More

    ಕರೊನಾವೈರಸ್ ತಡೆಗಿದೆ ಚುಚ್ಚುಮದ್ದು!

    ಅಥಣಿ(ಬೆಳಗಾವಿ): ಕರೊನಾವೈರಸ್ ಹರಡದಂತೆ ನಿಯಂತ್ರಿಸಲು ನಮ್ಮ ದೇಶದಲ್ಲೇ ಚುಚುಮದ್ದು ಇದ್ದು, ಅದನ್ನು ಸಮರ್ಪಕವಾಗಿ ಬಳಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಪಟ್ಟಣದ ಖಾಸಗಿ ವೈದ್ಯ, ಕಾನ್ಸರ್ ತಜ್ಞ ಡಾ.ರಮೇಶ ಗುಳ್ಳ ತಿಳಿಸಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿ ಮಾಧ್ಯಮದವರ ಎದುರು ಕುಟುಂಬದವರೆಲ್ಲರಿಗೂ ಎಂಆರ್ ಅಥವಾ ಎಂಎಂಆರ್ (ಮಿಜಲ್ಸ್ ಮಮ್ಸ್​ ರುಬೊಲಾ) ಚುಚ್ಚುಮದ್ದು ನೀಡುವ ಮೂಲಕ ಮಾಹಿತಿ ನೀಡಿದರು.

    ಕರೊನಾ ವೈರಾಣುವಿನಂತೆಯೇ ಇರುವ ರುಬೊಲಾ ಎಂಬ ಇನ್ನೊಂದು ಹಳೇ ವೈರಾಣುವಿಗೆ ಇದರ ಶೇ.30 ಹೋಲಿಕೆ ಇರುವುದು ಗೊತ್ತಾಗಿದೆ. ಹೀಗಾಗಿ ರುಬೊಲಾ ರೋಗ ಬಾರದಂತೆ ತಡೆಯಲು 1971ರಿಂದಲೇ ಭಾರತದಲ್ಲಿ ಲಭ್ಯವಿರುವ ಎಂಆರ್ ಅಥವಾ ಎಂಎಂಆರ್ ಲಸಿಕೆ ನೀಡಿದರೆ ಸೋಂಕು ತಗಲುವುದನ್ನು ಮೊದಲೇ ತಡೆಯಬಹುದು. ಅಲ್ಲದೆ, ಈ ಚುಚ್ಚುಮದ್ದಿನಿಂದ ಕರೊನಾ ರೋಗಿ ಮರಣ ಹೊಂದುವುದನ್ನು ತಪ್ಪಿಸಬಹುದಾಗಿದೆ ಎಂದರು. ಈ ಚುಚುಮದ್ದು ದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಯಾರೂ ಇದನ್ನು ಸದುಪಯೋಗ ಪಡಿಸಿಕೊಂಡಿಲ್ಲ ಎಂದರು.

    ಇದನ್ನೂ ಓದಿ  ಕರೊನಾದಿಂದ ತತ್ತರಿಸಿಹೋಗಿವೆ ಭಯೋತ್ಪಾದಕ ಶಿಬಿರಗಳು

    150 ರೂ. ವೆಚ್ಚ: ಸರ್ಕಾರ ಕರೊನಾ ಸಲುವಾಗಿ ದುಂದುವೆಚ್ಚ ಮಾಡುವ ಬದಲು ಕೇವಲ 150 ರೂ.ಗೆ ಲಭ್ಯವಿರುವ ಈ ಲಸಿಕೆಯನ್ನು ಸಮರ್ಪಕವಾಗಿ ಎಲ್ಲರಿಗೂ ನೀಡಿದರೆ ದೇಶವನ್ನು ಕರೊನಾಮುಕ್ತಗೊಳಿಸಬಹುದು. ಈ ಚುಚ್ಚುಮದ್ದಿನಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಈಗಾಗಲೆ ರಾಜ್ಯ ಸರ್ಕಾರದ ಗಮನಕ್ಕೂ ತಂದಿರುವುದಾಗಿ ತಿಳಿಸಿದರು.

    ಎಂಆರ್ ಅಥವಾ ಎಂಎಂಆರ್ ಚುಚ್ಚುಮದ್ದು ನೀಡುವುದರಿಂದ ಕರೊನಾ ಹರಡುವುದನ್ನು ತಡೆಗಟ್ಟುವ ಕುರಿತಾಗಿ ವೈಜ್ಞಾನಿಕವಾಗಿ ಎಲ್ಲಿಯೂ ಸಾಬೀತಾಗಿಲ್ಲ.

    | ಡಾ. ಓಂಪ್ರಕಾಶ್ ಆರ್. ಪಾಟೀಲ್, ನಿರ್ದೇಶಕರು, ಆರೋಗ್ಯ ಇಲಾಖೆ

    ನಮ್ಮ ದೇಶದಲ್ಲಿ ಈಗಾಗಲೇ ಬಿಜಿಸಿ, ಡಿಪಿಟಿ, ಸ್ಮಾಲ್ ಪಾಕ್ಸ್ ಸೇರಿ ಹಲವು ಲಸಿಕೆಗಳನ್ನು ನೀಡಲಾಗಿದೆ. ಅವನ್ನು ಮತ್ತೊಮ್ಮೆ ನೀಡುವ ಅಗತ್ಯವಿಲ್ಲ. ಈ ಲಸಿಕೆ ಕೊಡಲು ದೇಶದಲ್ಲಿ ಒಂದು ಶಿಷ್ಟಾಚಾರವಿದೆ. ಯಾರಿಗೆ ಯಾವಾಗ ಬೇಕಾದರೂ ಈ ಲಸಿಕೆಗಳನ್ನು ಕೊಡುವಂತಿಲ್ಲ.

    | ಡಾ.ಸಿ.ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಕ್ಯಾನ್ಸರ್ ಗಂಥಿ ಸಂಸ್ಥೆ

    ಐಸಿಸಿಯಲ್ಲೂ ಶುರುವಾಗುತ್ತಾ ‘ದಾದಾ’ಗಿರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts