More

    ಆಗಸ್ಟ್ ಅಂತ್ಯಕ್ಕೆ ಕರೊನಾ ಮೂರನೇ ಅಲೆ! ಎರಡನೇ ಅಲೆಯಷ್ಟು ಭಯಾನಕವಾಗಿರುವುದಿಲ್ಲ ಎಂದ ಐಸಿಎಂಆರ್

    ನವದೆಹಲಿ: ದೇಶದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗಿದ್ದು, ಮೂರನೇ ಅಲೆ ಸದ್ಯದಲ್ಲೇ ಅಪ್ಪಳಿಸಬಹುದು ಎನ್ನುವ ನಿರೀಕ್ಷೆಯೂ ಇದೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಮಾತನಾಡಿದ್ದು, ಆಗಸ್ಟ್ ಅಂತ್ಯದಲ್ಲಿ ಕರೊನಾ ಮೂರನೇ ಅಲೆ ಬರಲಿದೆ ಎಂದು ಹೇಳಿದೆ.

    ಆಗಸ್ಟ್ ಅಂತ್ಯದಲ್ಲಿ ದೇಶದಲ್ಲಿ ಕರೊನಾ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮೂರನೇ ಅಲೆಯ ತೀವ್ರತೆ ಎರಡನೇ ಅಲೆಯ ತೀವ್ರತೆಗಿಂತ ಕೊಂಚ ಕಡಿಮೆ ಇರುತ್ತದೆ ಎಂದು ಐಸಿಎಂಆರ್​ನ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾ.ಸಮೀರನ್ ಪಾಂಡ ಹೇಳಿದ್ದಾರೆ.

    ಮೂರನೇ ಅಲೆಗೆ ನಾಲ್ಕು ಕಾರಣಗಳನ್ನು ಸಮೀರನ್ ತಿಳಿಸಿದ್ದಾರೆ. ಮೊದಲನೆಯದಾಗಿ ಕರೊನಾ ಬಂದು ಹೋಗಿರುವ ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಎರಡನೆಯದು, ಈಗ ಲಸಿಕೆ ಮೂಲಕ ದೇಹಕ್ಕೆ ಕೊಡಲಾದ ರೋಗ ನಿರೋಧಕ ಶಕ್ತಿಯನ್ನು ಕರೊನಾ ರೂಪಾಂತರಗಳು ಬೈಪಾಸ್ ಮಾಡಿಕೊಂಡು ದೇಹ ಸೇರಬಹುದು. ಹಾಗೂ ಅದರ ಹರಡುವಿಕೆ ವೇಗ ಇನ್ನಷ್ಟು ಹೆಚ್ಚಿರಬಹುದು. ನಾಲ್ಕನೆಯದಾಗಿ ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಅನ್​ಲಾಕ್ ಆಗುತ್ತಿದ್ದು, ಜನರ ಓಡಾಟ ಹೆಚ್ಚಿರುವುದರಿಂದ ಸೋಂಕು ಆದಷ್ಟು ಬೇಗ ಹರಡಬಹುದು ಎಂದು ಅವರು ಹೇಳಿದ್ದಾರೆ.

    ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ರೂಪಾಂತರವು ಮೂರನೇ ಅಲೆಗೆ ಕಾರಣವಾಗಬಹುದೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಎರಡು ವೇರಿಯೆಂಟ್​ಗಳಿಂದ ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ತೊಂದರೆ ಉಂಟಾಗುವ ನಿರೀಕ್ಷೆ ಇಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

    ಬೆವರು ಬರಬಾರದೆಂದು ಆಪರೇಷನ್ ಮಾಡಿಸಿಕೊಂಡ ಮಾಡೆಲ್! 23 ವರ್ಷಕ್ಕೇ ಅಂತ್ಯವಾಯಿತು ಬದುಕು!

    ಮಹಿಳೆಯರು ಒಬ್ಬಂಟಿಯಾಗಿ ಸುತ್ತಾಡುವಂತಿಲ್ಲ, ಗಂಡಸರು ಗಡ್ಡ ತೆಗೆಯುವಂತಿಲ್ಲ! ಹೇಗಿರಲಿದೆ ಗೊತ್ತಾ ಅಫ್ಘಾನ್​ನಲ್ಲಿ ತಾಲಿಬಾನ್ ಆಡಳಿತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts