More

    ರಜಾವಧಿಯನ್ನು ಕಲಿಕಾವಧಿಯಾಗಿಸಲು ಶಿಕ್ಷಣ ಇಲಾಖೆಯಿಂದಲೇ ಯೂಟ್ಯೂಬ್​ ಚಾನಲ್​… ನೀವು ಕಾರ್ಯಕ್ರಮ ನೀಡಬಹುದು

    ಲಾಕ್​ಡೌನ್​ ಮುಗಿಯುತ್ತೋ ಇಲ್ಲವೇ ವಿಸ್ತರಣೆಯಾಗುತ್ತೋ ಎಂಬುದು ಇನ್ನೂ ಅನಿಶ್ಚಿತ. ಜನರ ಸಹಕಾರದ ಮೇಲೆ ಇದು ಅವಲಂಬಿತವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಶಾಲಾ-ಕಾಲೇಜು ಬಂದ್​ ಹಿನ್ನೆಲೆ ಶೈಕ್ಷಣಿಕ ಚಟುವಟಿಕೆಗಳಂತೂ ಬಂದ್​ ಆಗಿವೆ. ಈ ಹಿನ್ನೆಲೆಯಲ್ಲಿ ಈ ರಜಾ ಅವಧಿಯನ್ನು ಕಲಿಕಾವಧಿಯಾಗಿ ರೂಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

    ಮಕ್ಕಳು ಟೀವಿ, ಮೊಬೈಲುಗಳಲ್ಲಿ ಕಳೆದು ಹೋಗಿದ್ದಾರೆ. ನಾಲ್ಕು ಗೋಡೆಗಳ ನಡುವಿನ ಆಟಪಾಟಗಳು ಅವರ ಕ್ರಿಯಾಶೀಲತೆಯನ್ನು ಕಬಳಿಸುವುದಷ್ಟೇ ಅಲ್ಲ, ಅವುಗಳ ಶೈಕ್ಷಣಿಕ ಸಿದ್ಧತೆಯನ್ನು, ಕಲಿಕಾ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತವೆ. ಆದರೆ, ನಾವು ಈಗ ಮಕ್ಕಳೊಂದಿಗೆ ಮೊಬೈಲ್, ಟೀವಿಗಳ ಮೂಲಕವೇ ಸಂಭಾಷಿಸುವುದು ಅನಿವಾರ್ಯವಾಗಿದೆ. ಅವರ ಸೃಜನಶೀಲ ಆಲೋಚನೆಗಳಿಗೆ ಹೊಸ ವೇದಿಕೆಯನ್ನು ದೊರಕಿಸಲು, ಮಕ್ಕಳ ಮನಸ್ಸುಗಳನ್ನು ತಲುಪಲು ಯುಟ್ಯೂಬ್ ಚಾನೆಲ್ ಪ್ರಾರಂಭಿಸುವ ವಿನೂತನ ಆಲೋಚನೆ ಮಾಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ಕುಮಾರ್​ ಹೇಳಿದ್ದಾರೆ.

    ಈ ಚಾನೆಲ್ ಮೂಲಕ ಪ್ರತಿ ದಿನ ಬೆಳಗ್ಗೆ ಒಂದು ಗಂಟೆಯ ಅವಧಿಯಲ್ಲಿ ರಸವತ್ತಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಬಿತ್ತರಿಸಲಾಗುತ್ತದೆ. ಅಂದಾಜು 10 ರಿಂದ 15 ನಿಮಿಷಗಳ 4 ರಿಂದ 5 ಕಾರ್ಯಕ್ರಮಗಳನ್ನು ಒಂದು ಗಂಟೆಯ ಕಾರ್ಯಕ್ರಮವನ್ನಾಗಿಸಿ ಪ್ರತಿದಿನ ಪ್ರಸಾರ ಮಾಡುವುದು ನಮ್ಮ ಆಶಯ ಎಂದಿದ್ದಾರೆ.

    ಶಿಕ್ಷಕರು, ಸ್ವಯಂಸೇವಾಸಂಸ್ಥೆಗಳು, ಸಾರ್ವಜನಿಕರು, ಶಿಕ್ಷಣಪ್ರೇಮಿಗಳು ಯಾರೇ ಆಗಿದ್ದರೂ ಮಕ್ಕಳ ಕ್ರಿಯಾಶೀಲತೆ ಪ್ರೇರೇಪಿಸುವ, ಸಮಾಜಕ್ಕೆ ಏನಾದರೂ ನೀಡಬೇಕೆನ್ನುವ ಬಯಕೆಯಿದ್ದರೆ ಈ ವೇದಿಕೆ ಬಳಸಿಕೊಳ್ಳಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ. ಜತೆಗೆ, ಇದಕ್ಕೊಂದು ಹೆಸರನ್ನು ಸೂಚಿಸುವಂತೆಯೂ ಕೋರಿದ್ದಾರೆ.

    ಮಕ್ಕಳಿಗೆ ಸೂಕ್ತ ಹಾಗೂ ಸಮಂಜಸವೆನಿಸುವ ಯಾವುದೇ ಸಾಮಗ್ರಿಯನ್ನು ಸಿದ್ದಪಡಿಸಿ ನೀಡಬಹುದು. ಇವುಗಳು ತರಗತಿಗಳ ಪಾಠಗಳು ಅಥವಾ ಪಠ್ಯಕ್ರಮಕ್ಕೆ ಸಂಬಂಧಿಸಿದ್ದೇ ಆಗಿರಬೇಕಿಲ್ಲ. ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸುವಂತಿದ್ದರೆ ಸಾಕು. ಮುಂದಿನ 50 ದಿನಗಳವರೆಗೆ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

    ವಿಡಿಯೋ ಸಾಮಗ್ರಿಯನ್ನು ಇ-ಮೇಲ್ [email protected], ಗೂಗಲ್ ಡ್ರೈವ್/ವಾಟ್ಸ್​ಆ್ಯಪ್​/ಟೆಲಿಗ್ರಾಮ್ ಮೂಲಕ ಕಳುಹಿಸಬಹುದು. ವಿವರಗಳಿಗೆ ಸಮಗ್ರ ಶಿಕ್ಷಣ ವಿಭಾಗದ ರಾಜ್ಯ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ಅವರನ್ನು ಸಂಪರ್ಕಿಸಬಹುದು. ದೂ: 080-22483040, ಫ್ಯಾಕ್ಸ್ 080-22126718, 080-22483580.

    ಹಸೆಮಣೆ ಏರಲು ಸಜ್ಜಾಗಿದ್ದವರಿಗೆ ನಿರಾಶೆ ಮೂಡಿಸಿದ ಸರ್ಕಾರ; ಸದ್ಯಕ್ಕಿಲ್ಲ ‘ಸಪ್ತಪದಿ’

    ಪಂಜಾಬ್​ನಲ್ಲೊಂದು ಅಮಾನವೀಯ ಘಟನೆ; ಕರೊನಾದಿಂದ ಮೃತಪಟ್ಟ 69 ವರ್ಷದ ವೃದ್ಧೆ..ಆದರೆ ಮಗ ಮಾಡಿದ್ದು ಎಷ್ಟು ಸರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts