More

    ಕಿಲ್ಲರ್​ ಕರೊನಾಗೆ ದೇಶದಲ್ಲಿ ಮತ್ತೊಂದು ಬಲಿ: ಒಂದೇ ದಿನದಲ್ಲಿ ಮೂವರು ಸಾವು, ಮೃತರ ಸಂಖ್ಯೆ 8ಕ್ಕೇರಿಕೆ

    ನವದೆಹಲಿ: ಡೆಡ್ಲಿ ಕರೊನಾ ವೈರಸ್​ ಸೋಂಕಿಗೆ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ. 7 ಭಾರತೀಯರು ಹಾಗೂ ಓರ್ವ ಇಟಲಿ ಪ್ರಜೆ ಸೇರಿ ದೇಶದಲ್ಲಿ ಈವರೆಗೆ 8 ಮಂದಿ ಸಾವಿಗೀಡಾಗಿದ್ದಾರೆ.

    ಗುಜರಾತಿನ ಸೂರತ್​ ಮೂಲದ 67 ವರ್ಷದ ವೃದ್ಧ ಕರೊನಾ ವೈರಸ್​ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸಾವಿಗೀಡಾದ ಮೂರನೇ ಪ್ರಕರಣ ಇದಾಗಿದೆ. ಮೃತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವ ಮುನ್ನ ದೆಹಲಿ, ಜೈಪುರ ಮತ್ತಿ ಸೂರತ್​ಗಳಲ್ಲಿ ಪ್ರಯಾಣ ಮಾಡಿದ್ದ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆಯಷ್ಟೇ 56 ವರ್ಷದ ಮುಂಬೈ ಮಹಿಳೆ ಸಾವಿಗೀಡಾಗಿದ್ದರು. ಮಧ್ಯಾಹ್ನ ಬಿಹಾರ ರಾಜಧಾನಿ ಪಟನಾದಲ್ಲಿ 38 ವರ್ಷದ ಸೋಂಕಿತ ವ್ಯಕ್ತಿ ಹತರಾಗಿದ್ದರು.

    ಬಿಹಾರದ ವ್ಯಕ್ತಿ ಶನಿವಾರ ಬೆಳಗ್ಗೆ ಪಟನಾದ ಆಲ್​ ಇಂಡಿಯಾ ಮೆಡಿಕಲ್​ ಇನ್ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದ. ಆದರೆ ಸಾವಿನ ಬಗ್ಗೆ ಮಾಹಿತಿ ಖಚಿತವಾಗಿರಲಿಲ್ಲ. ಇದೀಗ ಕೋವಿಡ್​ 19ನಿಂದಲೇ ಮೃತರಾಗಿರುವುದು ಧೃಡವಾಗಿದೆ. ಮೃತ ವ್ಯಕ್ತಿ ಕತಾರ್​ನಿಂದ ಬಂದಿದ್ದ ಎಂದು ಟ್ರಾವೆಲ್​ ಹಿಸ್ಟರಿಯಲ್ಲಿ ಬಹಿರಂಗವಾಗಿದೆ.

    ಬೆಳಗ್ಗೆ ಮೃತರಾದ ಮುಂಬೈ ಮಹಿಳೆಯು ಎಚ್​.ಎನ್​. ರಿಲಯನ್ಸ್​ ಆಸ್ಪತ್ರೆಯಲ್ಲಿ ಮಾರ್ಚ್​ 21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್​ 19 ಸೋಂಕಿನಿಂದ ಭಾನುವಾರ ಬೆಳಗ್ಗೆ ಮೃತರಾಗಿದ್ದಾರೆ.

    ದೇಶದಲ್ಲಿ ಈವರೆಗೆ 300ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ತಗುಲಿದ್ದು, ಓರ್ವ ಇಟಲಿ ಪ್ರಜೆ ಸೇರಿ ಒಟ್ಟು 8 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. (ಏಜೆನ್ಸೀಸ್​)

    PHOTOS| ಕರೊನಾ ಸೋಂಕು ತಗುಲದಂತೆ ಏನು ಮಾಡಬೇಕು? ಮಾಡಬಾರದು?: ಉಪಯುಕ್ತ ಮಾಹಿತಿ ಫೋಟೋಗಳಲ್ಲಿ…

    ಕರೊನಾ ವೈರಸ್ ಲಕ್ಷಣಗಳು 14 ದಿನಗಳಲ್ಲೇ ಕಾಣಿಸಿಕೊಳ್ಳಬೇಕೆಂದೇನೂ ಇಲ್ಲ..17 ದಿನಗಳ ಬಳಿಕವೂ ಪತ್ತೆಯಾಗಬಹುದು..ಎಚ್ಚರ ಇರಲಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts