More

    ಆಸ್ಪತ್ರೆಗಳಿಗಾಗಿ ಆರಂಭಿಸಿದ ಹೆಲ್ಪ್​ಲೈನ್​ಗೆ ಸಾರ್ವಜನಿಕರದ್ದೇ ಕರೆ! ಕಾಲ್ ಸೆಂಟರ್ ಸಿಬ್ಬಂದಿಗೆ ತಲೆನೋವು

    ಬೆಂಗಳೂರು: ರಾಜ್ಯದಲ್ಲಿ ಆಕ್ಸಿಜನ್ ಹಾಗೂ ರೆಮಿಡಿಸಿವಿಯರ್ ಇನ್ಜೆಕ್ಷನ್ ಕೊರತೆ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರಿಗೆ ಇವುಗಳನ್ನು ಸಮಪರ್ಕವಾಗಿ ಪೂರೈಸಲು ಸರ್ಕಾರ ಕಾಲ್ ಸೆಂಟರ್ 89517 55722 ಪ್ರಾರಂಭಿಸಿದೆ. ಆದರೆ ಇದಕ್ಕೆ ಆಸ್ಪತ್ರೆಗಳ ಬದಲಿಗೆ ಸಾರ್ವಜನಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಕರೆ ಮಾಡಿ ಅನ್ಯ ಮಾಹಿತಿಗಳನ್ನು ಕೇಳುತ್ತಿದ್ದಾರೆ. ಇದರಿಂದ ಕಾಲ್ ಗಳು ಜಾಮ್ ಆಗಿ ಕಾಲ್ ಸೆಂಟರ್ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

    ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆ ಆಕ್ಸಿಜನ್ ಹಾಗೂ ರೆಮಿಡಿಸಿವಿಯರ್ ಇನ್ಜೆಕ್ಷನ್ ಕೊರತೆ ಉಂಟಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹಾಗೂ ಕೆಲವರು ಪ್ರಾಣ ಕಳೆದುಕೊಂಡ ಘಟನೆಗಳೂ ಸಂಭವಿಸಿತ್ತು. ಹಾಗಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತ ರೋಗಿಗಳಿಗೆ ಸಕಾಲದಲ್ಲಿ ಆಕ್ಸಿಜನ್ ಹಾಗೂ ರೆಮಿಡಿಸಿವಿಯರ್ ಇನ್ಜೆಕ್ಷನ್ ಪೂರೈಕೆ ಮಾಡಲು ಗುರುವಾರ ಕಾಲ್ ಸೆಂಟರ್ ಪ್ರಾರಂಭಿಸಿದೆ. ಇದು ಆರಂಭವಾದ ಮೊದಲ ದಿನವೇ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕರೆ ಮಾಡುತ್ತಿದ್ದಾರೆ. ಹಾಗಾಗಿ ಆಸ್ಪತ್ರೆಯವರು ಇದರ ಸೌಲಭ್ಯ ಪಡೆಯಲು ಸಮಸ್ಯೆಯಾಗಿದೆ.

    ಕಾಲ್ ಸೆಂಟರ್​ಗೆ ಕರೆ ಮಾಡುತ್ತಿರುವ ಸಾರ್ವಜನಿಕರು ತಮಗೆ ನೆಗಡಿ ಕೆಮ್ಮು ಇದೆ ಏನು ಮಾಡಬೇಕು, ಎಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು, ಪರೀಕ್ಷೆಯ ವರದಿ ಎಲ್ಲಿ ಸಿಗುತ್ತದೆ. ಹಾಸಿಗೆ ಒದಗಿಸಿಕೊಡಿ, ನಮ್ಮ ಮನೆಯಲ್ಲಿ ಉಸಿರಾಟದ ತೊಂದರೆ ಇರುವವರು ಇದ್ದಾರೆ ಹಾಗಾಗಿ ಆಕ್ಸಿಜನ್ ಕಳುಹಿಸಿ ಕೊಡಿ ಹೀಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ನಿರಂತರ ಕರೆಗಳು ಬರುತ್ತಿದ್ದು, ಕಾಲ್ ಗಳು ಜಾಮ್ ಆಗಿ ಆಸ್ಪತ್ರೆಯವರು ಸೌಲಭ್ಯ ಪಡೆಯಲು ಹೆಣಗಾಡುವಂತಾಗಿದ್ದರೆ. ಅತ್ತ ಕಾಲ್ ಸೆಂಟರ್ ಸಿಬ್ಬಂದಿ ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪರದಾಡುವಂತಾಗಿದೆ.

    ಯಾವುದಕ್ಕೆ ಯಾರಿಗೆ ಕರೆ ಮಾಡಬೇಕು ಇಲ್ಲಿದೆ ಮಾಹಿತಿ:
    * ಆಕ್ಸಿಜನ್ ಹಾಗೂ ರೆಮಿಡಿಸಿವಿಯರ್ ಇನ್ಜೆಕ್ಷನ್​ಗಾಗಿ (ಆಸ್ಪತ್ರೆಗಳಿಗೆ ಮಾತ್ರ) ಕಾಲ್ ಸೆಂಟರ್ 89517 55722
    * ಕೋವಿಡ್ ಗೆ ಸಂಬಂಧಿಸಿದ ವಿಚಾರಣೆಗಳಿಗೆ ಕೋವಿಡ್ ಪರೀಕ್ಷಾ ಕೇಂದ್ರಗಳು, ಕೋವಿಡ್ ಲಸಿಕೆ ನೀಡಿಕೆ ಕೇಂದ್ರಗಳು, ಕೋವಿಡ್ ಲಕ್ಷಣಗಳ ಕುರಿತು ವೈದ್ಯಕೀಯ ಸಲಹೆಗಳಿಗಾಗಿ ಆಪ್ತಮಿತ್ರ ಸಹಾಯವಾಣಿ 14410 ಗೆ ಕರೆ ಮಾಡಿ.
    * ತುರ್ತು ಪ್ರಕರಣಗಳಿಗಾಗಿ ಆಂಬ್ಯುಲೆನ್ಸ್ ಸೌಲಭ್ಯ ಮತ್ತು ಕೋವಿಡ್ -19 ರೋಗಿಗಳನ್ನು ಅಂತರ್ ಆಸ್ಪತ್ರೆಗೆ ಸ್ಥಳಾಂತರ ಸಹಾಯವಾಣಿ 108ಕ್ಕೆ ಕರೆ ಮಾಡಿ.
    * ಬೆಂಗಳೂರುನ ವಾಸಿಗಳು ಕೋವಿಡ್ ಗೆ ಸಂಬಂಧಿಸಿದ ಮಾಹಿತಿಗಾಗಿ 1912ಕ್ಕೆ ಕರೆ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts