More

    ಕರೊನಾ ಸೇನಾನಿಗಳ ಸೇವೆ ಅನನ್ಯ- ಜಿಪಂ ಸದಸ್ಯ ಅಮರೇಗೌಡ ವಿರುಪಾಪುರ ಬಣ್ಣನೆ

    ಸಿಂಧನೂರು: ರಾಯಚೂರು ಜಿಲ್ಲೆಯಲ್ಲಿ ಯಾವುದೇ ಕರೊನಾ ಪ್ರಕರಣಗಳು ವರದಿಯಾಗಿಲ್ಲ. ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯ ಸೇವೆ ಅನನ್ಯವಾಗಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಜಿಪಂ ಸದಸ್ಯ ಅಮರೇಗೌಡ ವಿರುಪಾಪುರ ಹೇಳಿದರು.

    ನಗರದಲ್ಲಿ ಕಿರಿಯ ಆರೋಗ್ಯ ಸಹಾಯಕರಿಗೆ ಸನ್ಮಾನ ಹಾಗೂ ಆಶಾಕಾರ್ಯಕರ್ತೆಯರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದರು. ಮುಂದುವರಿದ ರಾಷ್ಟ್ರಗಳಲ್ಲೂ ಕರೊನಾ ವೈರಸ್ ತಾಂಡವವಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಧಿಟ್ಟ ನಿರ್ಧಾರದಿಂದ ಬಹುಜನಸಂಖ್ಯೆಯುಳ್ಳ ದೇಶದಲ್ಲಿ ಕೋವಿಡ್-19 ನಿಯಂತ್ರಣದಲ್ಲಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಕಾರ್ಯವೂ ಉತ್ತಮವಾಗಿದೆ ಎಂದರು.

    ಬಿಜೆಪಿ ಮುಖಂಡರಾದ ಶರಣೇಗೌಡ ಹೊಸಳ್ಳಿ, ವಕೀಲ ವೀರಭದ್ರಪ್ಪ, ಮಲ್ಲಿಕಾರ್ಜುನ ಜೀನೂರು, ಮಲ್ಲಿಕಾರ್ಜುನ ಭೀಮರಾಜಕ್ಯಾಂಪ್, ಜಡಿಯಪ್ಪ ಹೂಗಾರ, ರೇಣುಕಪ್ಪ ಹಾಗೂ ಇತರರು ಇದ್ದರು.

    ಗಾಂಧಿನಗರ: ಜಾಲಿಹಾಳ ಜಿಪಂ ಕ್ಷೇತ್ರ ವ್ಯಾಪ್ತಿಯ ಗಾಂಧಿನಗರದಲ್ಲಿ ಕೋವಿಡ್-19 ಕರೊನಾ ಸೇನಾನಿಗಳಾದ ವೈದ್ಯರು, ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ ಆಹಾರ ಸಾಮಾಗ್ರಿ ಕಿಟ್‌ಗಳನ್ನು ವಿತರಿಸಿದರು. ವೆಂಕಟೇಶ್ವರಾವ್, ಎಂ.ಭಾಸ್ಕರ್‌ರಾವ್, ವೆಂಕಣ್ಣ, ಎನ್.ಸುಬ್ಬಾರಾವ್, ಜಯರಾಜ, ಶ್ರೀನಿವಾಸ ರಂಗಾಪುರಕ್ಯಾಂಪ್, ಪ್ರಹ್ಲಾದ, ದೊರಬಾಬು, ವೀರೇಶ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts