More

    VIDEO| ಕರೊನಾ ಭೀತಿಗೆ ರಾಜ್ಯ ಲಾಕ್​ಡೌನ್​ ಆಗಿರು ಮಧ್ಯೆಯೇ ಮನಕಲಕುವ ಘಟನೆ: ಅನ್ನಕ್ಕಾಗಿ ಕಸದರಾಶಿ ಹುಡುಕಾಡಿದ ವೃದ್ಧ

    ಗದಗ: ಕರೊನಾ ವೈರಸ್​ ಭೀತಿಯಿಂದ ಇಡೀ ದೇಶದಲ್ಲಿ ಸೃಷ್ಟಿಯಾಗಿರುವ ಭೀಕರತೆ ಯಾವ ಮಟ್ಟಿಗೆ ಇದೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದ್ದು, ಕಣ್ಣಂಚಲ್ಲಿ ನೀರು ಬರುವಂತಿದೆ.

    ಇಡೀ ದೇಶಕ್ಕೆ ದೇಶವೇ ಸ್ತಬ್ಧವಾಗಿದೆ. ಜನರು ಮನೆಯಲ್ಲೇ ಲಾಕ್​ ಆಗಿರುವುದರಿಂದ ದಿನನಿತ್ಯದ ಚಟುವಟಿಕೆಗಳು ಬಂದ್​ ಆಗಿದೆ. ಇದರ ನಡುವೆ ಹಸಿವಿನಿಂದ ಪರದಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬ ಹಸಿವು ನೀಗಿಸಿಕೊಳ್ಳಲು ಕಸದಲ್ಲಿ ಏನಾದರೂ ಸಿಗಲಿದೆಯೇ ಎಂದು ಹುಡುಕಾಡಿದ ಮನಕಲಕುವ ಘಟನೆ ಗದಗದ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

    ಪುರಸಭೆ ಇಲಾಖೆ ಹಾಕಿದ್ದ ಕಸದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿದ್ದ ವಯೋವೃದ್ಧನನ್ನು ಕಂಡು ಸ್ಥಳೀಯರು ಉಪಹಾರ ಹಾಗೂ ನೀರು ನೀಡಿ ಮಾನವೀಯತೆ ಮೆರೆದರು.

    ಸದ್ಯ ಭಾರತದಲ್ಲಿ ಕೋವಿಡ್​-19 ತಗುಲಿರುವ ಸಂಖ್ಯೆ 511ಕ್ಕೇರಿದ್ದು, 12 ಹೊಸ ಪ್ರಕರಣಗಳು ವರದಿಯಾಗಿವೆ. ಈವರೆಗೂ ಒಟ್ಟು 11 ಮಂದಿ ಬಲಿಯಾಗಿದ್ದಾರೆ. (ಏಜೆನ್ಸೀಸ್​)

    ಕಸದಲ್ಲಿ ಅನ್ನವನ್ನು ಹುಡುಕುತ್ತಿದ್ದ ವಯೋವೃದ್ಧನಿಗೆ ಆಹಾರ ನೀಡಿದ ಸ್ಥಳೀಯರು

    ಕರೊನಾ ವೈರಸ್ ಭೀಕರತೆಯಿಂದ ಹಸಿವು ತಾಳಲಾರದೆ ಕಸದಲ್ಲಿ ಅನ್ನವನ್ನು ಹುಡುಕುತ್ತಿರುವ ಮಾನಸಿಕ ಅಸ್ವಸ್ಥ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಾನಸಿಕ ಅಸ್ವಸ್ಥ ವಯೋವೃದ್ಧ ಪುರಸಭೆ ಹಾಕಿದ ಕಸದಲ್ಲಿ ಏನಾದರೂ ಆಹಾರ ಸಿಗುತ್ತೆ ಅಂತಾ ಹುಡುಕುತ್ತಿರುವ ದೃಶ್ಯ ಮನಕಲಕುವಂತಿದೆ. ಆತನಿಗೆ ಸ್ಥಳೀಯರು ಉಪಹಾರ ಹಾಗೂ ನೀರು ನೀಡಿ ಮಾನವೀಯತೆ ಮೆರೆದಿದ್ದಾರೆ. ನಿಮ್ಮ ಊರಿನ ಸುದ್ದಿಗಳನ್ನೂ ವರದಿ ಮಾಡಬೇಕೆ? ಡೌನ್’ಲೋಡ್ ಮಾಡಿಕೊಳ್ಳಿ ಪವರ್ ನ್ಯೂಸ್ https://pwnz.co/TG71P64N64ಸುದ್ದಿ: ಮಂಜು ಪತ್ತಾರ, ಗದಗ

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಮಾರ್ಚ್ 24, 2020

    ಕರೊನಾ ಭೀತಿಯಿಂದ ತರಾತುರಿಯಲ್ಲಿ ಊರಿಗೆ ತೆರಳುತ್ತಿದ್ದಾಗ ಕಾರು ಅಪಘಾತ: ಮೂವರ ದಾರುಣ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts