More

    ಎಷ್ಟು ನಿಮಿಷಗಳಲ್ಲಿ ಕರೊನಾ ಹರಡುತ್ತೆ? ಕೆಮ್ಮಿದಾಗ ಬರುವ ವೈರಸ್​ ಕಣಗಳೆಷ್ಟು?: ಇಲ್ಲಿದ ಆಘಾತಕಾರಿ ಮಾಹಿತಿ

    ಬೆಂಗಳೂರು: ಜಾಗತಿಕವಾಗಿ ಕಾಡುತ್ತಿರುವ ಮಹಾಮಾರಿ ಕರೊನಾ ವೈರಸ್​ ಅತ್ಯಂತ ವೇಗವಾಗಿ ಹರಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಹೀಗಾಗಿಯೇ ವೈರಸ್​ ಜಗತ್ತಿನೆಲ್ಲಡೆ ಪಸರಿಸಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ ಜನರ ಭೇಟಿ ಇದ್ದೇ ಇರುತ್ತದೆ. ಹೀಗಾಗಿ ಸೋಂಕಿನ ಭಯವೂ ತಪ್ಪಿದ್ದಲ್ಲ. ಒಬ್ಬ ಸೋಂಕಿತನಿಂದ ವೈರಸ್​ ಹರಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೇ ಎಂಬ ಪ್ರಶ್ನೆಯು ಜನಸಾಮಾನ್ಯರಲ್ಲಿ ಕೇಳಿಬರುತ್ತಿದೆ. ಅದರಂತೆ ತಜ್ಞರು ಹೇಳುವ ಮೂಲಕ ವೈರಸ್​ ಹರಡಲು 5 ರಿಂದ 50 ನಿಮಿಷಗಳು ಸಾಕೆಂದು ಅಮೆರಿಕದ ಮೆಸ್ಯಾಚುಸೆಟ್ಸ್​ ಅಧ್ಯಾಪಕರು ವರದಿಯನ್ನು ನೀಡಿದ್ದಾರೆ.

    ಇದನ್ನೂ ಓದಿ: ಚಪ್ಪಲಿ ಹೊಲಿಯೋ ಹುಡುಗ ಎಸ್ಸೆಸ್ಸೆಲ್ಸಿ ಟಾಪರ್: ಇದು ನಿಜವಲ್ಲ, ಆದ್ರೂ ಸುಳ್ಳು ಅನಿಸುವುದೂ ಇಲ್ಲ!

    ಇನ್ನು ಸೋಂಕಿತ ಕೆಮ್ಮಿದಾಗ ಎಷ್ಟು ವೈರಸ್​ ಕಣಗಳು ಬಾಯಿಯಿಂದ ಆಚೆ ಬರುತ್ತವೆ ಎಂಬುದನ್ನು ತಜ್ಞರು ತಿಳಿಸಿದ್ದು, ಒಮ್ಮೆ ಕೆಮ್ಮಿದರೆ 3 ಸಾವಿರ ವೈರಸ್​ನ ಕಣಗಳು ಆಚೆ ಬರುತ್ತವೆ. ಇನ್ನು ಅಕ್ಕಪಕ್ಕ ಇರುವ ಸೋಂಕಿತರು ಒಂದು ಹತ್ತು ಬಾರಿಯೇನಾದರೂ ಕೆಮ್ಮಿದರೆ ಬರೋಬ್ಬರಿ 30 ಸಾವಿರ ವೈರಸ್​ ಕಣಗಳ ಆಚೆ ಬರುತ್ತವೆ ಎಂದು ಎಚ್ಚರಿಸಿದ್ದಾರೆ.

    ಮೊದಲೇ ಆರೋಗ್ಯ ಸಮಸ್ಯೆ ಹೊಂದಿದ್ದರೆ, ಸೋಂಕು ಬೇಗ ತಗುಲುತ್ತದೆ. ಶಕ್ತಿವಂತ ಹಾಗೂ ಆರೋಗ್ಯಯುತ ಮಾನವನ ದೇಹ ಸೇರಲು 50 ನಿಮಿಷ ಸಾಕು ಎನ್ನುತ್ತಾರೆ ತಜ್ಞರು. ಮಾಸ್ಕ್​ ಇಲ್ಲದೇ ಮಾತನಾಡಿದರೆ ವೈರಸ್​ ದೇಹ ಸೇರೋಕೆ ಐದು ನಿಮಿಷ ಸಾಕಂತೆ.

    ಇನ್ನು ಕೆಮ್ಮಿನ ಕಣಗಳು ಗಾಳಿಯಲ್ಲಿ ಗಂಟೆ 50 ಮೈಲಿ ವೇಗದಲ್ಲಿ ಚಲಿಸುತ್ತವೆ ಮತ್ತು ಸೀನಿದಾಗ 200 ಮೈಲಿ ವೇಗವಾಗಿ ಚಲಿಸುತ್ತವೆಯಂತೆ. ಒಂದು ವೇಳೆ ವೈರಸ್​ ಕಣಗಳು ಕೈಮೇಲೆ ಬಿದ್ದು, ಗೊತ್ತಿಲ್ಲದೇ ಕಣ್ಣಿಗೆ ಉಜ್ಜಿಕೊಂಡರೆ ನೂರಾರು ವೈರಸ್​ ಕಣಗಳು ದೇಹ ಸೇರುತ್ತವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್ ಸಮಯದಲ್ಲಿ ಹಿತ್ತಲಲ್ಲಿ ಬೆಳೆದ ತರಕಾರಿ ತಿಂದವಳಿಗೆ ಕಾದಿತ್ತು ಬಿಗ್​ ಶಾಕ್​!

    ಹೀಗಾಗಿ ಕರೊನಾ ವೈರಸ್​ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು. ಮಾಸ್ಕ್​ ಇಲ್ಲದೇ ಹೊರ ಹೋಗಬೇಡಿ, ಮಾಸ್ಕ್​ ಇದ್ದರೂ ಇನ್ನೊಬ್ಬರೊಂದಿಗೆ ಮಾತನಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಅಮ್ಮ-ಮಗಳು ಇಬ್ಬರಿಗೂ ಒಬ್ಬನೇ ಗಂಡ- ಬೀದಿಗೆ ಬಂದ ಜಗಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts