More

    ಕರೊನಾ ವೈರಸ್​ ಸೋಂಕು ದಾಳಿಗೆ ತತ್ತರಿಸಿದ ಕುಕ್ಕೋಟದ್ಯಮ: ಮಾಂಸದ ಬೆಲೆಯಲ್ಲಿ ತೀವ್ರ ಕುಸಿತ

    ಬೆಂಗಳೂರು: ಕರೊನಾ ವೈರಸ್​ ಸೋಂಕಿಗೆ ಕುಕ್ಕುಟೋದ್ಯಮ ತತ್ತರಿಸಿ, ಮಾಂಸ ಮಾರಾಟ ತೀವ್ರವಾಗಿ ಕುಸಿತ ಕಂಡಿದೆ.

    ಕೋಳಿಗೆ ಕರೊನಾ ವೈರಸ್​ ತಗುಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಮಾಂಸಹಾರಿಗಳು ಕೋಳಿ ಮಾಂಸ ಸೇವನೆ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದರಿಂದ ಮಾರಾಟದಲ್ಲಿ ಕುಸಿತ ಕಂಡಿದೆ.
    ಅಲ್ಲದೆ ಹಕ್ಕಿಜ್ವರದ ವೈರಸ್​ ಪತ್ತೆಯಾಗಿದೆ ಎನ್ನುವ ವಿಚಾರ ಕೂಡ ಕೋಳಿ ಮಾಂಸ ಮಾರಾಟದ ಮೇಲೆ ಪರಿಣಾಮ ಬೀರಿದೆ.

    ಬೆಂಗಳೂರು ನಗರದಲ್ಲಿ ಮಾಂಸದ ಬೆಲೆ ಕೆಜಿಗೆ 50ರಿಂದ 60 ರೂಪಾಯಿಗೆ ಇಳಿದಿದೆ. ಅದೆ ರೀತಿ ಶಿವಮೊಗ್ಗ, ಕೋಲಾರ, ಬೆಳಗಾವಿ, ಮಂಗಳೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಜಿ ಕೋಳಿ ಮಾಂಸದ ಬೆಲೆ 20 ರೂ.ನಿಂದ 30 ರೂ.ಗೆ ಕುಸಿದಿದೆ. ಕೆಲವು ಕಡೆ ಉಚಿತವಾಗಿ ಕೋಳಿ ನೀಡಲಾಗುತ್ತಿದೆ.

    ಕೊಪ್ಪಳ, ಬಳ್ಳಾರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಉಚಿತವಾಗಿ ಕೋಳಿ ನೀಡಿದರೂ ಸಾರ್ವಜನಿಕರು ಅದನ್ನು ನಿರಾಕರಿಸುತ್ತಿದ್ದಾರೆ. ಕರೊನಾ ವೈರಸ್​ ಭೀತಿಯಿಂದ ಕೋಳಿ ಮಾಂಸ ತಿನ್ನುವುದನ್ನೇ ತ್ಯಜಿಸಿದ್ದಾರೆ.
    ಕೊಪ್ಪಳ, ಬಳ್ಳಾರಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಜೀವಂತ ಕೋಳಿಗಳನ್ನು ಗುಂಡಿ ತೆಗೆದು ಹೂಳಲಾಗುತ್ತಿದೆ ಎಂದು ತಿಳಿದು ಬಂದಿದೆ.

    ಕರೊನಾ ಕಾಲರ್​ ಟ್ಯೂನ್​ನಿಂದ ತಪ್ಪಿಸಿಕೊಳ್ಳೋದಕ್ಕೆ ಹೀಗೆ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts