More

    ಲಾಕ್​ಡೌನ್​ನಿಂದ ಝೆರಾಕ್ಸ್ ಅಂಗಡಿ ತೆರೆಯದಿದ್ರೂ ಬಂತು ಭಾರಿ ಮೊತ್ತದ ವಿದ್ಯುತ್​ ಬಿಲ್: ಮಾಲೀಕ ಕಂಗಾಲು!

    ಹಾವೇರಿ: ಕರೊನಾ ವೈರಸ್​ ತಡೆಗಟ್ಟಲು ಹೇರಲಾಗಿದ್ದ ಲಾಕ್​ಡೌನ್​ ಸಮಯದಲ್ಲಿ ಅಂಗಡಿ ಬಾಗಿಲು ತೆರೆಯದಿದ್ದರೂ ಸಹ ಹಿಂದಿಗಿಂತ ಹೆಚ್ಚಿನ ಕರೆಂಟ್​ ಬಿಲ್​ ನೋಡಿ ಅಂಗಡಿ ಮಾಲೀಕನೊಬ್ಬ ಬೆಸ್ತು ಬಿದ್ದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

    ಇದನ್ನೂ ಓದಿ:ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!

    ರಾಣೆಬೆನ್ನೂರು ಪಟ್ಟಣದ ತಾಯಿ ಝೆರಾಕ್ಸ್ ಅಂಗಡಿ ಮಾಲೀಕ ಪಕ್ಕೀರೆಶ್, ಹುಬ್ಬಳ್ಳಿ ವಿದ್ಯುತ್​ ನಿಗಮ (ಹೆಸ್ಕಾಂ) ಮಾಡಿದ ಎಡವಟ್ಟಿಗೆ ಕಂಗಾಲಾಗಿದ್ದಾರೆ.

    ಲಾಕ್​ಡೌನ್​ನಿಂದ ಝೆರಾಕ್ಸ್ ಅಂಗಡಿ ತೆರೆಯದಿದ್ರೂ ಬಂತು ಭಾರಿ ಮೊತ್ತದ ವಿದ್ಯುತ್​ ಬಿಲ್: ಮಾಲೀಕ ಕಂಗಾಲು!

    ಲಾಕ್​ಡೌನ್ ಹಿನ್ನೆಲೆಯಲ್ಲಿ ಬರೋಬ್ಬರಿ ಒಂದು ತಿಂಗಳಿಗೂ ಅಧಿಕ ಕಾಲ ಇಡೀ ದೇಶವೇ ಸ್ತಬ್ಧವಾಗಿರುವುದು ಎಲ್ಲರಿಗೂ ತಿಳಿದಿದೆ. ಝೆರಾಕ್ಸ್ ಅಂಗಡಿಯ ಸಹ ಇದಕ್ಕೆ ಹೊರತಾಗಿಲ್ಲ. ಆದರೂ ಅದ್ಹೇಗೆ ಹೆಚ್ಚಿನ ಕರೆಂಟ್​ ಬಿಲ್​ ಬಂತು ಎಂಬುದು ಪಕ್ಕೀರೇಶ್​ ಅವರ ಪ್ರಶ್ನೆಯಾಗಿದೆ.

    ಇದನ್ನೂ ಓದಿ: ಇನ್​ಸ್ಟಾಗ್ರಾಂನಲ್ಲಿ ಕೊನೆಯ ಸಂದೇಶ ಬರೆದು ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಯುವನಟಿ

    ಅಂದಹಾಗೆ ಬರೋಬ್ಬರಿ 5433 ರೂ. ಬಿಲ್ ಅನ್ನು ಹೆಸ್ಕಾಂ ನೀಡಿದೆ. ಈ ಮೊದಲು ಪ್ರತಿ ತಿಂಗಳು 600 ರೂ.ಗು ಅಧಿಕ ಬಿಲ್​ ಮಾತ್ರ ಬತುತ್ತಿತ್ತು. ಇದೀಗ ನಾಲ್ಕೈದು ತಿಂಗಳಿನ ಬಿಲ್ ಒಂದೇ ಬಾರಿಗೆ ಹೆಸ್ಕಾಂ ನೀಡಿದೆ ಎಂದು ಪಕ್ಕೀರೆಶ್​ ಆರೋಪಿಸಿದ್ದು, ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ತನ್ನ ದೇಶದ ನರಿಬುದ್ಧಿಯ ವಿರುದ್ಧವೇ ತಿರುಗಿಬಿದ್ದ ಚೀನಾ ಜನತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts