ್​-19​ ಭೀತಿಯಿಂದ ಇಡೀ ದೇಶವೇ ಸ್ತಬ್ಧವಾಗಿದ್ದು, ದಿನನಿತ್ಯದ ಕೂಲಿಯನ್ನು ಅವಲಂಬಿಸಿಕೊಂಡಿದ್ದ ದಿನಗೂಲಿ ನೌಕರರು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರು ಸದ್ಯ ಸಂಕಷ್ಟಕ್ಕೆ ಸಿಲುಕಿದ್ದು ಅವರಿಗೆ ಸಿಎಂ ಯೋಗಿ ಅಗತ್ಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.

    15 ಲಕ್ಷ ದಿನಗೂಲಿ ನೌಕರರು ಮತ್ತು 20.37 ಲಕ್ಷ ಕಟ್ಟಡ ಕಾರ್ಮಿಕರಿಗೆ ಪ್ರತಿದಿನ 1000 ರೂ. ಅನ್ನು ದಿನನಿತ್ಯದ ಅವಶ್ಯಕತೆಗಳಿಗಾಗಿ ನೀಡುವುದಾಗಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಯೋಗಿ ತಿಳಿಸಿದ್ದಾರೆ.

    ಇದೇ ವೇಳೆ ರಾಜ್ಯದಲ್ಲಿ 23 ಮಂದಿಗೆ ಕರೊನಾ ಸೋಂಕು ತಗುಲಿದೆ. ಅದರಲ್ಲಿ 9 ಮಂದಿಗೆ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಪ್ರತ್ಯೇಕ ವಾರ್ಡ್​ಗಳನ್ನು ಆಸ್ಪತ್ರೆಗಳಲ್ಲಿ ಸ್ಥಾಪಿಸಬೇಕೆಂಬ ಕೇಂದ್ರ ಸಲಹೆಯ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಅಗತ್ಯವಾದಷ್ಟು ಪ್ರತ್ಯೇಕ ವಾರ್ಡ್​ಗಳಿವೆ ಎಂದರು. ಇದೇ ವೇಳೆ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸುವಂತೆ ಕೋರಿದರು.

    ದೇಶಾದ್ಯಂತ ಸೋಂಕಿತರ ಸಂಖ್ಯೆ 275ಕ್ಕೇರಿದ್ದು, ಓರ್ವ ಇಟಲಿ ಪ್ರಜೆ ಸೇರಿದಂತೆ 5 ಮಂದಿ ಬಲಿಯಾಗಿದ್ದಾರೆ. (ಏಜೆನ್ಸೀಸ್​)

    ತಮ್ಮ ವಿರುದ್ಧ ಜಾಲತಾಣದಲ್ಲಿ ಹರಿದಾಡುತ್ತಿರೋ ವದಂತಿಗಳಿಗೆ ಖಡಕ್​ ಪ್ರತಿಕ್ರಿಯೆ ನೀಡಿದ ಕರೊನಾ ಸೋಂಕಿತ ಬಾಲಿವುಡ್​ ಗಾಯಕಿ

    ಕರೊನಾ ಸೋಂಕು ಇರುವುದನ್ನು ಮುಚ್ಚಿಟ್ಟ ಮಹಿಳೆಗೆ ಚೀನಾ ಸರ್ಕಾರ ಎಂಥಾ ಶಿಕ್ಷೆ ವಿಧಿಸಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts