More

    ಕರೊನಾ ವೈರಸ್ ಬಗ್ಗೆ ಭಯ ಬೇಡ, ಜಾಗೃತಿ ಇರಲಿ- ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಸಲಹೆ

    ಕೊಪ್ಪಳ: ದಿನ ಕಳೆದಂತೆ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಭಯಪಡುವ ಬದಲು ನಾವೆಲ್ಲ ಜಾಗ್ರತೆವಹಿಸುವ ಮೂಲಕ ರೋಗ ಹಿಮ್ಮೆಟ್ಟಿಸೋಣ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಹೇಳಿದರು. ನಗರದಲ್ಲಿ ಗುರುವಾರ ವಿವಿಧ ಅಂಗಡಿಗಳಿಗೆ ಸ್ಯಾನಿಟೈಸರ್ ಬಳಕೆ ಸ್ಟ್ಯಾಂಡ್ ವಿತರಿಸಿ ಮಾತನಾಡಿದರು.

    ಮಹಾಮಾರಿ ಕರೊನಾದಿಂದ ದೇಶ ಆರ್ಥಿಕ ಸಂಕಷ ಎದುರಿಸುತ್ತಿದೆ. ಇದೇ ಸಮಯದಲ್ಲಿ ಗಡಿಯಲ್ಲಿ ಚೀನಾ ಹಾಗೂ ಪಾಕಿಸ್ತಾನ ಕ್ಯಾತೆ ತೆಗೆಯುತ್ತಿವೆ. ಇವೆಲ್ಲವನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥವಾಗಿ ಎದುರಿಸುತ್ತಿದ್ದಾರೆ. ರಾಜ್ಯದಲ್ಲೂ ಸಿಎಂ ಬಿಎಸ್‌ವೈ ಕರೊನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲೂ ಅಧಿಕಾರಿಗಳು, ಪೊಲೀಸರು, ಆಶಾಕಾರ್ಯಕರ್ತೆಯರು, ಡಾಕ್ಟರ್‌ಗಳು, ದಾದಿಯರು, ಅಂಗನವಾಡಿ ಶಿಕ್ಷಕಿಯರು, ಮಾಧ್ಯಮದವರು ನಮಗಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವೂ ಅವರಿಗೆ ಸಹಕಾರ ನೀಡಬೇಕು. ಜನರು ಕಡ್ಡಾಯವಾಗಿ ಸ್ಯಾನಿಟೈಜರ್ ಬಳಕೆ ಮಾಡಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಿದರು. ನಗರದ ವಿವಿಧ ಅಂಗಡಿಗಳಿಗೆ ಸ್ಟ್ಯಾಂಡ್ ವಿತರಿಸಲಾಯಿತು.

    ಡಾ.ಲಿಂಗರಾಜ್ ಶಿವರೆಡ್ಡಿ, ಡಾ.ಶ್ರೀನಿವಾಸ ಹ್ಯಾಟಿ, ಮುಖಂಡರಾದ ಹಾಲೇಶ ಕಂದಾರಿ, ದೇವರಾಜ ಹಾಲಸಮುದ್ರ, ಅರವಿಂದ್ ಜೈನ್, ಉಮೇಶ ಕುರುಡೇಕರ್, ಪ್ರವೀಣ ಇಟಗಿ, ವೆಂಕಟೇಶ ಹವಳೆ, ಹನು ಕಲೆಗಾರ, ವಿಠ್ಠಲ ಕಟ್ಟಿಮನಿ, ಶಿವಕುಮಾರ ಹಿರೇಮಠ, ಮೆಹಬೂಬ್, ಲೋಕೇಶ, ಅಂಬರೀಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts