More

    ಕೈದಿಗಳಿಗೆ ಶುಭತಂದ ಕರೊನಾ: 500ಕ್ಕೂ ಹೆಚ್ಚು ಜನರಿಗೆ ಬಿಡುಗಡೆ ಭಾಗ್ಯ

    ದೇಶದ ಜೈಲುಗಳು ಸಾಮಥ್ಯìಕ್ಕಿಂತ ಹೆಚ್ಚು ಕೈದಿಗಳಿಂದ ತುಂಬಿವೆ ಎನ್ನುವುದು ಗೊತ್ತಿರುವ ಸಂಗತಿಯೇ ಆಗಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆಗಾಗ ಹುಯಿಲೇಳುತ್ತಿರುತ್ತಲೇ ಇರುತ್ತದೆ.

    ವಿಚಾರಣೆ ವಿಳಂಬವಾಗುವ ಕಾರಣ ವಿಚಾರಣಾಧೀನ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜೈಲುಗಳಲ್ಲಿ ಇರಬೇಕಾಗಿದೆ. ಇನ್ನು ಗಂಭೀರ ಅಪರಾಧಗಳನ್ನು ಎಸಗಿದವರಿಗಿಂತ ಸಣ್ಣಪುಟ್ಟ ಕೃತ್ಯಗಳಲ್ಲಿ ಜೈಲುಪಾಲಾದವರ ಸಂಖ್ಯೆ ಕಡಿಮೆಯೇನಿಲ್ಲ. ಇಂಥವರಿಗೀಗ ಕರೊನಾ ಶುಭ ಸುದ್ದಿ ನೀಡಿದೆ.

    ಬ್ಯಾರಕ್​ಗಳಲ್ಲಿ ಕೈದಿಗಳನ್ನು ಗುಂಪುಗುಂಪಾಗಿ ಇರಿಸುವುದರಿಂದ ಕರೊನಾ ಹರಡುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು. ಹೊಸದಾಗಿ ಬಂದವರನ್ನು ಎಷ್ಟೇ ತಪಾಸಣೆಗೆ ಒಳಪಡಿಸಿದರೂ ಸೋಂಕು ಹರಡುವುದಿಲ್ಲ ಎಂದು ಖಚಿತವಾಗಿ ಹೇಳುವಂತಿಲ್ಲ. ಈ ಕಾರಣಗಳಿಗಾಗಿ ಜೈಲಿನ ‘ಕೈದಿ ದಟ್ಟಣೆ’ ಕಡಿಮೆ ಮಾಡುವ ಚಿಂತನೆ ನಡೆದಿದೆ.

    ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ 2000 ಕೈದಿಗಳನ್ನು ಇರಿಸಬಹುದು. ಆದರೆ, ಇಲ್ಲಿರುವ ಕೈದಿಗಳ ಸಂಖ್ಯೆ 4500ಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ಕೈದಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ.
    ಮುಖ್ಯವಾಗಿ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇವರಲ್ಲಿ ಸಣ್ಣಪುಟ್ಟ ಕಳ್ಳತನ, ಸುಲಿಗೆ, ದರೋಡೆ, ಗಮನ ಬೇರೆಡೆ ಸೆಳೆದು ಕಳ್ಳತನ ಮೊದಲಾದ ಪ್ರಕರಣಗಳಲ್ಲಿ ಜೈಲು ಸೇರಿದವರನ್ನು ಬಿಡುಗಡೆ ಮಾಡಲಾಗುತ್ತಿದೆ.

    ಪೊಲೀಸರ ದೌಡು: ವಿಚಾರಣಾಧೀನಕೈದಿಗಳ ಮಾಹಿತಿಯನ್ನು ಹಿಡಿದು ನಗರದ 80ಕ್ಕೂ ಅಧಿಕ ಠಾನೆಗಳ ಪೊಳಿಸರು ಜೈಲಿಗೆ ಭೇಟಿ ನೀಡಿದ್ದಾರೆ. ಈ ಮಾಹಿತಿ ಅನುಗುಣವಾಗಿ 500ಕ್ಕೂ ಅಧಿಕ ಜನರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಮದು ಪೊಲೀಸ್​ ಮೂಲಗಳು ತಿಳಿಸಿವೆ.

    ಕರೊನಾ ವಿರುದ್ಧ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿ ಮಡಿದರೆ 1 ಕೋಟಿ ರೂ. ಪರಿಹಾರ

    ಕೆಲವೆಡೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 65 ರೂ. ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts