More

    ಖಾಕಿಗೆ ಕ್ವಾರಂಟೈನ್​ಗಳದ್ದೇ ತಲೆಬೇನೆ: ಮನೆಯಲ್ಲಿರಲು ಕಳ್ಳಾಟ, ಕೇಸ್ ದಾಖಲಿಸಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ

    ಬೆಂಗಳೂರು/ಶಿವಮೊಗ್ಗ: ವಿದೇಶದಿಂದ ರಾಜ್ಯಕ್ಕೆ ಬಂದು ಕರೊನಾ ಸೋಂಕಿನ ಶಂಕೆಯ ಮೇಲೆ ಗೃಹಬಂಧನಕ್ಕೆ (ಕ್ವಾರಂಟೈನ್)ಒಳಪಟ್ಟಿರುವ ವ್ಯಕ್ತಿಗಳೀಗ ಪೊಲೀಸರಿಗೆ ತಲೆನೋವಾಗಿದ್ದಾರೆ. 14 ದಿನ ಗೃಹಬಂಧನದಲ್ಲಿರಲು ಹಿಂದೇಟು ಹಾಕುವ ಹಲವರು ಸಾರ್ವಜನಿಕರ ಮಧ್ಯೆ ಓಡಾಡುವ ಮೂಲಕ ಕರೊನಾ ಆತಂಕ ಹೆಚ್ಚಿಸುತ್ತಿದ್ದಾರೆ.

    ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು, ವಿದೇಶದಿಂದ ಬಂದವರ ಕೈಗೆ ಕ್ವಾರಂಟೈನ್ ಮೊಹರು ಹಾಕಿ 14 ದಿನ ಗೃಹಬಂಧನದಲ್ಲಿರುವಂತೆ ಸೂಚಿಸಿದ್ದಾರೆ. ಆದಾಗ್ಯೂ ಕೆಲವರು ಕರೊನಾ ವೈರಸ್ ಸೋಂಕು ಹರಡುತ್ತಿರುವುದರ ಸೂಕ್ಷ್ಮತೆಯ ಅರಿವಿಲ್ಲದೆ ಅನವಶ್ಯಕವಾಗಿ ಮನೆಯಿಂದ ಹೊರಬರುತ್ತಿದ್ದಾರೆ. ಬೆಂಗಳೂರು ನಗರದಲ್ಲಿಯೇ 14,910 ಮಂದಿಗೆ ಕ್ವಾರಂಟೈನ್ ಮೊಹರು ಹಾಕಲಾಗಿದೆ. ಅಂತಹವರ ಮೇಲೆ ನಿಗಾವಹಿಸುವುದೇ ಪೊಲೀಸರಿಗೆ ಸವಾಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಜನರು 14 ದಿನಗಳ ಗೃಹಬಂಧನ ಮುಗಿಸಿದ್ದಾರೆ. ಇನ್ನೂ 200ಕ್ಕೂ ಹೆಚ್ಚಿನ ಸಂಖ್ಯೆಯ ಜನರು ಹೋಮ್ ಕ್ವಾರಂಟೈನ್ ಪಾಲಿಸಬೇಕಾಗಿದೆ. ಆದರೆ, ಆರೋಗ್ಯ ಇಲಾಖೆಯ ಸೂಚನೆಯನ್ನು ಗಂಭೀ ರವಾಗಿ ಪರಿಗಣಿಸಿದಂತಿಲ್ಲ. ಕರೊನಾ ಸೋಂಕು ಹರಡುತ್ತಿರುವ ಸೂಕ್ಷ್ಮತೆಯನ್ನು ಉಡಾಫೆ ಮಾಡುತ್ತಿದ್ದಾರೆ. ನಿರ್ಲಕ್ಷ್ಯನದಿಂದ ಹೊರಗಡೆ ಓಡಾಡುವುದು, ಕ್ರಿಕೆಟ್ ಆಡುವುದು, ಸ್ನೇಹಿತರೊಂದಿಗೆ ಸುತ್ತುವುದು, ಕುಟುಂಬಸ್ಥರ ಜತೆ ಕುಳಿತು ಹರಟೆ ಹೊಡೆಯುವುದು ಕಂಡುಬರುತ್ತಿದೆ.

    ಮೂರು ಬಾರಿ ಹೊರಬಂದಿದ್ದ

    ಕಳೆದ 3-4 ದಿನದಲ್ಲಿ ನಾಲ್ವರು ಕ್ವಾರಂಟೈನ್ ವ್ಯಕ್ತಿಗಳು ಬೆಂಗಳೂರಿನಲ್ಲಿ ಅನಗತ್ಯವಾಗಿ ಮನೆಯಿಂದ ಹೊರಬಂದಿದ್ದಾರೆ. ಗುರುವಾರ (ಮಾ.26) ಬನಶಂಕರಿಯಲ್ಲಿ ಕೈಗೆ ಮೊಹರು ಹಾಕಿದ್ದ ವ್ಯಕ್ತಿಯೊಬ್ಬ ಔಷಧ ಖರೀದಿಸಲು ಮೆಡಿಕಲ್ ಅಂಗಡಿಗೆ ಬಂದಿದ್ದ. ಈತನನ್ನು ಗಮನಿಸಿದ ಅಂಗಡಿ ಮಾಲೀಕ, ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದರು. ಈತನನ್ನು ಬನಶಂಕರಿ 2ನೇ ಹಂತದ ಕಾವೇರಿನಗರದ ನಿವಾಸಿ ವಿನೋದ್ (28) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ಮೆಡಿಕಲ್ ಅಂಗಡಿಗೆ ಹೋಗಿ ಕೆಲ ಔಷಧಗಳನ್ನು ತೆಗೆದುಕೊಂಡು ಹೋಗಿದ್ದ. ಮಧ್ಯಾಹ್ನದ ವೇಳೆ ಮತ್ತೆ ಮಲೇರಿಯಾ ಟ್ಯಾಬ್ಲೆಟ್ ಖರೀದಿಸಿದ್ದಾನೆ. ಸಂಜೆ ಹೋಗಿ ಬೇರೆ ಔಷಧವನ್ನು ಕೊಡುವಂತೆ ಕೇಳಿದ್ದಾನೆ. ಆಗ ಆತನ ಎಡಗೈನಲ್ಲಿ ಮೊಹರು ಇರುವುದು ಕಂಡುಬಂದ ಬಳಿಕ ಆತನ ಹೆಸರು, ವಿಳಾಸ ತೆಗೆದುಕೊಂಡು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಜತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆತನನ್ನು ವಶಕ್ಕೆ ಪಡೆದು, ಆಂಬುಲೆನ್ಸ್ ಮೂಲಕ ಸರ್ಕಾರಿ ಕ್ವಾರಂಟೈನ್​ಗೆ ಕರೆದೊಯ್ದಿದ್ದಾರೆ.

    ಲಾಕ್‌ಡೌನ್‌ ಲಕ್ಷ್ಮಣ ರೇಖೆಯನ್ನು ದಾಟುವಿರಾ?- ಕಾನೂನು ಸಂಕಷ್ಟದ ಸುಳಿಗೆ ಬೀಳುವುದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts