More

    ವಿಘ್ನ ವಿನಾಶಕ ಗಣೇಶನಿಗೆ ಕರೊನಾ ವಿಘ್ನ!

    ತಿಪಟೂರು: ಕರೊನಾ ಭೀತಿಯಿಂದ ಜನಸಂದಣಿ ನಿಯಂತ್ರಿಸಲು ಹಬ್ಬ, ಮದುವೆ, ವಿವಿಧ ಸಮಾರಂಭಗಳಿಗೆ ಸರ್ಕಾರ ನಿರ್ಬಂಧ ವಿಧಿಸಿರುವುದರಿಂದ ಗಣೇಶ ಹಬ್ಬದ ವೇಳೆ ಜೀವನೋಪಾಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಮೂರ್ತಿ ತಯಾರಕರು ಕಂಗಾಲಾಗಿದ್ದಾರೆ.

    ಆ.22ಕ್ಕೆ ಗಣೇಶನ ಹಬ್ಬ, ಎಲ್ಲೆಡೆ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತದೆ. ವಂಶ ಪಾರಂಪರ‌್ಯವಾಗಿ ಮೂರ್ತಿ ತಯಾರಿಕೆಯನ್ನು ಕುಲ ಕಸುಬಾಗಿಸಿಕೊಂಡಿರುವ ಕುಂಬಾರ ಕುಟುಂಬಗಳಿಗೆ ಗಣೇಶ ಚತುರ್ಥಿ ಬಂತೆಂದರೆ ದುಡಿಮೆಗೆ ವಾರ್ಗ ಸಿಕ್ಕ ಸಂತಸ. ಆಗಸ್ಟ್ ತಿಂಗಳಲ್ಲಿ ಮಣ್ಣಿನ ಗಣೇಶನ ವಿಗ್ರಹಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತಿತ್ತು. ಆದರೆ ಈ ಸಲ ಕರೊನಾ ನಿರಾಸೆ ಮೂಡಿಸಿದೆ. ಮಣ್ಣಿನ ಗಣೇಶನನ್ನು ತಯಾರಿಸಲು ಎರಡು ತಿಂಗಳು ಮುಂಚೆಯೇ ಜ್ಯೇಷ್ಠ ವಾಸದ ಮೊದಲ ದಿನ ಮೂರ್ತಿ ತಯಾರಕರ ಕೆಲಸ ಶುರುವಾಗುತ್ತದೆ.

    ಗುಣಮಟ್ಟದ ಮಣ್ಣಿಗಾಗಿ ನಿರ್ದಿಷ್ಟ ಜಾಗ ಗುರುತಿಸಿಕೊಂಡಿರುವ ತಯಾರಕರು ಪ್ರತೀ ಟ್ರ್ಯಾಕ್ಟರ್ ಮಣ್ಣಿಗೆ ಇಂತಿಷ್ಟು ಎಂದು ಆಯಾ ಗ್ರಾಮದ ದೇವಸ್ಥಾನಗಳಿಗೆ ದೇಣಿಗೆ ನೀಡಿ ಮಣ್ಣು ತರಬೇಕು. ಕೆಲವೆಡೆ ಒಂದು ಲೋಡ್ ಮಣ್ಣಿಗೆ 500 ರಿಂದ ಸಾವಿರ ರೂಪಾಯಿ ನಿಗದಿಪಡಿಸಲಾಗಿದ್ದು, ಟ್ರ್ಯಾಕ್ಟರ್ ಬಾಡಿಗೆ ಮತ್ತು ಆಳಿನ ಕೂಲಿ ಕೊಡಬೇಕು. ಒಂದು ಟನ್ ಗಾತ್ರದ ಮೂರ್ತಿ ತಯಾರಿಸಲು ಕನಿಷ್ಠ ಒಂದು ವಾರ ಬೇಕು. ನಂತರ 15 ದಿನ ನೆರಳಿನಲ್ಲಿ ಒಣಗಿಸಿ, ಗ್ರಾಹಕರ ಬೇಡಿಕೆಗನುಗುಣವಾಗಿ ಬಣ್ಣ ಬಳಿದು ಅಂತಿಮ ಸ್ಪರ್ಶ ನೀಡಬೇಕು. ಸರ್ಕಾರದ ಅದೇಶದಂತೆ ಪಿಒಪಿ, ರಾಸಾಯನಿಕ ಬಣ್ಣ ಬಳಸದೆ, ನೈಸರ್ಗಿಕ ಬಣ್ಣ ಬಳಸುವುದು ಕಡ್ಡಾಯ.

    ಬೇಡಿಕೆ ಕುಸಿತ: ಮೂರ್ತಿ ತಯಾರಕರಿಗೆ ವ್ನಿ ಕಾಡುತ್ತಿದೆ. ಸಾಮೂಹಿಕ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ಕೊಡುವುದು ಅನುವಾನ. ಇದಕ್ಕೆ ಪೂರಕವೆಂಬಂತೆ ಇಲ್ಲಿವರೆಗೂ ಮೂರ್ತಿ ತಯಾರಿಸುವವರ ಬಳಿ ಯಾರೊಬ್ಬರೂ ಸುಳಿದಿಲ್ಲ. ಆದರೂ ಕುಲ ಕಸುಬು ನೆಚ್ಚಿಕೊಂಡಿರುವ ಇವರು ಅಕಸ್ಮಾತ್ ಬೇಡಿಕೆ ಬಂದರೂ ಬರಬಹುದೆಂಬ ಆಶಾಭಾವದಿಂದ ಗಣೇಶನನ್ನು ತಯಾರಿಸಿ, ಬಣ್ಣದ ಕೆಲಸ ಬಾಕಿ ಇಟ್ಟುಕೊಂಡು ಗ್ರಾಹಕರಿಗಾಗಿ ಕಾಯುತ್ತಿದ್ದಾರೆ. ಸರ್ಕಾರ ಗೊಂದಲ ನಿವಾರಿಸಿ ವಾರ್ಗಸೂಚಿ ರೂಪಿಸಬೇಕಿದೆ.

    ಕುಲ ಕಸುಬು ಬಿಡಬಾರದೆಂದು ಇರುವ ಒಬ್ಬ ಮಗನನ್ನೂ ಈ ಕಾಯಕದಲ್ಲಿ ತೊಡಗಿಸಿದ್ದೇನೆ. ಅರ್ಧದಷ್ಟು ಮೂರ್ತಿಗಳನ್ನು ತಯಾರಿಸಲಾಗಿದೆ, ಇಲ್ಲಿವರೆಗೆ ಒಬ್ಬರೂ ಇತ್ತ ಸುಳಿದಿಲ್ಲ. ಹೂಡಿರುವ ಬಂಡವಾಳ ಕೈ ತಪ್ಪುವ ಭೀತಿ ಕಾಡುತ್ತಿದೆ.
    ಯೋಗಾನಂದ ಮೂರ್ತಿ ತಯಾರಕ, ಕೊಪ್ಪ ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts