More

    ಸಚಿವ ಬಿ.ಸಿ ಪಾಟೀಲ್​ಗೆ ಮನೆಯಲ್ಲೇ ಕರೊನಾ ಲಸಿಕೆ ಪ್ರಕರಣ: ತಾಲೂಕು ವೈದ್ಯಾಧಿಕಾರಿ ಅಮಾನತು!

    ಹಾವೇರಿ: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಕರೊನಾ ಲಸಿಕೆಯನ್ನು ತಮ್ಮ ಮನೆಯಲ್ಲಿಯೇ ಹಾಕಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಕೆರೂರು ತಾಲೂಕಾ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ.

    Z.R ಮಕಾಂದಾರ್ ಅಮಾನತಾಗಿರುವ ಹಿರೇಕೆರೂರು ತಾಲೂಕು ವೈದ್ಯಾಧಿಕಾರಿಯಾಗಿದ್ದಾರೆ. ಭಾರತೀಯ ಆರೋಗ್ಯ ಸೇವಾ ಆಯುಕ್ತ ಕೆ.ವಿ ತ್ರೀಲೋಕ ಚಂದ್ರ ಅವರು ಅಮಾನತು ಮಾಡಿ ಆದೇಶ ಹೋರಡಿಸಿದ್ದಾರೆ

    ಮಾರ್ಚ್ 2 ರಂದು ತಮ್ಮ ಹಿರೇಕೆರೂರು ಮನೆಯಲ್ಲಿ ಕರೊನಾ ವ್ಯಾಕ್ಸಿನ್ ಹಾಕಿಸಿಕೊಂಡು ಕೃಷಿ ಸಚಿವ ಬಿಸಿ ಪಾಟೀಲ್ ಸುದ್ದಿಯಾಗಿದ್ದರು. ಮನೆಗೆ ತೆರಳಿ ತಾಲೂಕಾಸ್ಪತ್ರೆಯ ಸಿಬ್ಬಿಂದಿ ಲಸಿಕೆ ಹಾಕಿದ್ದರು. ಟಿ ಎಚ್ ಓ ಮಕಾಂದಾರ ಸೂಚನೆಯಂತೆ ಸಿಬ್ಬಂದಿ ಲಸಿಕಾ ಕಿಟ್ ಹೊರಗೆ ತಂದಿದ್ದರು.

    ಕರೊನಾ ಲಸಿಕೆ ನಿಯಮಾವಳಿಗಳ ಪ್ರಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲೇ ಲಸಿಕೆ ನೀಡಬೇಕು. ಆದರೆ ಬಿ.ಸಿ ಪಾಟೀಲ್ ಅವರ ವಿಚಾರದಲ್ಲಿ ಕಳೆದ 1 ತಿಂಗಳ ಹಿಂದೆ ಕರ್ತವ್ಯ ಲೋಪ ಎಸಗಿದ್ದರು ತಾಲೂಕು ಆಸ್ಪತ್ರೆ ಸಿಬ್ಬಂದಿ. ಇದಕ್ಕೆ ತಾಲೂಕಾ ಆರೋಗ್ಯಾಧಿಕಾರಿಯ ಬೇಜವಾಬ್ದಾರಿನೇ ಕಾರಣ ಎಂದು ಅಮಾನತು ಮಾಡಲಾಗಿದೆ.

    ಸಿಎಂ ಹಸ್ತಕ್ಷೇಪ ಮಾಡಿಲ್ಲ, ಪ್ರಧಾನಿ, ರಾಜ್ಯಪಾಲರಿಗೆ ದೂರು ನೀಡಿರುವುದು ಸರಿಯಲ್ಲ: ರೇಣುಕಾಚಾರ್ಯ

    ಸಚಿವ ಈಶ್ವರಪ್ಪ ನಡೆಗೆ ಬಸವರಾಜ ಬೊಮ್ಮಾಯಿ ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts