More

    VIDEO| ಮಾಸ್ಕ್ ಸಿಕ್ತಿಲ್ವಾ ಡೋಂಟ್ ವರಿ, ಆನಂದ್ ಮಹಿಂದ್ರಾ ಹಂಚಿಕೊಂಡಿರುವ ಈ ವಿಡಿಯೋ ನೋಡಿ ನೀವೇ ಮಾಡ್ಕೊಳ್ಳಿ..

    ಮುಂಬೈ: ಮಾರಕ ಕರೊನಾ ವೈರಸ್​ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್​ (ಮುಖವಾಡ) ಧರಿಸುವುದು ಸಾಮಾನ್ಯ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್​ಗಳಿಗೆ ಅಧಿಕ ಬೇಡಿಕೆ ವ್ಯಕ್ತವಾಗಿದೆ. ಅಲ್ಲದೆ ಅದರ ಬೆಲೆ ದುಬಾರಿಯಾಗಿರುವುದರಿಂದ ಕೆಲವರು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ.

    ಮನೆಯಲ್ಲೇ ಯುವತಿ ಸರಳವಾಗಿ ಮಾಸ್ಕ್​ ತಯಾರಿಸುವ ವಿಧಾನದ ವಿಡಿಯೋ ಒಂದನ್ನು ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ವಿಡಿಯೋ ಅಪ್​ಲೋಡ್​ ಆದ ಕೆಲವೇ ನಿಮಿಷಗಳಲ್ಲಿ ಅಧಿಕ ಮಂದಿಯನ್ನು ತಲುಪಿದೆ.
    ವಿಡಿಯೋದಲ್ಲಿ ಏನಿದೆ? ಯುವತಿ ಟಿಶ್ಯೂ ಪೇಪರ್​ ಒಂದನ್ನು ತೆಗೆದುಕೊಂಡು ಅದನ್ನು ಮಡಚಿಕೊಳ್ಳುತ್ತಾರೆ. ಬಳಿಕ 2 ರಬ್ಬರ್​ ಬ್ಯಾಂಡ್​ ಅನ್ನು ಟಿಶ್ಯೂ ಪೇಪರ್​ಗೆ ಸಿಕ್ಕಿಸಿ ಸ್ಟ್ಯಾಪ್ಲರ್​ನಿಂದ ಪಿನ್​ ಮಾಡುತ್ತಾರೆ. ಇಲ್ಲಿಗೆ ಮಾಸ್ಕ್​ ಸಿದ್ಧಗೊಳ್ಳುತ್ತದೆ. ಬಳಿಕ ಅದನ್ನು ಧರಿಸುತ್ತಾರೆ.

    ಸರಳವಾಗಿ ಮಾಸ್ಕ್​ ತಯಾರಿಸುವ ಮಾಹಿತಿ ನೀಡಿದ ಉದ್ಯಮಿ ಆನಂದ್​ ಮಹೀಂದ್ರಾ ಅವರಿಗೆ ವಿಡಿಯೋ ವೀಕ್ಷಣೆ ಮಾಡಿದವರು ಧನ್ಯವಾದ ಅರ್ಪಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts