More

    ಏಸು ಕಾಣೋ ತನಕ ಉಪವಾಸ ವ್ರತ; ಈವೆರೆಗೆ 89 ಜನರು ಮೃತ

    ನೈರೋಬಿ: ಹಸಿವಿನಿಂದ ಬಳಲಿದರೆ ಸ್ವರ್ಗಕ್ಕೆ ಹೋಗುತ್ತೇವೆ ಎಂದು ನಂಬಿದ್ದ ಕೀನ್ಯಾದ ಕ್ರೈಸ್ತ ಮತದಲ್ಲಿರುವ ಒಂದು ಪಂಥದ ಅನುಯಾಯಿಗಳ ಸಾವಿನ ಸಂಖ್ಯೆ 89 ಕ್ಕೆ ಏರಿದೆ ಎಂದು ಕೀನ್ಯಾದ ಆಂತರಿಕ ಸಚಿವ ಕಿಥುರೆ ಕಿಂಡಿಕಿ ಮಂಗಳವಾರ ಹೇಳಿದ್ದಾರೆ. ಅದಲ್ಲದೇ ಆಂತರಿಕ ಸಚಿಚ ಕಿಂಡಿಕಿ, ಆ ಗುಂಪಿನ ನಾಯಕನನ್ನು ಜೀವನ ಪರ್ಯಂತ ಜೈಲಿಗೆ ಅಟ್ಟಲು ಮುಂದಾಗಿದ್ದಾರೆ.

    ಸ್ವಯಂ ಘೋಷಿತ ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್ ನೆಲೆಗೊಂಡಿರುವ ಪೂರ್ವ ಕೀನ್ಯಾದ ಶಾಕಾಹೋಲಾ ಅರಣ್ಯದ 800 ಎಕರೆ ಪ್ರದೇಶದಲ್ಲಿ ಕಂಡುಬಂದ ಸಾಮೂಹಿಕ ಸಮಾಧಿಗಳ ಉತ್ಖನನವನ್ನು ಅಧಿಕಾರಿಗಳು ನಡೆಸಿದ್ದರಿಂದ ಇತ್ತೀಚಿನ ದಿನಗಳಲ್ಲಿ ಸಾವಿನ ಸಂಖ್ಯೆ ಸ್ಥಿರವಾಗಿ ಏರುತ್ತಿದೆ.

    ಸತ್ತವರಲ್ಲಿ ಹೆಚ್ಚಿನವರ ಶರೀರವನ್ನು ಆಳವಿಲ್ಲದ ಸಮಾಧಿಗಳಿಂದ ಹೊರತೆಗೆಯಲಾಗಿದೆ. ಆದರೆ ಕೆಲವೇ ಕೆಲವರು ಜೀವಂತವಾಗಿ ಕಂಡುಬಂದಿದ್ದು ಅವರ ಪರಿಸ್ಥಿತಿ ಗಂಭೀರವಾಗಿತ್ತು. ಕಡೆಗೆ ಅವರೂ ಸಾವಿಗೀಡಾಗಿದ್ದಾರೆ.

    “ನಿನ್ನೆ ನೀಡಲಾದ ಅಂಕಿ ಅಂಶಕ್ಕಿಂತ ನಾವು ಈ ಗಂಟೆಯವರೆಗೆ ಇನ್ನೂ 16 ಶವಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದ್ದು ಸಾವಿನ ಸಂಖ್ಯೆ ಒಟ್ಟು 89ಕ್ಕೆ ಏರಿದೆ” ಎಂದು ಕಿಂಡಿಕಿ ಘಟನಾ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

    ಸುದ್ದಿ ವೀಡಿಯೋಗಳು ಮುಳ್ಳಿನ ಮರಗಳು ಮತ್ತು ಕುರುಚಲು ಪೊದೆಗಳ ಸಮೂಹಗಳ ನಡುವೆ ಚದುರಿದ ತಾಳೆ ಹುಲ್ಲಿನ ಛಾವಣಿಯೊಂದಿಗೆ ಮಣ್ಣಿನ ಗುಡಿಸಲುಗಳನ್ನು ತೋರಿಸಿವೆ.

    ಖಾಸಗಿ ಒಡೆತನದ ಸಿಟಿಜನ್ ಟೆಲಿವಿಷನ್‌ನಲ್ಲಿ ಪ್ರಸಾರವಾದ ದೃಶ್ಯಾವಳಿಗಳು ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಕೃಶ ಮಹಿಳೆ, ರಕ್ಷಕರಿಗೆ ತನ್ನನ್ನು ಕೊಲ್ಲುವಂತೆ ಕೇಳಿಕೊಳ್ಳುವುದನ್ನು ತೋರಿಸಿದೆ.

    ಸಾಮೂಹಿಕ ಸಮಾಧಿ ಸ್ಥಳಗಳನ್ನು ಸುತ್ತುವರಿಯಲಾಗಿದ್ದು ರಕ್ಷಕರ ತಂಡಗಳಲ್ಲಿ ಕೆಲವರು ಬಿಳಿ ರಕ್ಷಣಾತ್ಮಕ ಮೇಲುಡುಪುಗಳು ಮತ್ತು ಮುಖವಾಡಗಳನ್ನು ಧರಿಸಿದ್ದರು. ನೀಲಿ ಮತ್ತು ಬಿಳಿ ಬಾಡಿ ಬ್ಯಾಗ್‌ಗಳಲ್ಲಿ ಶವಗಳನ್ನು ತುಂಬಿಸಿ ಒಯ್ಯುವುದನ್ನು ಕಾಣಬಹುದು.

    ಮೂವರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಕಿಂಡಿಕಿ ಹೇಳಿದ್ದು, ಇದುವರೆಗೆ ಪತ್ತೆಯಾಗಿರುವ ಒಟ್ಟು ಬದುಕುಳಿದವರ ಸಂಖ್ಯೆಯನ್ನು 34ಕ್ಕೆ ಏರಿದೆ.

    ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಸ್ಥಳೀಯ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಟ್ರೇಸಿಂಗ್ ಮತ್ತು ಕೌನ್ಸೆಲಿಂಗ್ ಡೆಸ್ಕ್‌ಗೆ 200 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ ಎಂದು ಕೀನ್ಯಾದ ರೆಡ್‌ಕ್ರಾಸ್ ಹೇಳಿದೆ.

    ಈ ವಿಚಿತ್ರ ಆರಾಧನಾ ಪದ್ಧತಿಯ ನಾಯಕ ಪಾಲ್ ಮೆಕೆಂಜಿಯನ್ನು ಏಪ್ರಿಲ್ 14 ರಂದು ಬಂಧಿಸಲಾಯಿತು. ಈತನೊಂದಿಗೆ 14 ಆರಾಧನಾ ಸದಸ್ಯರು ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೆಕೆಂಜಿ ಆಹಾರ ಮತ್ತು ನೀರನ್ನು ನಿರಾಕರಿಸುತ್ತಿದ್ದಾನೆ ಎಂದು ಕೀನ್ಯಾದ ಮಾಧ್ಯಮಗಳು ವರದಿ ಮಾಡಿವೆ.

    “ಮೆಕೆಂಜಿ ತನ್ನ ಯಾವುದೇ ಕಾರಣಕ್ಕೂ ಜೈಲಿನಿಂದ ಹೊರಬರುವುದಿಲ್ಲ” ಎಂದು ಕಿಂಡಿಕಿ ಹೇಳಿದರು. ಅದರ ಜತೆಗೆ ಸಮಾಧಿಗಳನ್ನು ಅಗೆಯುವ ಅಥವಾ ದೇಹಗಳನ್ನು ವಿಲೇವಾರಿ ಮಾಡುವ ಮೂಲಕ ಸಾಯಲು ಪ್ರಯತ್ನಿಸುವವರಿಗೆ ಸಹಾಯ ಮಾಡುವ ಯಾರಾದರೂ ಸರಿ, ಅವರನ್ನು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts