More

    ಬಿಎಂಟಿಸಿ ಸಿಬ್ಬಂದಿಗೆ ಉಚಿತವಾಗಿ ಕರೊನಾ ಲಸಿಕೆ; ರಾಜಧಾನಿಯ ಐದು ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ

    ಬೆಂಗಳೂರು: ಬಿಎಂಟಿಸಿ ನೌಕರರಿಗೆ ಕರೊನಾ ಸೋಂಕು ತಗಲುವುದನ್ನು ತಡೆಯಲು ಮುಂದಾಗಿರುವ ನಿಗಮ, ಎಲ್ಲ ನೌಕರರಿಗೆ ಕರೊನಾ ವ್ಯಾಕ್ಸಿನ್ ಹಾಕಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ಕರೊನಾ ಸೋಂಕಿನ 2ನೇ ಅಲೆ ಶುರುವಾಗುತ್ತಿದೆ. ಹೀಗಾಗಿ ಕರೊನಾ ಸೋಂಕಿನಿಂದ ರಕ್ಷಿಸಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜನರಿಗೆ ಸರ್ಕಾರ ತಿಳಿಸುತ್ತಿದೆ. ಅದರ ಜತೆಗೆ ತುರ್ತು ಮತ್ತು ಅಗತ್ಯ ಸೇವೆ ಅಡಿಯಲ್ಲಿ ಕೆಲಸ ಮಾಡುವವರಿಗೆ ಕರೊನಾ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಅದರನ್ವಯ ಬಿಎಂಟಿಸಿ ಸಿಬ್ಬಂದಿಗೆ ಲಸಿಕೆ ನೀಡುವುದಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಉಚಿತ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

    ಸರ್ಕಾರ ನಿಗದಿ ಮಾಡಿರುವ 5 ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ತೆಗೆದುಕೊಳ್ಳಬಹುದು. ಜಯನಗರ ಸಾರ್ವಜನಿಕ ಆಸ್ಪತ್ರೆ, ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ, ಇಂದಿರಾನಗರದ ಸಿ.ವಿ. ರಾಮನ್ ಸರ್ಕಾರಿ ಆಸ್ಪತ್ರೆ, ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಹಾಗೂ ಯಲಹಂಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು. ಲಸಿಕೆ ಹಾಕಿಸಿಕೊಳ್ಳಲು ತೆರಳುವ ಸಂದರ್ಭದಲ್ಲಿ ಬಿಎಂಟಿಸಿ ಸಿಬ್ಬಂದಿ ಸಂಸ್ಥೆಯ ಗುರುತಿನ ಚೀಟಿ ಅಥವಾ ಬಸ್ ಪಾಸ್ ಹಾಗೂ ಆಧಾರ್‌ಕಾರ್ಡ್, ಪ್ಯಾನ್ ಕಾರ್ಡ್‌ಗಳನ್ನು ತೆಗೆದುಕೊಂಡು ಹೋಗಬೇಕು.

    ಪಾರ್ಟಿ-ಸಮಾರಂಭ ಅಂತ ಕರೊನಾ ರಿಯಾಯಿತಿ ನೀಡಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ

    ತಿಂಡಿ ತಿನ್ನುವಾಗ ಹೃದಯಾಘಾತಕ್ಕೆ ಒಳಗಾಗಿ ಕೆಎಸ್​ಆರ್​ಟಿಸಿ ಕಂಡಕ್ಟರ್​ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts