More

    ಕರೊನಾ ಹೇರ್​​ಸ್ಟೈಲ್​ಗೀಗ ಡಿಮ್ಯಾಂಡಪ್ಪೋ ಡಿಮ್ಯಾಂಡು

    ಕಿಲ್ಲರ್ ಕರೊನಾ ಜಗತ್ತಿಗೆ ಕಂಟಕವಾಗಿದೆ. ಈಗ ಇದೇ ಕೊರೊನಾ ವೈರಸ್ ಪೂರ್ವ ಆಫ್ರಿಕಾದಲ್ಲಿ ಕೇಶ ವಿನ್ಯಾಸ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುತ್ತಿದೆ ಎಂದರೆ ನಂಬುತ್ತೀರಾ? ಹೌದು. ಇದು ಸತ್ಯ.


    ಕರೊನಾ ವೈರಸ್​​ನಿಂದಾಗಿ ಉಂಟಾದ ಆರ್ಥಿಕ ಸಂಕಷ್ಟ ಅಗ್ಗದರದ ಈ ಕೇಶ ವಿನ್ಯಾಸ ಜನಪ್ರಿಯಗೊಳ್ಳಲು ಕಾರಣಗಳಲ್ಲಿ ಒಂದಾಗಿದೆ. ಜತೆಗೆ ಈ ಕೇಶ ವಿನ್ಯಾಸದ ಮೂಲಕ ಕರೊನಾವೈರಸ್ ನೈಜವಾದುದು ಎಂಬುದನ್ನು ಸಾರಬಹುದು ಮತ್ತು ಇದರ ಹರಡುವಿಕೆ ವಿರುದ್ಧ ಜಾಗೃತಿ ಮೂಡಿಸಬಹುದು ಎನ್ನುತ್ತಾರೆ ಇಲ್ಲಿಯ ಜನ.
    ಈ ಕೇಶ ವಿನ್ಯಾಸ ಕರೊನಾ ವೈರಸ್​​ನ ವಿಶಿಷ್ಟ ಆಕಾರದಂತೆ ಹೆಣೆಯಲ್ಪಟ್ಟ ಸುರುಳಿಗಳಿಂದ ಕೂಡಿದೆ. ಭಾರತ, ಚೀನಾ, ಬ್ರೆಜಿಲ್​​ನಿಂದ ನೈಜ ಮತ್ತು ಸಂಶ್ಲೇಷಿತ ಕೂದಲನ್ನು ಆಮದು ಮಾಡಿಕೊಳ್ಳುವುದರಿಂದ ಸ್ಥಳೀಯ ಮಹಿಳೆಯರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆ ಕೇಶ ವಿನ್ಯಾಸಕ್ಕೆ ಫ್ಯಾಷನ್​​ಲೋಕದಲ್ಲಿ ತುಸು ಕುಂದುಂಟಾಗಿತ್ತು.

    ಇದನ್ನೂ ಓದಿ: ಗಡಿಯಲ್ಲಿ ಚೀನಾದ ಉಪಟಳ; ಧಾವಿಸಿದ ಭಾರತೀಯ ವಾಯುಪಡೆ ವಿಮಾನ

    ಆದರೆ, ಈಗ ಕೀನ್ಯಾ ರಾಜಧಾನಿ ನೈರೋಬಿಯ ಕೊಳಚೆ ಪ್ರದೇಶ ಕಿಬೆರಾದ ಸಲೂನ್​​ನಲ್ಲಿ ಕೇಶ ವಿನ್ಯಾಸಕಿ ಶರೋನ್ ರೇಫಾ ಯುವತಿಯರ ಕೂದಲನ್ನು ಆಂಟೇನಾ ಆಕಾರದಲ್ಲಿ ಸುರುಳಿ ಮಾಡಿ ಕೊರೊನಾ ವೈರಸ್ ಹೇರ್​ಸ್ಟೈಲ್ ಎಂದು ಹೆಸರಿಟ್ಟಿದ್ದು, ಈ ವಿನ್ಯಾಸ ಈಗ ಜನಪ್ರಿಯಗೊಳ್ಳುತ್ತಿದೆ.
    ಬಹಳಷ್ಟು ಜನ ಕರೊನಾ ನೈಜವಾದುದು ಎಂಬುದನ್ನು ನಂಬುತ್ತಿಲ್ಲ. ಯುವಜನತೆ ಕೈ ತೊಳೆಯುವುದು ಮತ್ತು ಮಾಸ್ಕ್ ಧರಿಸುವುದು ಇತ್ಯಾದಿ ನೈರ್ಮಲ್ಯ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಬಹಳಷ್ಟು ವಯಸ್ಕರು ಇದನ್ನು ಅನುಸರಿಸುವುದಿಲ್ಲ. ಆದ್ದರಿಂದ ಈ ಕರೊನಾ ಹೇರ್​ಸ್ಟೈಲ್ ಮೂಲಕ ಜಾಗೃತಿ ಮೂಡಿಸಬೇಕಾಗಿದೆ ಎನ್ನುತ್ತಾರೆ ರೆಫಾ.
    ಕರೊನಾ ಹೇರ್ ಸ್ಟೈಲ್ ತನ್ನ ಮಗಳ ಸ್ಟೈಲಿಂಗ್ ಅಗತ್ಯಗಳಿಗೆ ಹಾಗೂ ತನ್ನ ಖರ್ಚು ವೆಚ್ಚಕ್ಕೆ ನಿಲುಕುವಂಥದ್ದಾಗಿದೆ. ಎನ್ನುತ್ತಾರೆ ಅಲ್ಲಿಯ ನಿವಾಸಿ ಮಾರ್ಗರೇಟ್ ಆಂಡ್ರಿಯಾ.  

    ಇದನ್ನೂ ಓದಿ: ಬಾಕ್ಸಿಂಗ್​ನಲ್ಲಿ ಯುವತಿಗೆ ಎದುರಾಳಿಯಾಗಿದ್ಯಾರು? ಫಲಿತಾಂಶವೇನು ಗೊತ್ತೆ?

    ಸೋಮವಾರ ಕೀನ್ಯಾದಲ್ಲಿ ಕರೊನಾ ಸೋಂಕಿತರ ಸಂಖ್ಯೆ 700 ರ ಗಡಿ ಹತ್ತಿರ ಇದೆ. ಸ್ಲಂ ಗಳಲ್ಲಿ ವೈರಸ್ ವ್ಯಾಪಕವಾಗಿ ಹರಡುವಿಕೆ ಆರೋಗ್ಯ ಇಲಾಖೆಗೆ ತಲೆ ನೋವಾಗಿದೆ. ಕರೊನಾ ವೈರಸ್​ ಜನರ ಆರ್ಥಿಕತೆಯನ್ನೇ ಕಸಿದುಕೊಂಡಿದೆ. ಕೆಲಸಗಳನ್ನು ಕಿತ್ತುಕೊಂಡಿದೆ. ದೈನಂದಿನ ಆದಾಯಕ್ಕೆ ಕೊಡಲಿ ಪೆಟ್ಟು ನೀಡಿದೆ. ಆದರೆ ಈ ಕೇಶ ಶೈಲಿ ಕೈಗೆಟುಕುವ ದರದಲ್ಲಿದೆ. ಹೇರ್​ಸ್ಟೈಲ್​ಗಳಿಗೆ ಭಾರೀ ಬೆಲೆ ತೆರಲು ಸಾಧ್ಯವಾಗದ ಹಾಗೂ ನಮ್ಮ ಮಕ್ಕಳು ಚೆನ್ನಾಗಿ, ಸ್ಟೈಲಿಶ್ ಕಾಣಲೆಂದು ಬಯಸುವ ನನ್ನಂತಹ ಎಷ್ಟೋ ಪಾಲಕರಿಗೆ ಇದು ಅನುಕೂಲಕರವಾಗಿದೆ. ಇದರ ಬೆಲೆ 50 ಶಿಲ್ಲಿಂಗ್ ಅಥವಾ 50 ಯುಎಸ್ ಸೆಂಟ್ ಆಗಿದೆ. ಎನ್ನುತ್ತಾರೆ ಆಂಡ್ರಿಯಾ.
    ಹೆಣಿಕೆ ವಿನ್ಯಾಸ ಪಡೆಯಲು ಅಂದಾಜು 50 ಶಿಲ್ಲಿಂಗ್ ಅಥವಾ 50 ಯುಎಸ್ ಸೆಂಟ್ ಆಗುತ್ತದೆ. ಆದರೆ ಕೇಶ ಮಾರ್ಪಾಡಿಗೆ 300 ರಿಂದ 500 ಶಿಲ್ಲಿಂಗ್ (3 ರಿಂದ 5 ಡಾಲರ್) ಆಗುತ್ತದೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಕಿಬೆರಾದ ಜನರಿಗೆ ದುಬಾರಿ ಎನಿಸುತ್ತದೆ. 

    ಏನಿದರ ರಹಸ್ಯ? ಅಲ್ಲಿಯ ಜನ ಸುರುಳಿ ಆಕಾರದ ಹೇರ್​ಸ್ಟೈಲ್ ಬಳಸುವುದೇ ಹೆಚ್ಚು. ಈ ಸುರುಳಿ ಕಾರ್ಯ ತೀರ ಸೂಕ್ಷ್ಮವಾದುದು ಮತ್ತು ತುಸು ಶ್ರಮ ಬೇಡುವಂಥದ್ದು. ಈ ಸ್ಟೈಲ್ ದುಬಾರಿಯಾಗುವುದಕ್ಕೆ ಬಹುಶಃ ಇದೇ ಕಾರಣವಾಗಿರಬಹುದು. ಆದರೆ ಕರೊನಾ ವೈರಸ್ ಕೇಶ ಹೆಣೆಯುವಲ್ಲಿ ಬಳಸುವ ತಂತ್ರವೆಂದರೆ ಥ್ರೆಡಿಂಗ್. ಇದರಲ್ಲಿ ಸಂಶ್ಲೇಷಿತ ಕೂದಲಿನ ಹೆಣಿಕೆಗಳ ಬದಲಾಗಿ ನೂಲನ್ನು ಬಳಸಲಾಗುತ್ತದೆ. ಕೈಗೆಟುಕುವ ದರದಲ್ಲಿ ಉತ್ಪಾದನೆಗೆ ಇದೇ ರಹಸ್ಯ ತಂತ್ರವಾಗಿದೆ ಎನ್ನತ್ತಾರೆ ಅಲ್ಲಿಯ ನಿವಾಸಿಗಳು.
    ಆರ್ಥಿಕ ಕೊರತೆಯಿಂದಾಗಿ ನನ್ನ ಮಗಳಿಗೆ ಕೈಗೆಟುಕುವ ದರದಲ್ಲಿ ಈ ಕೇಶ ವಿನ್ಯಾಸ ಮಾಡಿಸಲು ನಿರ್ಧರಿಸಿದ್ದೇನೆ. ಜತೆಗೆ ಕರೊನಾ ವೈರಸ್​ ಬಗ್ಗೆ ಜನ ಜಾಗೃತಿ ಮೂಡಿಸುವುದೂ ಸಾಧ್ಯವಾಗುತ್ತದೆ ಎನ್ನುತ್ತಾರೆ 26 ವರ್ಷದ ಮರಿಯಮ್ ರಶೀದ್. (ಏಜನ್ಸೀಸ್) 

    ಆಸ್ಪತ್ರೆಯಲ್ಲಿರುವ ಮಾಜಿ ಪಿಎಂ ಮನಮೋಹನ್ ಸಿಂಗ್ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts