More

    ಲಂಡನ್​ನಿಂದ ಬಂದವರ ವರದಿ ನೆಗೆಟಿವ್

    ಶಿವಮೊಗ್ಗ: ಕರೊನಾ ಹೊಸ ಸ್ವರೂಪ ಪಡೆದಿರುವ ಆತಂಕದ ಬೆನ್ನಲ್ಲೇ ಲಂಡನ್​ನಿಂದ ಶಿವಮೊಗ್ಗಕ್ಕೆ 23 ಜನ ಆಗಮಿಸಿದ್ದಾರೆ. ಕಳೆದೊಂದು ತಿಂಗಳಿಂದ ಸೋಂಕಿತರ ಪ್ರಮಾಣ ಕಡಿಮೆಯಾಗಿ ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

    ಶಿವಮೊಗ್ಗ ತಾಲೂಕಿಗೆ 12, ಭದ್ರಾವತಿಗೆ ಮೂವರು, ಸಾಗರ ಮತ್ತು ತೀರ್ಥಹಳ್ಳಿ ತಲಾ ನಾಲ್ವರು ಲಂಡನ್​ನಿಂದ ಬಂದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳೆದೊಂದು ವಾರದಿಂದ ಬಂದವರ ಪತ್ತೆ ಕಾರ್ಯ ಮಾಡುತ್ತಿದೆ. ಸದ್ಯ ಎಲ್ಲರ ವರದಿಗಳು ನೆಗೆಟಿವ್ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಹೋಮ್ ಕ್ವಾರಂಟೈನ್​ಗೆ ಸೂಚಿಸಲಾಗಿದೆ.

    ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆಗೆ ಪಟ್ಟಿ ರವಾನಿಸಿದ್ದು ಅದರ ಆಧಾರದ ಮೇಲೆ ಸ್ಥಳೀಯ ಅಧಿಕಾರಿಗಳು ಬಂದವರ ವಿಳಾಸ ಪತ್ತೆಹಚ್ಚುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬ್ರಿಟನ್​ನಲ್ಲಿ ಹೊಸ ವಿಧದ ಸಾರ್ಸ್ ಕರೊನಾ-2 ವೈರಸ್ ಕಾಣಿಸಿಕೊಂಡಿದ್ದು, ಅಲ್ಲಿಂದ ವಿಮಾನದ ಮೂಲಕ ನೂರಾರು ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಅದರಲ್ಲಿ 23 ಮಂದಿ ಜಿಲ್ಲೆಗೆ ಬಂದಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    15 ದಿನಗಳಿಂದ ಬಂದವರ ಹುಡುಕಾಟ:

    ಇಂಗ್ಲೆಂಡ್​ನಿಂದ ಬಂದಿರುವವರನ್ನು ಪತ್ತೆಹಚ್ಚಿ ಕ್ವಾರಂಟೈನ್​ಗೆ ಒಳಪಡಿಸುವ ಕೆಲಸದಲ್ಲಿ ಆರೋಗ್ಯ ಇಲಾಖೆ ನಿರತವಾಗಿದೆ. ಅಲ್ಲದೆ ಡಿ.7ರ ನಂತರ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸಿ ಬಂದಿರುವವರ ಹುಡುಕಾಟಕ್ಕೂ ಸಿಬ್ಬಂದಿಗೆ ಸೂಚನೆ ನೀಡಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಸ್ಥಳೀಯರು ತಮ್ಮ ಸುತ್ತಮುತ್ತ ಇಂಗ್ಲೆಂಡ್​ನಿಂದ ಬಂದವರಿದ್ದಾರೆಯೇ ಎಂದು ಹುಡುಕಾಡುತ್ತಿದ್ದಾರೆ.

    ಕಳೆದೊಂದು ವಾರದಿಂದ ಶಿವಮೊಗ್ಗಕ್ಕೆ ಲಂಡನ್​ನಿಂದ 23 ಜನ ಬಂದಿದ್ದಾರೆ. ಲಂಡನ್​ನಲ್ಲಿ ಗಂಟಲು ದ್ರವ ಪರೀಕ್ಷಿಸಿದ್ದು ಅಲ್ಲಿನ ತಪಾಸಣೆ ವರದಿ ನೆಗೆಟಿವ್ ಬಂದಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಹೋಮ್ ಕ್ವಾರೆಂಟೈನ್​ಗೆ ಸೂಚಿಸಲಾಗಿದೆ. ಸ್ಥಳೀಯರು ಆತಂಕಗೊಳ್ಳುವ ಅಗತ್ಯವಿಲ್ಲ.

    | ಡಾ. ರಾಜೇಶ್ ಸುರಗೀಹಳ್ಳಿ, ಡಿಎಚ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts