More

    ಒಂದೇ ದಿನ ಮಹಾಮಾರಿ ಕರೊನಾಗೆ ತಾಯಿ-ಮಗ ಸಾವು

    ವಿಜಯಪುರ: ಸಾವಿನಲ್ಲೂ ತಾಯಿ-ಮಗ ಒಂದಾಗಿರುವ ಹೃದಯ ವಿದ್ರಾವಕ‌ ಘಟನೆ ವಿಜಯಪುರದಲ್ಲಿ ನಡೆದಿದೆ.

    ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ‌ ಗ್ರಾಮದ ತಾಯಿ-ಮಗ ನಿನ್ನೆ (ಮೇ 07) ಸಾವಿಗೀಡಾಗಿದ್ದಾರೆ. ಕರೊನಾ ಮಹಾಮಾರಿಗೆ ಅನುದಾನಿತ ಶಾಲೆ ಶಿಕ್ಷಕ ಹಾಗೂ ಆತನ ತಾಯಿ ಬಲಿಯಾಗಿದ್ದಾರೆ.‌

    ನಿನ್ನೆ ಮಧ್ಯಾಹ್ನ ಉತ್ತರಕನ್ನಡ ಶಿರಸಿಯಲ್ಲಿ ಪ್ರೌಢ ಶಾಲೆ ಶಿಕ್ಷಕ ದಶರಥ ಮ್ಯಾಗೇರಿ (54) ಮೃತಪಟ್ಟರು. ಮಗನ‌‌ ಸಾವಿನ‌ ಸುದ್ದಿ ತಿಳಿದು ಇತ್ತ ವಿಜಯಪುರದಲ್ಲಿ ತಾಯಿ ಲಲಿತಾಬಾಯಿ‌ ಮ್ಯಾಗೇರಿ(80) ಕೂಡ ಸಾವಿಗೀಡಾಗಿದ್ದಾರೆ.

    ಮೊದಲಿಗೆ ತಾಯಿಗೆ ಹುಷಾರಿಲ್ಲ‌ ಎಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದ ಮಗನಿಗೆ ಈ ವೇಳೆ ಅನಾರೋಗ್ಯ ಕಾಡಿತ್ತು. ಹೀಗಾಗಿ ಅನಾರೋಗ್ಯದಿಂದ ಶಿರಸಿಯಲ್ಲಿ‌ ನಿನ್ನೆ ಮಧ್ಯಾಹ್ನ ಮೊದಲು ಮಗ ಮೃತಪಟ್ಟಿದ್ದಾರೆ. ಮಗನ ಸಾವಿನ ಸುದ್ದಿ ತಿಳಿದು ಇತ್ತ ತಾಯಿ ಕೂಡ ಕೊನೆಯುಸಿರೆಳೆದಿದ್ದಾರೆ.

    VIDEO: ಜನರ ಮೆಚ್ಚುಗೆಗೆ ಪಾತ್ರವಾದ ವಿರಾಟ್ ಕೊಹ್ಲಿ ದಂಪತಿಯ ಸಾಮಾಜಿಕ ಕಳಕಳಿ

    ಬಾಬಾ ರಾಮದೇವ್​ರ ಕೊರೊನಿಲ್​​ ಬಗ್ಗೆ ಹೆಚ್ಚಿದ ಗೂಗಲ್ ಸರ್ಚ್​ !

    ಕೋವಿಡ್: ಗಂಭೀರವಲ್ಲದ 30-40% ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಶಿಫ್ಟ್‌ ಮಾಡಲು ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts