More

    ಹಿತ್ತಲಲ್ಲಿ ಬೆಳೆದ ಕೋರ್ಗೆಟ್ಸ್ ತರಕಾರಿ ತಿಂದಾಕೆಗೆ ಇದೇನಾಯಿತು!

    ಲಂಡನ್​: ಕರೊನಾ ವೈರಸ್​ ಲಾಕ್​ಡೌನ್​ ಸಮಯದಲ್ಲಿ ತಮ್ಮ ಮನೆಯ ಹಿತ್ತಲಿನಲ್ಲಿ ಬೆಳೆದ ಸೋರೆಕಾಯಿ ಜಾತಿಯ ಕೋರ್ಗೆಟ್ಸ್ ತರಕಾರಿ ತಿಂದ ಮಹಿಳೆಯೊಬ್ಬಳು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.

    ಇಂಗ್ಲೆಂಡ್​ನ ಎಸ್ಸೆಕ್ಸ್​ನಲ್ಲಿರುವ ಸೌಥ್​ಎಂಡ್ ಪಟ್ಟಣದ ನಿವಾಸಿಯಾಗಿರುವ ಡ್ಯಾನಿಯಲ್ಲೆ ಬಾಕ್ಸ್ಟರ್​ (38) ತಮ್ಮ ಮನೆಯ ಹಿತ್ತಲಿನಲ್ಲಿ ಕೋರ್ಗೆಟ್ಸ್ ಬೀಜಗಳು ಲಾಕ್​ಡೌನ್​ ಸಮಯದಲ್ಲಿ ಬಿತ್ತಿದ್ದರು. ಇದರ ಬೀಜಗಳು ಅಪಾಯಾಕಾರಿ ಎಂದು ಎಚ್ಚರಿಸಿದ್ದರೂ ಸಹ ಅದನ್ನು ತರಕಾರಿಯೊಂದಿಗೆ ರೋಸ್ಟ್​ ಮಾಡಿ ಊಟದಲ್ಲಿ ತಿಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

    ಇದನ್ನೂ ಓದಿ: ತಮ್ಮನಿಗೆ ಕರೊನಾ ಸೋಂಕು ದೃಢವಾದ ಬೆನ್ನಲ್ಲೇ ನೇಣಿಗೆ ಶರಣಾದ ಅಣ್ಣ

    ಇನ್ನು ಘಟನೆಯ ಬೆನ್ನಲ್ಲೇ ಬ್ರಿಟಿಷ್ ಬೀಜ ಕಂಪನಿಯನ್ನು ಹೊಂದಿರುವ ವೆಸ್ಟ್ಲ್ಯಾಂಡ್, ಕಳೆದ ರಾತ್ರಿಯೇ ಕೋರ್ಗೆಟ್ಸ್ ಬೀಜ ಉತ್ಪನ್ನದ ಮಾರಾಟವನ್ನು ನಿಲ್ಲಿಸಿದೆ. ಇನ್ನು ಕೋರ್ಗೆಟ್ಸ್ ಬೀಜಗಳಲ್ಲಿ ಅಪಾಯಾಕಾರಿ ವಿಷ ಪತ್ತೆಯಾಗಿದ್ದು, ಇದು ಮಾನವನಿಗೆ ಪ್ರಾಣಾಂತಕವಾಗಿದೆ. ಕುಕುರ್ಬಿಟಾಸಿನ್ಸ್​ ಜಾತಿಗೆ ಸೇರಿದ ಕೋರ್ಗೆಟ್ಸ್ ಕಹಿಯನ್ನು ಹೊಂದಿರುತ್ತದೆ.

    ಕೋರ್ಗೆಟ್ಸ್ ಬೀಜದಲ್ಲಿ ಟಾಕ್ಸಿನ್​ ಅಂಶವಿದ್ದು, ಇದನ್ನು ಕಡಿಮೆ ಸೇವಿಸಿದರೆ ಯಾವುದೇ ತೊಂದರೆಯಿಲ್ಲ. ಆದರೆ, ಹೆಚ್ಚು ಪ್ರಮಾಣದಲ್ಲಿ ಸೇವಿಸಿದಾಗ ಹೆಚ್ಚು ಟಾಕ್ಸಿಕ್​ ದೇಹ ಸೇರಿ, ಇದರಿಂದ ವಾಕರಿಕೆ, ವಾಂತಿ, ಬೇದಿ ಮತ್ತು ಕೂದಲು ಉದುರುವಿಕೆ ಸೇರಿದಂತೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಸಾವು ಸಂಭವಿಸುವ ಸಾಧ್ಯತೆಯು ಸಹ ಇರುತ್ತದೆ.

    ಇದನ್ನೂ ಓದಿ: ಇನ್ನೂ ಒಂದು ವಾರ ಲಾಕ್​ಡೌನ್? ವಿಸ್ತರಣೆಗೆ ತಜ್ಞರ ಸಲಹೆ; ಸಿಎಂಗೆ ಸಂದಿಗ್ಧ; ನಾಳೆ ತೀರ್ಮಾನ ಸಾಧ್ಯತೆ

    ಅದರಂತೆ ಕೋರ್ಗೆಟ್ಸ್ ಬೀಜಗಳನ್ನು ತರಕಾರಿಯಲ್ಲಿ ರೋಸ್ಟ್​ ಮಾಡಿ ತಿಂದ ಡ್ಯಾನಿಯಲ್ಲೆ ಬಾಕ್ಸ್ಟರ್​ಗೆ ತಕ್ಷಣ ದೇಹದ ಉಷ್ಣಾಂಶ ಹೆಚ್ಚಾಗಿದೆ. ವಾಂತಿ ಆರಂಭವಾಗಿ, ಬೇದಿಯು ಸಹ ಆಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಆಕೆ ಐದು ದಿನಗಳ ನಂತರ ಸಹಜ ಸ್ಥಿತಿಗೆ ಮರಳುತ್ತಿದ್ದಾಳೆ. (ಏಜೆನ್ಸೀಸ್​)

    VIDEO| ಬೆಳ್ಳಂಬೆಳಗ್ಗೆಯೇ ರಾಷ್ಟ್ರ ರಾಜಧಾನಿಯಲ್ಲಿ ವರುಣನ ಆರ್ಭಟ: ರಸ್ತೆಗಳು ಜಲಾವೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts