More

    ಶಸಚಿಕಿತ್ಸೆಯಲ್ಲಿ ಅರಿವಳಿಕೆ ಚುಚ್ಚುಮದ್ದು ಅತ್ಯವಶ್ಯ

    ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ಹೆರಿಗೆಯಿಂದ ಹಿಡಿದು ಸಣ್ಣ ಶಸಚಿಕಿತ್ಸೆವರೆಗೂ ಅರಿವಳಿಕೆ ಅತ್ಯವಶ್ಯ ಎಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ್ಯ, ಕಾಹೆರ್ ಉಸ್ತುವಾರಿ ಉಪಕುಲಪತಿ ಡಾ.ಎನ್.ಎಸ್.ಮಹಾಂತಶೆಟ್ಟಿ ಹೇಳಿದರು.

    ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಅರಿವಳಿಕೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 176 ವರ್ಷಗಳಷ್ಟು ಹಳೆಯ ಪದ್ಧತಿಯಾದ ಅರಿವಳಿಕೆ ನೀಡುವಿಕೆ ವೈದ್ಯಕೀಯ ಕ್ಷೇತ್ರದ ಸುಧಾರಣೆಗೆ ಹೊಂದಿಕೊಳ್ಳುತ್ತ ಕೇವಲ ನೋವು ರಹಿತವಾಗಿರದೆ ಅನೇಕ ಕೊಡುಗೆಗಳನ್ನು ನೀಡುತ್ತಲಿದೆ. ಅಂಗಾಂಗ ಕಸಿಯಲ್ಲಿ ಪ್ರಮುಖ ಪಾತ್ರವಹಿಸುವ ಅರಿವಳಿಕೆಯು ಗಾಯವಾದರೂ ಕೂಡ ನೋವು ರಹಿತ ಶಸಚಿಕಿತ್ಸೆ ನೆರವೇರಿಸುವಲ್ಲಿ ಅಗತ್ಯವಾಗಿ ಬೇಕು ಎಂದರು. ಕಾಹೆರ್ ಕುಲಸಚಿವ ಡಾ.ವಿ.ಎ.ಕೋಠಿವಾಲೆ, ಹೊಸ ಯೋಜನೆಗಳ ನಿರ್ದೇಶಕ ಡಾ.ವಿ.ಡಿ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ.ಜಾಲಿ, ಡಾ.ಆರ್.ಬಿ.ನರೇಲಿ, ಡಾ.ರಾಜೇಶ ಪವಾರ, ಡಾ.ಆರ್ಿ ಮಾಲ್ದಾರ, ಡಾ.ಎಂ.ಜಿ.ಧೊರಿಗೋಳ, ಡಾ.ಸಿ.ಎಸ್.ಸಾಣಿಕೊಪ್ಪ, ಡಾ.ವಂದನಾ ಘೊಗಟೆ, ಡಾ.ಮಂಜುನಾಥ ಪಾಟೀಲ, ಡಾ.ಕೇದಾರೇಶ್ವರ, ಡಾ.ಮಹಾಂತೇಶ ಮುದಕನಗೌಡರ, ಡಾ.ಎಸ್.ಸಿ.ಮೆಟಗುಡ್ಡ, ಡಾ.ಎ.ಎಸ್.ಗೋಗಟೆ, ಡಾ. ಶ್ರೀದೇವಿ ಯೆನ್ನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts