More

    ರಾಜಧಾನಿಯಲ್ಲಿ ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ! ಚಿತಾಗಾರದ ಮುಂದೆ ಗಂಟೆಗಟ್ಟಲೆ ನಿಂತ ಆಂಬ್ಯುಲೆನ್ಸ್​

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕರೊನಾ ಸಾವಿನ ಸ್ಪೋಟ ಸಂಭವಿಸಿದ್ದು, ಏಪ್ರಿಲ್‌ನ 14 ದಿನದಲ್ಲಿ 280ಕ್ಕೂ ಅಧಿಕ ಸಾವು ಸಂಭವಿಸಿದೆ. ಕಳೆದೆರಡು ದಿನಗಳಲ್ಲಿ ಸೋಂಕಿಗೆ 55 ಮಂದಿ ಸಾವನ್ನಪ್ಪಿದ್ದು, ವಿದ್ಯುತ್ ಚಿತಾಗಾರದ ಬಳಿ ಶವ ಸಂಸ್ಕಾರ ಮಾಡಲು ಆಂಬ್ಯುಲೆನ್ಸ್​ ಕ್ಯೂ ನಿಂತಿವೆ.

    ನಗರದಲ್ಲಿ ಕಳೆದ ಒಂದು ತಿಂಗಳಿಂದ ಸೋಂಕು ಸ್ಪೋಟಗೊಂಡ 15 ದಿನದ ತರುವಾಯ ಸಾವಿನ ಸಂಖ್ಯೆಯೂ ತೀವ್ರವಾಗುತ್ತಿದೆ. ಸೋಂಕಿತರಿಗೆ ಹಾಸಿಗೆ ಸಮಸ್ಯೆ ಎದುರಾಗುತ್ತಿದ್ದು, ಆಸ್ಪತ್ರೆ ಬಳಿಯೇ ಸಾವನ್ನಪ್ಪುತ್ತಿದ್ದಾರೆ. ಜನವರಿ 66, ೆಬ್ರವರಿ 88, ಮಾರ್ಚ್‌ನಲ್ಲಿ 147 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಏಪ್ರಿಲ್ ತಿಂಗಳಲ್ಲಿ 280 ಮಂದಿ ಸಾವನ್ನಪ್ಪಿದ್ದು, ಈಪೈಕಿ 60 ವರ್ಷ ಮೇಲ್ಪಟ್ಟ 210ಕ್ಕೂ ಅಧಿಕ ವೃದ್ಧರು ಸೋಂಕಿಗೆ ಬಲಿಯಾಗಿದ್ದಾರೆ.

    ಇದನ್ನೂ ಓದಿರಿ: ಪದವೀಧರರಿಗೆ ಬಂಪರ್​- ಬ್ಯಾಂಕ್ ಆಫ್​ ಬರೋಡಾದಲ್ಲಿ 511 ಹುದ್ದೆಗಳಿಗೆ ಆಹ್ವಾನ: ಕರ್ನಾಟಕದಲ್ಲೂ ಅವಕಾಶ

    ಚಿತಾಗಾರದ ಮುಂದೆ 8 ಗಂಟೆ ಕ್ಯೂ
    ರಾಜಧಾನಿಯಲ್ಲಿ ಸೋಮವಾರ 40 ಮತ್ತು ಮಂಗಳವಾರ 55 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಹೀಗಾಗಿ, ಎರಡು ದಿನಗಳಿಂದ ಕೋವಿಡ್‌ನಿಂದ ಮೃತಪಟ್ಟ ದೇಹಗಳನ್ನು ಅಂತ್ಯ ಸಂಸ್ಕಾರ ಮಾಡುವ ಯಲಹಂಕದ ಮೇಡಿ ಅಗ್ರಹಾರ, ಸುಮನಹಳ್ಳಿ ವಿದ್ಯುತ್ ಚಿತಾಗಾರದ ಬಳಿ ಶವಗಳನ್ನು ಹೊತ್ತು ತಂದ ಆ್ಯಂಬುಲೆನ್ಸ್‌ಗಳ ಕ್ಯೂ ಹೆಚ್ಚಾಗಿದೆ. ಸುಮಾರು 5 ರಿಂದ 7 ಆಂಬುಲೆನ್ಸ್‌ಗಳು ನಾಲ್ಕೈದು ಗಂಟೆಗಳ ಕಾಲ ಕ್ಯೂ ನಿಂತಿರುವುದು ಕಂಡುಬಂದಿದೆ. ಇನ್ನು ಬುಧವಾರವೂ ಕೂಡ 50ಕ್ಕೂ ಅಧಿಕ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಗಂಡನ ಒಪ್ಪಿಗೆ ಪಡೆದು ಎರಡನೇ ಪತ್ನಿಯನ್ನು ಮದ್ವೆಯಾದ ಮೊದಲ ಪತ್ನಿ: ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ವಿಕ್ರಾಂತ್ ರೋಣ ಚಿತ್ರ ತಂಡದ ಬಿಗ್​ ಸಪ್ರೈಸ್ ಬಹಿರಂಗ: ಆಗಸ್ಟ್​ 19ಕ್ಕೆ ವಿಶ್ವದಾದ್ಯಂತ ಬಿಡುಗಡೆ

    ಅಪ್ರಾಪ್ತರ ಲವ್​ ಕೇಸ್​: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನಿಂದ ಬಿತ್ತು ಬಾಲಕನ ಹೆಣ, ಊರಲ್ಲಿ ಪ್ರಕ್ಷುಬ್ಧ ವಾತಾವರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts