More

    ಕರೊನಾ ಗೆದ್ದ ಒಂದೇ ಕುಟುಂಬದ 18 ಜನ

    ಸಿದ್ದಾಪುರ: ತಾಲೂಕಿನ ಸರಕುಳಿಯ ಒಂದೇ ಕುಟುಂಬದ ಹದಿನೆಂಟು ಜನರು ಮನೆಯಲ್ಲಿಯೇ (ಹೋಂ ಐಸೋಷನ್​ನಲ್ಲಿದ್ದು) ಚಿಕಿತ್ಸೆ ಪಡೆದು ಕರೊನಾದಿಂದ ಗುಣವಾಗಿದ್ದಾರೆ.
    ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಸರಕುಳಿಯ ಅವಿಭಕ್ತ ಕುಟುಂಬದವರಾದ ಲೋಕೇಶ್ವರ ಹೆಗಡೆ ಸರಕುಳಿ ಹಾಗೂ ಇನ್ನುಳಿದ 17 ಜನರಿಗೂ ಕರೊನಾ ದೃಢವಾಗಿತ್ತು. ಮೇ 4ರಂದು ಮನೆಯ ಹಿರಿಯ ಮಹಿಳೆ ಭವಾನಿ ಲೋಕೇಶ್ವರ ಹೆಗಡೆ ಅವರಿಗೆ ಜ್ವರ, ಮೈ ಕೈ ನೋವು ಕಾಣಿಸಿತ್ತು. ಅವರು ಹೇರೂರು ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಪರೀಕ್ಷೆ ಮಾಡಿಸಿದಾಗ ಕರೊನಾ ಪಾಸಿಟಿವ್ ಇರುವುದು ಖಚಿತಗೊಂಡಿತ್ತು. ಆಗ ಆರೋಗ್ಯ ಕೇಂದ್ರವರು ಮನೆಯ ಎಲ್ಲ ಸದಸ್ಯರನ್ನೂ ಪರೀಕ್ಷಿಸಿದಾಗ ಎಲ್ಲರಿಗೂ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಎಲ್ಲ ಸದಸ್ಯರು ಎದೆಗುಂದದೆ ಧೈರ್ಯದಿಂದ ಮನೆಯಲ್ಲಿಯೇ ಸರ್ಕಾರದ ನಿಯಮಾವಳಿ ಪಾಲನೆಯೊಂದಿಗೆ ಚಿಕಿತ್ಸೆ ಪಡೆದು ಗುಣವಾಗಿದ್ದಾರೆ.
    ಮನೆಯಲ್ಲಿ 4 ಮಕ್ಕಳು, 20 ವರ್ಷ ಮೇಲ್ಪಟ್ಟವರು 6 ಹಾಗೂ 40 ರಿಂದ 62ವರ್ಷದೊಳಗಿನ 8 ಜನರಿದ್ದಾರೆ. ಎಲ್ಲರೂ ಮನೆಯಲ್ಲಿ ನಿತ್ಯ ಮಾಸ್ಕ್ ಧರಿಸಿಕೊಂಡು ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಜತೆಗೆ ಆರೋಗ್ಯ ಇಲಾಖೆಯವರು ನೀಡಿದ ಔಷಧ ಸೇವಿಸಿ ಕರೊನಾ ಗೆದ್ದಿದ್ದಾರೆ.
    ತಹಸೀಲ್ದಾರ್ ಪ್ರಸಾದ ಎಸ್.ಎ., ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಇವರ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ್ದಾರೆ ಎಂದು ಕರೊನಾ ಸೋಂಕಿನಿಂದ ಮುಕ್ತರಾದ ಮಂಜುನಾಥ ರಾಮಚಂದ್ರ ಹೆಗಡೆ ಹೇಳುತ್ತಾರೆ.

    ಮನೆಯ ಎಲ್ಲ ಸದಸ್ಯರಿಗೆ ಕರೊನಾ ಸೋಂಕು ದೃಢವಾಗಿತ್ತು. ನಾವು ಯಾರೂ ಹೆದರಲಿಲ್ಲ. ಸರ್ಕಾರದ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ರೋಗ ಬಂದಿದೆ ಎಂದು ಯಾರೂ ಹೆದರುವುದು ಬೇಡ. ಸರಿಯಾಗಿ ಊಟ ಮಾಡಿ, ಔಷಧ ಸೇವಿಸಿದರೆ ಬೇಗ ಗುಣವಾಗಬಹುದು.
    | ಲೋಕೇಶ್ವರ ರಾಮಚಂದ್ರ ಹೆಗಡೆ ಹಾಗೂ ಮಂಜುನಾಥ ರಾಮಚಂದ್ರ ಹೆಗಡೆ ಸರಕುಳಿ

    ಆಶಾ ಕಾರ್ಯಕರ್ತೆಯರು ಮನೆಗೆ ನಿತ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದರು. ನಾನು ಸಹ ಎರಡು ಸಲ ಭೇಟಿ ನೀಡಿ ಆರೋಗ್ಯ ವಿಚಾರಿದ್ದೇನೆ. ಈಗ ಎಲ್ಲರೂ ಗುಣವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ.
    | ಡಾ. ದಿಶಾ
    ಹೇರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts