More

    VIDEO| ಕೊರೊನಾ ವೈರಸ್​ ಎಫೆಕ್ಟ್​: ಖಾಲಿ ಸಂಚರಿಸುತ್ತಿವೆ ಕೆಎಸ್​ಆರ್​ಟಿಸಿ ಬಸ್​ಗಳು

    ಬೆಂಗಳೂರು: ಮಾರಕ ಕೊರೊನಾ ವೈರಸ್​ ಸೋಂಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಹಿವಾಟಿಗೆ ದೊಡ್ಡ ಪೆಟ್ಟು ನೀಡಿದೆ.

    ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್​ ಸೋಂಕು ಹೊಂದಿರುವ ವ್ಯಕ್ತಿ ಪತ್ತೆಯಾದ ನಂತರ ರಾಜ್ಯದ ವಿವಿಧ ಕಡೆಗಳಲ್ಲಿ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ಶೇ.50 ಕುಸಿದಿದೆ. ಬೆಂಗಳೂರಿಗೆ ತೆರಳಿದರೆ ವೈರಸ್​ ಸೋಂಕು ಹರಡಬಹುದು ಎಂದು ಪ್ರಯಾಣಿಕರು ಪ್ರಯಾಣವನ್ನು ಮುಂದೂಡುತ್ತಿದ್ದಾರೆ. ಇದರಿಂದ ಬಸ್​ಗಳು ಖಾಲಿಯಾಗಿ ಸಂಚರಿಸುತ್ತಿವೆ ಎಂದು ಕೆಎಸ್​ಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಬುಕ್ಕಿಂಗ್​ ಕೂಡ ಕುಸಿತ: ವೋಲ್ವೋ ಹಾಗೂ ರಾಜಹಂಸ ಬಸ್​ಗಳ ಟಿಕೆಟ್​ ಬುಕಿಂಗ್​ ಕೂಡ ಕುಸಿದಿದೆ. ವಿವಿಧ ಜಿಲ್ಲಾ ಕೇಂದ್ರಗಳಿಂದ ಪ್ರತಿನಿತ್ಯ ಅಂದಾಜು 15 ಸೀಟುಗಳು ಬುಕ್ಕಿಂಗ್​ ಆಗುತ್ತಿದ್ದರೇ ಈಗ ಕೇವಲ 4ರಿಂದ 5 ಸೀಟುಗಳು ಮಾತ್ರ ಬುಕ್ಕಿಂಗ್ ಆಗತ್ತಿವೆ. ಅಡ್ವಾನ್ಸ್​ ಬುಕ್ಕಿಂಗ್​ ಕೂಡ ಆಗುತ್ತಿಲ್ಲ. (ದಿಗ್ವಿಜಯ ನ್ಯೂಸ್​)

    ಮಾಸ್ಕ್​ ಕಾಮಣ್ಣನಿಗೆ ಹೋಳಿ ಪೂಜೆ; ದಹನವಾಗುತ್ತಿದ್ದಾಗಲೂ ಬಾಯಿ, ಮೂಗು ಮುಚ್ಚಿಕೊಂಡೇ ಇದ್ದ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts