More

    ಏಪ್ರಿಲ್​ 14ರ ನಂತರವೂ ಲಾಕ್​ಡೌನ್​ ಮುಂದುವರಿಕೆ ಬಹುತೇಕ ಖಚಿತ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಇಂಗಿತ

    ನವದೆಹಲಿ: ಕರೊನಾ ವೈರಸ್​ ಸೋಂಕು ತಡೆಗಟ್ಟಲು ಭಾರತದಾದ್ಯಂತ ಹೇರಲಾಗಿರುವ ಲಾಕ್​ಡೌನ್​ ಅನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವ ಸಾಧ್ಯತೆಯಿಲ್ಲ. ಏಪ್ರಿಲ್​ 14ರ ನಂತರವೂ ಲಾಕ್​ಡೌನ್​ ಮುಂದುವರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸರ್ವಪಕ್ಷಗಳ ಸಭೆಯಲ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ.

    ಇಂದು ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ವಿವಿಧ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಲಾಕ್​ಡೌನ್​ ವಿಸ್ತರಣೆ ಸಂಬಂಧ ಈಗಾಗಲೇ ಒಮ್ಮೆ ಚರ್ಚಿಸಲಾಗಿದೆ. ಹೀಗಾಗಿ ಲಾಕ್​ಡೌನ್​ ಅನ್ನು ಶೀಘ್ರವಾಗಿ ಹಿಂಪಡೆಯುವ ಯಾವುದೇ ಸಾಧ್ಯತೆ ಇಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಸದ್ಯಕ್ಕೆ ಲಾಕ್​ಡೌನ್ ಹಿಂಪಡೆಯುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ದಿಗ್ಬಂಧನ ಮುಂದುವರಿಸುವುದು ಉತ್ತಮ ಎಂಬ ಅಭಿಪ್ರಾಯವನ್ನು ಕಳೆದ ಶನಿವಾರ ನಡೆದ ಸಭೆಯಲ್ಲಿ ಪ್ರಧಾನಿ ಮೋದಿಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮನವರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಲಾಕ್​ಡೌನ್​ ಮುಂದುವರಿಸುವ ಕ್ರಮವನ್ನು ಪ್ರಧಾನಿ ಮೋದಿ ಶೀಘ್ರವೇ ತೆಗದುಕೊಳ್ಳಲಿದ್ದಾರೆ.

    ಸರ್ವಪಕ್ಷ ಸಭೆಯಲ್ಲಿ ಉಪಸ್ಥಿತರಿದ್ದ ಬಿಜು ಜನತಾದಳದ ಸಂಸದ ಪಿಣಕಿ ಮಿಶ್ರಾ ಅವರು ಮಾತನಾಡಿ, ಲಾಕ್​ಡೌನ್​ ಸಡಿಲಗೊಳಿಸುವ ಸಾಧ್ಯತೆ ಇಲ್ಲ. ಪೂರ್ವ ಕರೊನಾ ಮತ್ತು ಕರೊನಾ ನಂತರದ ಜೀವನ ಒಂದೇ ರೀತಿಯಾಗಿರುವುದಿಲ್ಲ ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲಾಕ್​ಡೌನ್​ ಸಡಿಲಗೊಳಿಸಿದರೆ ಪರಿಸ್ಥಿತಿ ಮತ್ತಷ್ಟು ಭೀಕರತೆಗೆ ಸಾಕ್ಷಿಯಾಗಬಹುದು ಎಂಬುದು ಮೋದಿ ಆಲೋಚನೆಯಾಗಿದ್ದು, ದೇಶದ ಭವಿಷ್ಯ ಹಾಗೂ ಜನರ ಆರೋಗ್ಯ ದೃಷ್ಟಿಯಿಂದ ಲಾಕ್​ಡೌನ್​ ಅನಿವಾರ್ಯ ಎಂಬ ನಿರ್ಣಯಕ್ಕೆ ಬಂದಿದ್ದಾರೆ ಎಂದು ಮಿಶ್ರಾ ವಿವರಿಸಿದರು.

    ಈ ವೀಕೆಂಡ್​ನಲ್ಲಿ ಮತ್ತೊಮ್ಮೆ ಎಲ್ಲ ರಾಜ್ಯದ ಸಿಎಂಗಳೊಂದಿಗೆ ಸಭೆ ಸೇರಿ ಲಾಕ್​ಡೌನ್​ ವಿಸ್ತರಣೆ ಸಂಬಂಧ ಪ್ರಧಾನಿ ಮೋದಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದು ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಇದರ ನಡುವೆ ಅನೇಕ ರಾಜ್ಯಗಳು ಸಹ ಲಾಕ್​ಡೌನ್​ ವಿಸ್ತರಿಸುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಳ್ಳುತ್ತಿವೆ. ಆರ್ಥಿಕ ಬಿಕ್ಕಟ್ಟು ಎದುಹರಾದರೂ ಸಹ ಆರೋಗ್ಯವೇ ಮುಖ್ಯವೆಂಬ ನಿರ್ಧಾರಕ್ಕೆ ಎಲ್ಲ ರಾಜ್ಯಗಳು ಬಂದಿದ್ದು, ಬಹುತೇಕ ಲಾಕ್​ಡೌನ್​ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರ ಈ ವಾರಾಂತ್ಯದಲ್ಲಿ ತಿಳಿಯಲಿದೆ.

    ಇನ್ನು ಹಂತ ಹಂತವಾಗಿ ಲಾಕ್​ಡೌನ್​ ಸಡಿಲಗೊಳಿಸುವ ಸೂಚನೆಯನ್ನು ಈಗಾಗಲೇ ಪ್ರಧಾನಿ ಮೋದಿ ನೀಡಿದ್ದಾರೆ. ಇದಕ್ಕಾಗಿ ಶ್ರೇಣಿಕೃತ ಯೋಜನೆ ಸಿದ್ಧಪಡಿಸಲು ಕೇಂದ್ರ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದ್ದು, ಕರೊನಾ ವೈರಸ್​ ಬಾಧಿತವಲ್ಲದ ಕ್ಷೇತ್ರಗಳಲ್ಲಿ ನಿಧಾನವಾಗಿ ವಿವಿಧ ಇಲಾಖೆಗಳನ್ನು ತೆರೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದರೆ, ಇದು ಯಾವ ರೀತಿ ಇರಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. (ಏಜೆನ್ಸೀಸ್​)

    ಭಾರತದಲ್ಲೂ ಚೀನಾ ಮಾದರಿ ದಿಗ್ಬಂಧನ: ಉತ್ತರ ಪ್ರದೇಶದಲ್ಲಿ 15 ಜಿಲ್ಲೆಗಳು ‘ಸೀಲ್​’

    ಅಮೆರಿಕಕ್ಕೆ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಕೆ: ಮೋದಿಯನ್ನು ಹಾಡಿ ಹೊಗಳಿ ಕೊಂಡಾಡಿದ ಟ್ರಂಪ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts