ತಮ್ಮ ವಿರುದ್ಧ ಜಾಲತಾಣದಲ್ಲಿ ಹರಿದಾಡುತ್ತಿರೋ ವದಂತಿಗಳಿಗೆ ಖಡಕ್​ ಪ್ರತಿಕ್ರಿಯೆ ನೀಡಿದ ಕರೊನಾ ಸೋಂಕಿತ ಬಾಲಿವುಡ್​ ಗಾಯಕಿ

ನವದೆಹಲಿ: ಕರೊನಾ ವೈರಸ್​ ಪಾಸಿಟಿವ್​ ತಿಳಿದ ಬೆನ್ನಲ್ಲೇ ತನ್ನ ವಿರುದ್ಧ ಹರಿದಾಡುತ್ತಿರುವ ಎಲ್ಲ ವದಂತಿಗಳಿಗೆ ಬಾಲಿವುಡ್​ ಗಾಯಕಿ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ಸ್ಕ್ರೀನಿಂಗ್​ನಿಂದ ತಪ್ಪಿಸಿಕೊಳ್ಳಲು ಯತ್ನಿಸಲಿಲ್ಲ. ಅಧಿಕಾರಿಗಳ ಪರೀಕ್ಷೆಗೂ ಒಳಗಾಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಕನ್ನಿಕಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳ ಸುರಿಮಳೆ ಬರುತ್ತಿದೆ. ಈ ತಿಂಗಳ ಆರಂಭದಲ್ಲಿ ಲಂಡನ್​ನಿಂದ ಮರಳಿದ ಕನ್ನಿಕಾಗೆ ಕೋವಿಡ್​-19 ಇದೆ ಎಂದು ಗೊತ್ತಾದ ಬಳಿಕವೂ ಅದನ್ನು ನಿರ್ಲಕ್ಷಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿವೆ. … Continue reading ತಮ್ಮ ವಿರುದ್ಧ ಜಾಲತಾಣದಲ್ಲಿ ಹರಿದಾಡುತ್ತಿರೋ ವದಂತಿಗಳಿಗೆ ಖಡಕ್​ ಪ್ರತಿಕ್ರಿಯೆ ನೀಡಿದ ಕರೊನಾ ಸೋಂಕಿತ ಬಾಲಿವುಡ್​ ಗಾಯಕಿ