More

    ಹಾಂಗ್​ಕಾಂಗ್​​ನ ಕೊರೊನಾ ವೈರಸ್​ ರೋಗಿಯ ಮನೆಯ ಸಾಕು ನಾಯಿಯಲ್ಲಿ ವೈರಸ್​ ಪತ್ತೆ

    ಹಾಂಗ್​ಕಾಂಗ್​: ಕೊರೊನಾ ವೈರಸ್​ ರೋಗಿಯ ಮನೆಯಲ್ಲಿದ್ದ ಸಾಕು ನಾಯಿಯಲ್ಲಿ ವೈರಸ್​ ಪತ್ತೆಯಾಗಿರುವ ಅಪರೂಪದ ಪ್ರಕರಣ ಹಾಂಗ್​ಕಾಂಗ್​ನಿಂದ ವರದಿಯಾಗಿದೆ.

    ರೋಗಿಯ ಮನೆಯಲ್ಲಿದ್ದ ಸಾಕು ನಾಯಿಯ ರಕ್ತದಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದೆ ಎಂದು ಹಾಂಗ್​ಕಾಂಗ್​ ಸರ್ಕಾರ ಹೇಳಿದೆ.

    ಹಾಂಗ್​ಕಾಂಗ್​ನ ಕೃಷಿ ಮತ್ತು ಮೀನುಗಾರಿಕೆ ಇಲಾಖೆ ನಾಯಿಯಲ್ಲಿ ವೈರಸ್​ ಪತ್ತೆಯಾಗಿರುವುದನ್ನು ದೃಢಪಡಿಸಿದೆ.
    ನಾಯಿಗೆ ಯಾವ ರೀತಿ ವೈರಸ್​ ಹರಡಿದೆ ಎಂಬುದನ್ನು ಪತ್ತೆ ಮಾಡಲು ಇನ್ನಷ್ಟು ಪರೀಕ್ಷೆ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ. ಪರಿಸರ ಮಾಲಿನ್ಯದಿಂದ ನಾಯಿಗೆ ಸೋಂಕು ಹರಡಿದೆಯೇ ಅಥವಾ ಮನುಷ್ಯ ಹಾಗೂ ಇತರ ಪ್ರಾಣಿಗಳಿಂದ ಹರಡಿದೆಯೇ ಎಂಬುದನ್ನು ತಪಾಸಣೆ ಮಾಡಲಾಗುವುದು ಎಂದು ಇಲಾಖೆ ಹೇಳಿದೆ.

    ಕೆಲವರು ಬಾವಲಿಗಳಿಂದ ಮನುಷ್ಯರಿಗೆ ವೈರಸ್​ ಹರಡಿದೆ ಎಂದು ನಂಬಿದ್ದಾರೆ. ಆದರೆ ಪ್ರಾಣಿಗಳಿಂದ ಕೊರೊನಾ ವೈರಸ್ ಹರಡುತ್ತದೆ ಎಂಬುದಕ್ಕೆ ಇಲ್ಲಿವರೆಗೂ ಯಾವುದೇ ಪುರಾವೆಗಳು ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಚೀನಾದಲ್ಲಿ ಪತ್ತೆಯಾದ ಕೊರೊನಾ ವೈರಸ್​ಗೆ ಇಲ್ಲಿವರೆಗೂ 2,800 ಮಂದಿ ಬಲಿಯಾಗಿದ್ದಾರೆ. 82 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts